8ನೇ ಕ್ಲಾಸ್ ಓದಿರೋ ಅಂಕಲ್‍ನಿಂದ 6 ಮಹಿಳೆಯರ ಫೇಸ್‍ಬುಕ್ ಖಾತೆ ಹ್ಯಾಕ್

Public TV
2 Min Read

-ಮೆಸೇಜ್ ಕಳಿಸಿ ಸೆಕ್ಸ್ ಗೆ ಬೇಡಿಕೆ

ಇಂದೋರ್: 6 ಮಹಿಳೆಯರ ಫೇಸ್‍ಬುಕ್ ಖಾತೆಯನ್ನು ಹ್ಯಾಕ್ ಮಾಡಿ ಲೈಂಗಿಕ ಕಿರುಕುಳ ನೀಡುತ್ತಿದ್ದ 8 ನೇ ಕ್ಲಾಸ್ ಓದಿರೋ ಅಂಕಲ್ ನನ್ನು ಇಂದೋರ್ ಪೊಲೀಸರು ಬಂಧಿಸಿದ್ದಾರೆ.

ಜಾಗೃತಿ ನಗರದ ನಿವಾಸಿ 36 ವರ್ಷದ ದಿಲೀಪ್ ಬಂಧಿತ ವ್ಯಕ್ತಿ. ದಿಲೀಪ್ ತಾನು ಹ್ಯಾಕ್ ಮಾಡಿದ ಎಫ್‍ಬಿ ಖಾತೆಯಲ್ಲಿ ಅಶ್ಲೀಲ ಫೋಟೋಗಳನ್ನು ಅಪ್ಲೋಡ್ ಮಾಡುವ ಮೂಲಕ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದನು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ 6 ದೂರುಗಳು ದಾಖಲಾಗಿದ್ದವು. ಪ್ರಕರಣ ಕೈಗೆತ್ತಿಕೊಂಡ ಕ್ರೈಂ ಬ್ರಾಂಚ್ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಆರಂಭದಲ್ಲಿ ತನ್ನದೇನು ತಪ್ಪಿಲ್ಲ ಎಂದು ಬಲವಾಗಿ ವಾದಿಸಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿಗಳನ್ನು ತೋರಿಸುತ್ತಿದ್ದಂತೆ ಆರೋಪಿ ತನ್ನ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ದಿಲೀಪ್ ಫೇಸ್‍ಬುಕ್ ಖಾತೆ ಹ್ಯಾಕ್ ಮಾಡಲು ಕೆಲವು ವಿಐಪಿ ಅಥವಾ ಫ್ಯಾನ್ಸಿ ಮೊಬೈಲ್ ನಂಬರ್‍ಗಳನ್ನು ಬಳಕೆ ಮಾಡುತ್ತಿದ್ದನು. ಹೀಗೆ ಪದೇ ಪದೇ ನಂಬರ್ ಗಳನ್ನು ಹಾಕುವ ಮೂಲಕ ಫೇಸ್‍ಬುಕ್ ಖಾತೆಗಳನ್ನ ಹ್ಯಾಕ್ ಮಾಡುತ್ತಿದ್ದನು. ಖಾತೆ ಹ್ಯಾಕ್ ಬಳಿಕ ಮಹಿಳೆಯರಿಗೆ ತನ್ನೊಂದಿಗೆ ದೈಹಿಕ ಸಂಪರ್ಕ ಹೊಂದುವಂತೆ ಬೇಡಿಕೆ ಇಡುತ್ತಿದ್ದನು. ಒಂದು ವೇಳೆ ಮಹಿಳೆ ಒಪ್ಪದೇ ಇದ್ದಲ್ಲಿ ಅವರ ಫೇಸ್‍ಬುಕ್ ಖಾತೆಯಲ್ಲಿ ಅಶ್ಲೀಲ ಫೋಟೋಗಳನ್ನು ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದನು. ಕಳೆದ ಮೂರು ತಿಂಗಳನಿಂದ ಆರೋಪಿ ಎಫ್‍ಬಿ ಅಕೌಂಟ್ ಹ್ಯಾಕ್ ಮಾಡುತ್ತಿದ್ದ ಎಂದು ತಿಳಿದು ಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಹೇಗೆ ಹ್ಯಾಕ್ ಮಾಡ್ತಿದ್ದ..?
ಒಂದು ದಿನ ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ ಫೇಸ್‍ಬುಕ್ ನಲ್ಲಿ ಕೆಲವು ಮೊಬೈಲ್ ನಂಬರ್ ಹಾಕಿ ಖಾತೆ ತೆರೆಯುವ ಪ್ರಯತ್ನ ಮಾಡಲಾರಂಭಿಸಿದ್ದಾನೆ. ಹೀಗೆ ಒಂದೆರೆಡು ಖಾತೆ ಓಪನ್ ಆಗುತ್ತಲೇ ಇದನ್ನೇ ಕೆಲಸ ಮಾಡಿಕೊಂಡಿದ್ದಾನೆ. ಮುಂದೆ ಫಾನ್ಸಿ ಅಥವಾ ಮೊಬೈಲ್ ನಂಬರ್ ಬಳಸಿ, ಅಂದಾಜಿನ ಮೇಲೆಯೇ ಕಾಮನ್ ಪಾಸ್ ವರ್ಡ್ ಬಳಸಿ ಕೆಲ ಮಹಿಳೆಯರ ಎಫ್‍ಬಿ ಖಾತೆಗಳು ಓಪನ್ ಆಗಿವೆ. ಆದ್ರೆ ದಿಲೀಪ್ ಖಾತೆ ತೆರೆದ ಮಹಿಳೆಯರ ಪರಿಚಯ ಮೊದಲು ಇರಲಿಲ್ಲ. ಖಾತೆಗಳು ಓಪನ್ ಆಗುತ್ತಿದ್ದಂತೆ ಮೆಸೇಜ್ ಕಳಿಸಿ ಸೆಕ್ಸ್ ಗೆ ಬೇಡಿಕೆ ಇಡುತ್ತಿದ್ದನು.

ಆರೋಪಿ ದಿಲೀಪ್ 8ನೇ ತರಗತಿಯವರೆಗೆ ಮಾತ್ರ ವ್ಯಾಸಂಗ ಮಾಡಿದ್ದು, ಜಾಗೃತ ನಗರದ ಸಿಂಧಿ ಕಾಲೋನಿಯ ನಿವಾಸಿಯಾಗಿದ್ದಾನೆ. ಪಟ್ಟಣದಲ್ಲಿ ತನ್ನದೇ ಸ್ವಂತ ಫೂಟ್‍ವೇರ್ ಅಂಗಡಿಯನ್ನು ಹೊಂದಿದ್ದಾನೆ. ಇದೇ ರೀತಿಯಾಗಿ ಯಾರಾದ್ರೂ ಮಹಿಳೆಯರು ತೊಂದರೆ ಅನುಭವಿಸಿದ್ದರೆ, ಕೂಡಲೇ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು. ನಿಮಗೆ ಬ್ಲ್ಯಾಕ್ ಮೇಲ್ ಮಾಡಲು ಯತ್ನಿಸುವ ವ್ಯಕ್ತಿಯಿಂದ ದೂರ ಇರಬೇಕು ಎಂದು ಕ್ರೈಂ ಬ್ರ್ಯಾಂಚ್ ಎಎಸ್‍ಪಿ ಅಮರೇಂದ್ರ ಸಿಂಗ್ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *