ರಶ್ಮಿಕಾ, ವಿಜಯ್ ಮದ್ವೆಯಾದ್ರೆ Made For Each Other- ದೇವರಕೊಂಡ ಅಭಿಮಾನಿ

Public TV
1 Min Read

ಬೆಂಗಳೂರು: ನಟಿ ರಶ್ಮಿಕಾ ಮತ್ತು ನಿನ್ನ ಜೋಡಿ ಸೂಪರ್ ಆಗಿರುತ್ತದೆ. ನೀವಿಬ್ಬರೂ ಮದುವೆಯಾದರೆ ಮೇಡ್ ಫಾರ್ ಈಚ್ ಅದರ್ ಜೋಡಿಯಾಗುತ್ತದೆ. ಪ್ಲೀಸ್ ವಿಜಯ್ ಅಣ್ಣಾ. ನಮ್ಮ ಮನವಿಯನ್ನು ಒಪ್ಪಿಕೋ ಎಂದು ವಿಜಯ್ ಅಭಿಮಾನಿಯೊಬ್ಬರು ಕೇಳಿಕೊಂಡಿದ್ದಾರೆ.

‘ಗೀತಾ ಗೋವಿಂದಂ’ ಚಿತ್ರ ತೆರೆ ಕಂಡು ಎರಡು ಮೂರು ವಾರಗಳಾಗಿವೆ. ಕಡಿಮೆ ದಿನಗಳಲ್ಲಿ ಈ ಚಿತ್ರ ಭರ್ಜರಿ ನೂರು ಕೋಟಿಯನ್ನು ದಾಟಿ ಮುನ್ನುಗ್ಗುತ್ತಿದೆ. ತೆಲುಗು ಮಂದಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಇಬ್ಬರನ್ನು ಮೆಚ್ಚಿಕೊಂಡಿದ್ದಾರೆ. ತೆಲುಗು ಚಿತ್ರರಂಗದ ಟಾಪ್ ಹೀರೋಗಳು ರಶ್ಮಿಕಾ ಕಾಲ್‍ಶೀಟ್‍ಗೆ ಮುಗಿಬಿದ್ದಿದ್ದಾರೆ. ಸದ್ಯ ಈ ಚಿತ್ರದ ಯಶಸ್ಸನ್ನು ವಿಜಯ್ ತಮ್ಮ ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಅವರಿಗೆ ಸಲ್ಲಿಸಿದ್ದಾರೆ.

ಸಾಮಾನ್ಯವಾಗಿ ಒಂದು ಸಿನಿಮಾ ಸೂಪರ್ ಹಿಟ್ ಆದರೆ, ನೂರು ಕೋಟಿಯನ್ನು ದಾಟಿದರೆ ಎಲ್ಲಾ ಕ್ರೆಡಿಟ್ ಹೀರೋಗೆ ಸಲ್ಲುತ್ತದೆ. ಆ ಚಿತ್ರತಂಡದಿಂದ ಹಿಡಿದು ಉದ್ಯಮ ಕೂಡ ಅದನ್ನೇ ಪಾಲಿಸುತ್ತದೆ. ಆದರೆ ವಿಜಯ್ ದೇವರಕೊಂಡರಂಥ ಕೆಲವು ಹೀರೋಗಳು ಇದಕ್ಕೆ ಅಪವಾದ. ಅದಕ್ಕೇ ಗೀತಾಗೋವಿಂದಂ ನೂರು ಕೋಟಿ ಗಳಿಸಲು ಕಾರಣ ನಿರ್ದೇಶಕ ಪರಶುರಾಮ್ ಮತ್ತು ಮೈ ಲವ್ಲಿ ಪಾರ್ಟನರ್‍ಶಿಪ್ ರಶ್ಮಿಕಾ ಮಂದಣ್ಣ ಎಂದು ಹೇಳಿದ್ದಾರೆ.

ಸದ್ಯ ಈಗ ಅಭಿಮಾನಿಗಳೆಲ್ಲರೂ ವಿಜಯ್ ಹಾಗೂ ರಶ್ಮಿಕಾ ಅವರ ಅಭಿನಯಕ್ಕೆ ಫಿದಾ ಆಗಿದ್ದಾರೆ. ಅಲ್ಲದೇ ಇಬ್ಬರ ಜೋಡಿ ಇಷ್ಟಪಟ್ಟು ವಿಜಯ್ ನೀನು ರಶ್ಮಿಕಾರನ್ನೇ ಮದುವೆಯಾಗು ಎಂದು ವಿಜಯ್ ಅಭಿಮಾನಿಗಳು ಹೊಸ ಚಳುವಳಿ ಶುರು ಮಾಡಿದ್ದಾರೆ. ರಶ್ಮಿಕಾ ಮತ್ತು ನಿನ್ನ ಜೋಡಿ ಸೂಪರ್ ಆಗಿರುತ್ತದೆ. ನೀವಿಬ್ಬರೂ ಮದುವೆಯಾದರೆ ಮೇಡ್ ಫಾರ್ ಈಚ್ ಅದರ್ ಜೋಡಿಯಾಗುತ್ತದೆ. ಪ್ಲೀಸ್ ಒಪ್ಪಿಕೊಳ್ಳಿ ಅಣ್ಣ ಎಂದು ವಿಜಯ್ ಅಭಿಮಾನಿ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *