ಅಧಿಕಾರಕ್ಕಾಗಿ ತಂದೆ-ತಾಯಿ ಗೊತ್ತಿಲ್ಲ ಅಂದ್ರು – ನಕಲಿ ಜಾತಿ ಪತ್ರ ನೀಡಿ ಸಿಕ್ಕಿಬಿದ್ರು ಅಗ್ರಹಾರದ ಗಾಯತ್ರಿ

Public TV
2 Min Read

ಬೆಂಗಳೂರು: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸುವ ವೇಳೆ ಜಾತಿ ಪ್ರಮಾಣ ಪತ್ರ ನೀಡಿಕ್ಕೆ ಸರಿಯಾದ ದಾಖಲೆ ಇಲ್ಲದ ಆರೋಪದಡಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಕೆಪಿ ಅಗ್ರಹಾರ ಗಾಯತ್ರಿ ಅವರ ಜಾತಿ ಪ್ರಮಾಣ ಪತ್ರ ರದ್ದುಪಡಿಸಿ ಆದೇಶ ನೀಡಿದ್ದಾರೆ.

ನಗರದ ಕೆಪಿ ಅಗ್ರಹಾರ ಕಾರ್ಪೊರೇಟರ್ ಎಂ ಗಾಯತ್ರಿ ಗಣೇಶ್ ಅವರ ಜಾತಿ ಪ್ರಮಾಣ ಪತ್ರ ರದ್ದು ಮಾಡಿ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ. ಬಿಬಿಎಂಪಿ ಚುನಾವಣೆಯಲ್ಲಿ ಎಸ್‍ಟಿ ಮಹಿಳೆಗೆ ಮೀಸಲಾಗಿದ್ದ ಕೆಪಿ ಅಗ್ರಹಾರ ವಾರ್ಡ್ ನಿಂದ ಎಂ ಗಾಯತ್ರಿ ಅವರು ನಾಯಕ ಜನಾಂಗದ ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಸ್ಪರ್ಧಿಸಿ ಗೆಲುವು ಪಡೆದಿದ್ದರು. ಈ ವೇಳೆ ದಾಖಲೆ ಪರಿಶೀಲಿಸದೆ ತಹಶೀಲ್ದಾರ್ ರಾಮಲಕ್ಷ್ಮಣ್ ಜಾತಿ ಪ್ರಮಾಣಪತ್ರ ನೀಡಿದ್ದರು.

ಏನಿದು ಪ್ರಕರಣ:
ಕಾರ್ಪೊರೇಟರ್ ಎಂ ಗಾಯತ್ರಿ ಗಣೇಶ್‍ಗೆ ತಂದೆ-ತಾಯಿ, ಜಾತಿ ಬಗ್ಗೆ ಮಾಹಿತಿ ಇಲ್ಲ. ಇದೇ ಕಾರಣಕ್ಕೆ ನಾಯಕ ಜಾತಿ ಹೆಸರಿನಲ್ಲಿ ಶಾಲೆಯನ್ನು ಬಳಕೆ ಮಾಡಿ ಜಾತಿ ಪ್ರಮಾಣಪತ್ರ ಮಾಡಲಾಗಿದೆ. ನಗರದ ಕೆಪಿ ಆಗ್ರಹಾರದಲ್ಲಿರುವ ಸಿದ್ದಲಿಂಗೇಶ್ವರ ಶಾಲೆಯಲ್ಲಿ ವ್ಯಾಸಂಗ ನಡೆಸಿರುವ ಕುರಿತು ದಾಖಲೆ ಸೃಷ್ಟಿ ಮಾಡಲಾಗಿದ್ದು, ಆದರೆ ಅವರ ಶೈಕ್ಷಣಿಕ ಆರ್ಹತೆ ಬಗ್ಗೆ ಶಾಲೆಯಲ್ಲಿ ಯಾವುದೇ ಪೂರಕ ಮಾಹಿತಿ ಲಭಿಸದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಈ ಕ್ರಮಕೈಗೊಂಡಿದ್ದಾರೆ.

ಬಿಬಿಎಂಪಿ ಚುನಾವಣೆ ಸ್ಪರ್ಧೆ ಮಾಡುವ ಉದ್ದೇಶದಿಂದಲೇ 1ನೇ ತರಗತಿಯಿಂದ 5ನೇ ತರಗತಿಯವರೆಗೆ ವ್ಯಾಸಂಗ ಮಾಡಿರುವಂತೆ ದಾಖಲೆ ಸೃಷ್ಟಿಸಲಾಗಿದ್ದು, ನಾಯಕ ಜಾತಿ ಪ್ರಮಾಣ ಪತ್ರ ಪಡೆಯಲು ಸಿದ್ದಲಿಂಗೇಶ್ವರ ಶಾಲೆ ಬಳಕೆ ಮಾಡಿದ್ದಾರೆ. 2015 ಜೂನ್ ನಲ್ಲಿ ಗಾಯಿತ್ರಿ ಅವರು ಜಾತಿ ಪ್ರಮಾಣ ಪತ್ರ ಪಡೆದಿದ್ದು, 2015 ಜುಲೈ ನಲ್ಲಿ ಬಿಬಿಎಂಪಿ ಚುನಾವಣೆ ನಡೆದಿತ್ತು. ಅಂದರೆ ಚುನಾವಣೆಯಲ್ಲಿ ಮೀಸಲಾತಿ ಘೋಷಣೆ ಆದ ಮೇಲೆ ಜಾತಿ ಪ್ರಮಾಣ ಪತ್ರ ಪಡೆಯಲಾಗಿದೆ ಎಂಬುದು ಕಾಣಸಿಗುತ್ತದೆ.

ಶಾಲೆಯಲ್ಲಿ ವರ್ಗಾವಣೆ ಪ್ರಮಾಣ ಪತ್ರ ಪಡೆಯುವ ವೇಳೆಯೂ 5ನೇ ತರಗತಿ ಪಾಸ್ ಎಂದು ಬರೆಯಲಾಗಿದೆ. ಆದರೆ ದಾಖಲೆಯಲ್ಲಿ ಗಾಯಿತ್ರಿ ಅವರು 5ನೇ ತರಗತಿ ಅನುತ್ತೀರ್ಣ ಎಂದು ನಮೂದಿಸಲಾಗಿದೆ. ಈ ಕುರಿತು ಡಿಡಿಪಿಐ ಹಾಗೂ ಇತರೇ ಅಧಿಕಾರಿಗಳು ವರದಿ ನೀಡಿದ್ದು, ಈ ವರದಿ ಅನ್ವಯ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ.

ಒಂದೊಮ್ಮೆ ಈ ಕುರಿತು ಗಾಯಿತ್ರಿ ಅವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ರೂ ಸಹ ವರದಿಯ ಅನ್ವಯ ಅರ್ಜಿ ತಿರಸ್ಕೃತ ಗೊಳ್ಳುವ ಸಾಧ್ಯತೆಯೂ ಇದೇ. ಆರೋಪ ಸಾಬೀತಾದಲ್ಲಿ ಗಾಯಿತ್ರಿ ಅವರು ಈ ಅವಧಿಯಲ್ಲಿ ಪಡೆದಿರುವ ಎಲ್ಲಾ ಸೌಲಭ್ಯಗಳನ್ನ ಹಿಂದಿರುಗಿಸುವ ಅನಿವಾರ್ಯ ಎದುರಾಗಲಿದೆ. ಅಲ್ಲದೇ ಚುನಾವಣೆಯಲ್ಲಿ ಅಕ್ರಮ ನಡೆಸಿರುವ ಆರೋಪದಡಿ 6 ವರ್ಷ ಚುನಾವಣೆಗೆ ಮತ್ತೆ ಸ್ಪರ್ಧೆ ಮಾಡುವಂತಿಲ್ಲ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Share This Article
Leave a Comment

Leave a Reply

Your email address will not be published. Required fields are marked *