ಪೊಲೀಸ್ ಪದಕ ವಿತರಣೆಯಲ್ಲೂ ಉತ್ತರ ಕರ್ನಾಟಕಕ್ಕೆ ಅನ್ಯಾಯ!

Public TV
1 Min Read

– ಮೈಸೂರು ಭಾಗದತ್ತ ಹೆಚ್ಚು ಒಲವು

ಬೆಂಗಳೂರು: ಬಜೆಟ್‍ನಲ್ಲಿ ಉತ್ತರ ಕರ್ನಾಟಕ ಕಡೆಗಣಿಸಿದ್ದ ಸರ್ಕಾರ ಈಗ ಮತ್ತೆ ಅನ್ಯಾಯ ಮಾಡಲು ಹೊರಟಿದೆ. 2017ನೇ ಸಾಲಿನ ಮುಖ್ಯಮಂತ್ರಿ ಪದಕ ನೀಡುವಲ್ಲಿಯೂ ತಾರತಮ್ಯ ಮಾಡಿದೆ.

ಮುಖ್ಯಮಂತ್ರಿ ಪದಕ ನೀಡಿಕೆಯಲ್ಲಿ ಉತ್ತರ ಕರ್ನಾಟಕವನ್ನ ಕಡೆಣಿಸಿರುವ ಸಮ್ಮಿಶ್ರ ಸರ್ಕಾರ ಬೆಂಗಳೂರು, ಮೈಸೂರು ಭಾಗಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಬೆರಳೆಣಿಕೆಯಷ್ಟು ಪದಕ ನೀಡಿದ್ದು, ಮೂರ್ನಾಲ್ಕು ಜಿಲ್ಲೆಗಳಿಗೆ ಮಾತ್ರ ಹೆಚ್ಚಿನ ಪದಕ ನೀಡಲಾಗಿದೆ. ಇದನ್ನೂ ಓದಿ: ಇದು ಫೈನಲ್ ಬಜೆಟಲ್ಲ, ಸಪ್ಲಿಮೆಂಟರಿಯಲ್ಲಿ ಉ.ಕ.ಕ್ಕೆ ನ್ಯಾಯ ಒದಗಿಸೋಣ- ಸಚಿವ ಶಿವಶಂಕರ್ ರೆಡ್ಡಿ

2017ನೇ ಸಾಲಿನ ಮುಖ್ಯಮಂತ್ರಿ ಪದಕ ಘೋಷಣೆಯಲ್ಲಿ ಅನ್ಯಾಯ ಮಾಡಲಾಗಿದ್ದು, 122 ಜನ ಪೊಲೀಸರಿಗೆ ನೀಡಿರುವ ಮುಖ್ಯಮಂತ್ರಿ ಪದಕದಲ್ಲಿ ಬೆಂಗಳೂರು ಪೊಲೀಸರಿಗೆ ಹೆಚ್ಚಿನ ಪದಕಗಳನ್ನು ನೀಡಲಾಗಿದೆ. 10 ಕ್ಕೂ ಹೆಚ್ಚು ಜಿಲ್ಲೆಗಳಿಗೆ ಕೇವಲ ಒಂದು ಪದಕವನ್ನು ನೀಡಲಾಗಿದೆ. ಬೆಂಗಳೂರು – 57, ಮೈಸೂರು – 12, ಶಿವಮೊಗ್ಗ – 6, ಉತ್ತರ ಕರ್ನಾಟಕದ 13 ಜಿಲ್ಲೆಗಳಿಗೆ – 20 ಆಗಿದ್ದು, ಇನ್ನು ಹಾಸನ, ಕೊಡಗು, ಮಂಡ್ಯ, ರಾಮನಗರ, ಮಂಗಳೂರು – 11 ಪದಕಗಳನ್ನು ನೀಡಿದ್ದಾರೆ. ಈ ಮೂಲಕ ಉತ್ತರ ಕರ್ನಾಟಕ ಪೊಲೀಸರು ಕೆಲಸ ಮಾಡೋಲ್ವಾ..? ಮುಖ್ಯಮಂತ್ರಿ ಪದಕದಲ್ಲೂ ಲಾಬಿ ನಡೆದಿದ್ಯಾ..? ಅನ್ನೋ ಅನುಮಾನ ಗೃಹ ಇಲಾಖೆ ಮೇಲೆ ಮೂಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=zBoDEsic00o

Share This Article
Leave a Comment

Leave a Reply

Your email address will not be published. Required fields are marked *