ಅರ್ಧ ಬೇರೆಯವರ ಕಥೆ ಮೇಲೆ ನಮ್ಮ ಜೀವನ ನಡೆಯುತ್ತಿದೆ: ಸುದೀಪ್

Public TV
2 Min Read

-ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಿಚ್ಚನ ಮಾತು

ಬೆಂಗಳೂರು: ಸ್ಯಾಂಡಲ್‍ವುಡ್ ಸ್ಟಾರ್ ಗಳು ಕೊಡಗು ಸಂತ್ರಸ್ತರಿಗೆ ನೆರವಾಗಲು ಅಂತರಾಷ್ಟ್ರೀಯ ಮಟ್ಟದಲ್ಲಿ (ಕೆಸಿಸಿ)ಕನ್ನಡ ಕ್ರಿಕೆಟ್ ಕಪ್ ಆಟವನ್ನು ಇಂದಿನಿಂದ ಶುರುಮಾಡಲಿದ್ದು, ಕ್ರೀಡಾಂಗಣದಲ್ಲಿ ಆಟಗಾರರ ತಯಾರಿ ಭರ್ಜರಿಯಾಗಿ ನಡೆಸಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಟರು ತಯಾರಿ ನಡೆಸುತ್ತಿದ್ದು, ಕಿಚ್ಚ ಸುದೀಪ್ ಅವರು ಈ ಕ್ರೀಡೆಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ನಾವು ಎಲ್ಲರೂ ಒಟ್ಟಾಗಿ ಸೇರಿ ಯಾಕೆ ಕ್ರಿಕೆಟ್ ಆಟವಾಡಬಾರದು ಎಂದು ಯೋಚನೆ ಬಂತು. ತಕ್ಷಣ ನಾನು ಎಲ್ಲರಿಗೂ ಕರೆ ಮಾಡಿ ಈ ಬಗ್ಗೆ ತಿಳಿಸಿದೆ. ನನ್ನ ಒಂದು ಕರೆಗೆ ಸ್ಪಂದಿಸಿ ಎಲ್ಲರು ಬಂದಿದ್ದಾರೆ. ನಾನು ಕರೆದ ತಕ್ಷಣ ಬಂದು ಕ್ರೀಡಾಂಗಣ, ತರಬೇತಿ ನೋಡಿ, ಇದರಲ್ಲಿ ಒಂದು ಬೆಳವಣಿಗೆ ಜೊತೆಗೆ ಇಡೀ ಚಿತ್ರರಂಗಕಕ್ಕೆ ಒಂದು ಒಳ್ಳೆಯತನ ಅವರಿಗೆ ಕಾಣಿಸಿತು. ಅದಕ್ಕೆ ಎಲ್ಲರು ಸಮಯ ಕೊಟ್ಟು ಬಂದು ತರಬೇತಿಯಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದರು.

ಒಂದು ಥಿಯೇಟರ್ ಇಲ್ಲದೆ ಸಿನಿಮಾ ರಿಲೀಸ್ ಮಾಡಲು ಸಾಧ್ಯವಿಲ್ಲ. ಅದೇ ರೀತಿ ನಿರ್ದೇಶಕರಿಲ್ಲದೆ, ಕಲಾವಿದರಿಲ್ಲದೆ ಸಿನಿಮಾ ಮಾಡಲು ಸಾಧ್ಯವಿಲ್ಲ. ಕ್ರಿಕೆಟ್ ಅನ್ನೋದು ಇರಲಿಲ್ಲ ಅಂದರೆ ನಾವು ಸೇರುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಸೇರಿದ ಮೇಲೆ ವ್ಯಕ್ತಿಗಳು ಪರಿಚಯವಾಗುತ್ತದೆ. ಇಲ್ಲಿ ಒಳ್ಳೆಯ ವ್ಯಕ್ತಿ, ಕೆಟ್ಟ ವ್ಯಕ್ತಿ ಅಂತ ಇಲ್ಲ. ಎಲ್ಲರು ವ್ಯಕ್ತಿಗಳಷ್ಟೆ. ಇಂದು ಅರ್ಧ ಬೇರೆಯವರ ಕಥೆ ಮೇಲೆ ನಮ್ಮ ಜೀವನ ನಡೆಯುತ್ತಿದೆ. ಬೇರೆಯವರು ಈ ರೀತಿ ಹೇಳಿದ್ರು, ಆ ರೀತಿ ಹೇಳಿದರು ಅಂದುಕೊಂಡೇ ನಾವು ಜೀವನ ಮಾಡುತ್ತಿದ್ದೇವೆ. ಆದರೆ ಎಲ್ಲರೂ ಒಟ್ಟಿಗೆ ಸೇರಿದರೆ ಮಾತ್ರ ಒಬ್ಬರಿಗೂ ಪರಿಚಯವಾಗಿ ಅವರ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಅಂತರಾಷ್ಟ್ರೀಯ ಆಟಗಾರರು:
ನನಗೆ ಬಲವಾದ ನಂಬಿಕೆ ಇದೆ. ಉದ್ದೇಶ ಸರಿ ಇದ್ದರೆ ಪ್ರಕೃತಿ ಕೂಡ ಸಾಥ್ ಕೊಡುತ್ತದೆ. ನನಗೆ 22 ವರ್ಷದಿಂದ ಪ್ರಕೃತಿ ಸಾಥ್ ಕೊಡುತ್ತಿದೆ. ನಮ್ಮ ಮಾತಿಗೆ ಬೆಲೆ ಕೊಟ್ಟು ಬಂದವರನ್ನು ಪ್ರೀತಿಯಿಂದ ನೋಡಿಕೊಂಡರೆ ಸಾಕು ಮತ್ತೆ ಕರೆದರೆ ಬರುತ್ತಾರೆ. ಆದರೆ ಮೊದಲ ಬಾರಿ ಏನಾದರೂ ಎಡವಟ್ಟು ಮಾಡಿಕೊಂಡರೆ ಮತ್ತೆ ಅವರನ್ನು ಕರೆದರೆ ಬರುವುದಿಲ್ಲ. ಆದ್ದರಿಂದ ಎಲ್ಲರು ನನ್ನ ಕರೆಗೆ ಸ್ಪಂದಿಸಿ ಬಂದಿದ್ದಾರೆ. ನನಗೆ ತುಂಬಾ ಸಂತೋಷವಾಗುತ್ತಿದೆ ಎಂದು ಆನಂದವನ್ನು ಪಬ್ಲಿಕ್ ಟಿವಿ ಜೊತೆ ಹಂಚಿಕೊಂಡರು.

ಇಲ್ಲಿ ಯಾರು ಸ್ಟಾರ್ ಗಳಲ್ಲ. ಎಲ್ಲರೂ ಒಂದೇ ವ್ಯಕ್ತಿಗಳು ಅಷ್ಟೆ. ಎಲ್ಲರೂ ನಿಂತು ಕೆಲಸ ಮಾಡುತ್ತಿದ್ದಾರೆ. ಎಲ್ಲರಿಗೆ ಚೆನ್ನಾಗಿ ಆಡಬೇಕೆಂದು ಕನಸುಗಳಿವೆ. ನನ್ನ ಕನಸು ಇವರೆಲ್ಲರನ್ನು ಸೇರಿಸುವುದು. ಅವರು ಕನಸುಗಳೆಲ್ಲ ಈಡೇರಲಿ ಎಂದು ಹೇಳಿದರು.

ಮಾನಸಿಕವಾಗಿ ಧ್ಯರ್ಯವಾಗಿದ್ದರೆ ದೈಹಿಕವಾಗಿ ಧೈರ್ಯವಾಗಿ ಇರಬಹುದು ಗೆಲ್ಲಲು ಸಾಧ್ಯವಾಗುತ್ತದೆ. ಎಲ್ಲರೂ ಪ್ರೀತಿಯಿಂದ ಬಂದು ಎರಡು ದಿನ ನೋಡಿ ಎಂಜಾಯ್ ಮಾಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *