ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕಡೆ ಗಮನ ನೀಡಬೇಕು- ರಾಜ್ಯಪಾಲ ವಿ.ಆರ್.ವಾಲಾ

Public TV
2 Min Read

– ರೇವಾ ವಿಶ್ವವಿದ್ಯಾಲಯದ 3ನೇ ಘಟಿಕೋತ್ಸವ
– ಸಾವಿರಾರು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಬೆಂಗಳೂರು: ವಿದ್ಯಾರ್ಥಿಗಳು ಫ್ಯಾಷನ್ ವ್ಯಾಮೋಹ ಮತ್ತು ವ್ಯಸನ ಮುಕ್ತರಾಗಿ ಮುಂದಿನ ಭವಿಷ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕು ಎಂದು ರಾಜ್ಯಪಾಲ ಶ್ರೀ ವಿ.ಆರ್.ವಾಲಾ ಹೇಳಿದರು.

ಯಲಹಂಕದಲ್ಲಿರುವ ರೇವಾ ವಿಶ್ವವಿದ್ಯಾಲಯ 3ನೇ ಘಟಿಕೋತ್ಸವ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ಕಾಲೇಜು ಜೀವನದಲ್ಲಿ ವಿದ್ಯಾರ್ಥಿಗಳು ಕೇವಲ ಫ್ಯಾಷನ್ ಕಡೆಗೆ ಹೆಚ್ಚಿನ ಕಾಳಜಿವಹಿಸುತ್ತಾರೆ. ಮುಂದೆ ಮದ್ಯಪಾನ, ಡ್ರಗ್ಸ್‍ಗಳಿಗೆ ವ್ಯಸನಿಗಳಾಗಿ ತಮ್ಮ ಉಜ್ವಲ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಾರೆ. ಹೀಗಾಗಿ ವಿದ್ಯಾರ್ಥಿಗಳು ತಮ್ಮ ಅಮೂಲ್ಯ ಸಮಯವನ್ನು ಹಾಳುಮಾಡುಕೊಳ್ಳುವುದು ಬಿಟ್ಟು ವ್ಯಾಸಂಗದ ಕಡೆಗೆ ಹೆಚ್ಚಿನ ಗಮಹನರಿಸಬೇಕೆಂದು ಕರೆ ನೀಡಿದರು.

ಅಮೆರಿಕ, ಯುರೋಪ್ ದೇಶಗಳು ಮಾತ್ರ ಅವಿಷ್ಕಾರಗಳನ್ನು ಮಾಡಲು ಸಾಧ್ಯ ಎಂದು ನಾವು ಸುಮ್ಮನೆ ಕುಳಿತುಕೊಳ್ಳುವುದು ಮೂರ್ಖತನ. ನಮ್ಮಲ್ಲಿ ಆಪಾರ ಮಾನವ ಸಂಪನ್ಮೂಲವಿದೆ. ಯುವಶಕ್ತಿಯನ್ನೇ ಅಸವಾಗಿ ಬಳಕೆ ಮಾಡಿಕೊಂಡು ನೂತನ ಕ್ಷೇತ್ರಗಳಲ್ಲಿ ಅವಿಷ್ಕಾರ ಮಾಡಬೇಕು. ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕೆಂದರು.

ರೇವಾ ವಿಶ್ವವಿದ್ಯಾಲಯ ವಿಶಾಲ ಕ್ಯಾಂಪಸ್ ಹೊಂದಿದ್ದು, ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಶಿಕ್ಷಣ ನೀಡುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಇಂಡಿಯನ್ ನ್ಯಾಷನಲ್ ಅಕಾಡೆಮಿ ಆಫ್ ಇಂಜಿನಿಯರಿಂಗ್ ಅಧ್ಯಕ್ಷ ಶ್ರೀ ಪದ್ಮಭೂಷಣ ಡಾ.ಆರ್.ಎನ್.ಸುರೇಶ್ ಮಾತನಾಡಿ, ಪದವಿ ಸ್ವೀಕರಿಸಿದ ಬಹುತೇಕ ವಿದ್ಯಾರ್ಥಿಗಳು ವ್ಯಾಸಂಗದ ವಾತಾವರಣದಿಂದ ವೃತ್ತಿ ಜೀವನಕ್ಕೆ ಹೆಜ್ಞೆ ಹಾಕುತ್ತಿದ್ದೀರಿ. ನಿಮ್ಮ ಮುಂದೆ ಸ್ಪಧಾತ್ಮಕ ಜಗತ್ತು ಇದೆ. ಇಲ್ಲಿ ನೀವು ಸ್ಪರ್ಧಿಸಬೇಕಾಗುತ್ತದೆ. ಶಿಕ್ಷಣದ ಜತೆಗೆ ಕೌಶಲ್ಯ ಆಧಾರಿತ ಶಿಕ್ಷಣ ಇದ್ದರೆ, ನೀವು ಉದ್ಯೋಗಗಿಟ್ಟಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂಬುದನ್ನು ಅರಿತುಕೊಳ್ಳಬೇಕು ಎಂದರು.

ನಾವು ಚಂದ್ರಯಾನ ಉಪಗ್ರಹ ಉಡಾವಣೆಯಲ್ಲಿ ಯಶಸ್ವಿಯಾಗಿದ್ದೇವೆ. ಕಡಿಮೆ ವೆಚ್ಚದಲ್ಲಿ ಗುಣಮಟ್ಟ ಅಭಿವೃದ್ಧಿಯನ್ನು ಸಾಧಿಸುವ ಸಾಮಥ್ರ್ಯಗನಲ್ಲಿದೆ. ಇತ್ತೀಚಿಗೆ ಹಿಮಾಲಯನ್ ಎಂಬ ಅತಿ ಉದ್ದದ ಸೇತುವೇ ನಿರ್ಮಾಣ ಮಾಡಿದ್ದೇವೆ. ಮಾಹಿತಿ ತಂತ್ರಜ್ಞಾನದಲ್ಲಿ ವಿಶ್ವದಲ್ಲೇ ಗುರುತಿಸಿಕೊಂಡಿತ್ತೆವೆ. ಹೀಗಾಗಿ ನಮ್ಮಲ್ಲಿ ಸಾಧಿಸುವ ಛಲ ಇಟ್ಟುಕೊಂಡರೆ ಎಲ್ಲವೂ ಸಾಧ್ಯವಿದೆ. ರೇವಾ ವಿವಿ ನೋಡಿ ನನಗೆ ಖುಷಿಯಾಗುತ್ತಿದೆ. ಇಲ್ಲಿನ ಶಿಸ್ತು, ಸ್ವಚ್ಛ ಮತ್ತು ಸುಂದರ ಕ್ಯಾಂಪಸ್ ಎಲ್ಲರನ್ನು ಮೆಚ್ಚಿಸುತ್ತದೆ ಎಂದರು.

ನಮ್ಮ ಅನುಭವವೇ ನಮ್ಮ ಭವಿಷ್ಯವನ್ನು ಉತ್ತಮಗೊಳಿಸುತ್ತದೆ. ಭಾರತದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಈ ಸಮಸ್ಯೆಗಳನ್ನೇ ನಾವು ಅವಕಾಶಗಳಾಗಿ ಪರಿವರ್ತಿಸಿಕೊಂಡು ಅವುಗಳಿಗೆ ಪರಿಹಾರ ಕಂಡುಹಿಡಿಯುವ ಮೂಲಕ ನಾವು ಮುಂದೆ ಹೋಗಬೇಕಿದೆ ಎಂದರು.

ಇದು ನಮ್ಮ ಮೂರನೇ ವರ್ಷದ ಘಟಿಕೋತ್ಸವಾಗಿದೆ. ನಾವು ವಿದ್ಯಾರ್ಥಿಗಳ ಸರ್ವೋತಮುಖ ಅಭಿವೃದ್ಧಿಗೆ ಶ್ರಮಿಸಿದ್ದೇವೆ. ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬಾಳಬೇಕು ಎಂದು ರೇವಾ ವಿಶ್ವವಿದ್ಯಾಲಯ ಕುಲಾಧಿಪತಿ ಡಾ.ಪಿ.ಶ್ಯಾಮರಾಜು ಹೇಳಿದರು.

ಈ ಘಟಿಕೋತ್ಸವದಲ್ಲಿ 7 ಪಿಎಚ್.ಡಿ, 1201 ಪದವಿ ಮತ್ತು 525 ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ರೇವಾ ವಿಶ್ವವಿದ್ಯಾಲಯ ಕುಲಾಧಿಪತಿ ಡಾ.ಪಿ.ಶ್ಯಾಮರಾಜು, ಕುಲಪತಿ ಡಾ.ಎಸ್.ವೈ.ಕುಲಕರ್ಣಿ, ಕುಲಸಚಿವ ಡಾ.ಎಂ.ಧನಂಜಯ ಮತ್ತಿತರರು ಇದ್ದರು. 27 ರ್ಯಾಂಕ್ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ಅಭಿನಂದಿಸಲಾಯಿತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Share This Article
Leave a Comment

Leave a Reply

Your email address will not be published. Required fields are marked *