ಅವಕಾಶ ಸಿಕ್ಕರೆ ಖಂಡಿತ ಎಚ್‍ಡಿಡಿ ಆಸೆ ನೆರವೇರಿಸುತ್ತೇನೆ- ಪ್ರಜ್ವಲ್ ರೇವಣ್ಣ

Public TV
1 Min Read

ಹಾಸನ: ಲೋಕಸಭೆಗೆ ಸ್ಪರ್ಧಿಸುವ ಕುರಿತು ಎಚ್‍ಡಿಡಿ ಅವರು ನನ್ನ ಬಳಿ ಏನೂ ಹೇಳಿಲ್ಲ. ದೇವರ ಪೂಜೆ ಮಾಡಿಸಿ ಹೊರ ಬರುತ್ತಿದ್ದಂತೆಯೇ ಒಳ್ಳೆಯ ಸುದ್ದಿ ಕೇಳಿದ್ದೇನೆ. ಒಂದು ವೇಳೆ ಅಂತಹ ಸಂದರ್ಭ ಬಂದ್ರೆ ಖಂಡಿತವಾಗಿಯೂ ಅವರ ಆಸೆ ನೆರವೇರಿಸುತ್ತೇನೆ ಅಂತ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.

ನಗರದ ಹರದನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಕ್ಷೇತ್ರ ಎನ್ನುವುದರ ಕುರಿತು ಇದುವರೆಗೂ ಯಾವುದೇ ಚರ್ಚೆ ಆಗಿಲ್ಲ. ಯಾವ ಕ್ಷೇತ್ರವೇ ಆಗಲಿ. ದೇವೇಗೌಡ ಅವರು ಏನು ಆಶೀರ್ವಾದ ಮಾಡುತ್ತಾರೆಯೋ ಅದನ್ನು ಸ್ವೀಕರಿಸಲು ನಾನು ತಯಾರಾಗಿದ್ದೇನೆ. ಅವರು ಏನೇ ಅವಕಾಶ ಕೊಟ್ಟರೂ ಈ ರಾಜ್ಯದ ಜನತೆಗೋಸ್ಕರ ದುಡಿಯುತ್ತೇನೆ ಅಂದ್ರು.

ಪುರಸಭೆ ಚುನಾವಣೆಯಲ್ಲಿ ಅತೀ ಹೆಚ್ಚಿನ ಸೀಟುಗಳನ್ನು ಪಡೆದು ಬಹುತ ಸಾಧಿಸಬೇಕೆಂಬುದು ನಮ್ಮ ಆಶಯವಾಗಿದೆ. ಪ್ರತಿಯೊಂದು ಚುನಾವಣೆಯೂ ನಮಗೆ ಅತಿ ಮುಖ್ಯವಾದುದಾಗಿದೆ. ವಿಧಾಸನಭೆ, ಪುರಸಭೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಅಥವಾ ಸಂಸದರ ಚುನಾವಣೆಯೇ ಇರಬಹುದು. ಹೀಗೆ ಪ್ರತಿಯೊಂದು ಚುನಾವಣೆಯೂ ಬಹುಮುಖ್ಯವಾಗಿದ್ದು, ಇದಕ್ಕಾಗಿ ಶ್ರಮ ವಹಿಸುತ್ತೇನೆ. ಇದನ್ನೂ ಓದಿ: ಲೋಕಸಭಾ ಚುನಾವಣಾ ಸಮರ – ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಸ್ಪರ್ಧೆ ನಿಶ್ಚಿತ

ಇದೇ ವೇಳೆ ಮಂಡ್ಯದಲ್ಲಿ ಜನರು ಪ್ರಜ್ವಲ್ ರೇವಣ್ಣ ಅವರು ಇಲ್ಲೇ ಸ್ಪರ್ಧಿಸಬೇಕೆಂದು ಕೇಳಿಕೊಳ್ಳುವುದಕ್ಕೆ ಪ್ರತಿಕ್ರಿಯಿಸಿದ ಅವರು, ಮಂಡ್ಯ ಜನತೆಗೆ ಮೊದಲು ನಾನು ಧನ್ಯವಾದ ತಿಳಿಸುತ್ತೇನೆ. ಯಾಕಂದ್ರೆ ನಾನು ಆ ಜಿಲ್ಲೆಗೆ ಅಥವಾ ಕ್ಷೇತ್ರಕ್ಕೆ ಸಂಬಂಧಪಡದೇ ಇದ್ದರೂ ಕೂಡ ಅಲ್ಲಿನ ಜನತೆ 7 ಸೀಟು ಕೊಟ್ಟು ಇಂದು ನಮಗೆ ಆಶೀರ್ವಾದ ಮಾಡಿದ್ದಾರೆ. ಹೀಗಾಗಿ ಆ ಜಿಲ್ಲೆಯ ಜನತೆಗೆ ನಾನು ಯಾವತ್ತೂ ಚಿರಋಣಿಯಾಗಿರುತ್ತೇನೆ. ಒಂದು ವೇಳೆ ಅದೇ ಕ್ಷೇತ್ರದಲ್ಲಿ ಅವಕಾಶ ಸಿಕ್ಕರೇ ಅದು ನನ್ನ ಪುಣ್ಯ, ಖಂಡಿತವಾಗಿಯೂ ಅದನ್ನು ನಾನು ಸ್ವೀಕರಿಸುತ್ತೇನೆ ಅಂತ ಹೇಳಿದ್ರು.

ಒಟ್ಟಿನಲ್ಲಿ ದೊಡ್ಡವರ ನಿರ್ಧಾರಕ್ಕೆ ನಾನು, ನಮ್ಮ ನಾಯಕರು ಹಾಗೂ ಕಾರ್ಯಕರ್ತರೆಲ್ಲರೂ ಬದ್ಧರಾಗಿರುತ್ತೇವೆ ಅಂತ ಅವರು ತಿಳಿಸಿದ್ರು. ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

https://www.youtube.com/watch?v=PPxd3hiJGY4

Share This Article
Leave a Comment

Leave a Reply

Your email address will not be published. Required fields are marked *