ಬೆಂಗಳೂರು: ಬಹು ನಿರೀಕ್ಷಿತ ಕೆಜಿಎಫ್ ಚಿತ್ರ ಮುಕ್ತಾಯದ ಹಂತ ತಲುಪುತ್ತಲೇ ರಾಕಿಂಗ್ ಸ್ಟಾರ್ ಯಶ್ ಸಂತಸದ ಸುದ್ದಿ ಕೊಟ್ಟಿದ್ದಾರೆ. ಅವರ ಮುಂದಿನ ಚಿತ್ರ ಮೈ ನೇಮ್ ಈಸ್ ಕಿರಾತಕ ಅನೌನ್ಸ್ ಆಗಿದೆ. ಇದೀಗ ಈ ಚಿತ್ರಕ್ಕೆ ನಾಯಕಿಯ ಆಯ್ಕೆ ಕೂಡಾ ನಡೆದಿದೆ!
ನಂದಿತಾ ಶ್ವೇತ ‘ಮೈ ನೇಮ್ ಈಸ್ ಕಿರಾತಕ’ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ನಂದಿತಾ ಶ್ವೇತಾ ಅಂದಾಕ್ಷಣ ಕನ್ನಡ ಪ್ರೇಕ್ಷಕರು ಈಕೆಯ ಗುರುತು ಹಿಡಿಯೋದು ಕಷ್ಟ. ಯಾಕೆಂದರೆ ದಶಕಗಳ ಹಿಂದೆ ಗುರುತಿಟ್ಟುಕೊಳ್ಳುವಂಥಾ ಒಂದು ಚಿತ್ರದಲ್ಲಿ ನಟಿಸಿದ್ದ ನಂದಿತಾ ವರ್ಷಗಳ ಹಿಂದೆ ಮತ್ತೆ ಬಂದರೂ ಸೌಂಡು ಮಾಡಿರಲೇ ಇಲ್ಲ.
ಅಂದಹಾಗೆ ಈ ನಂದಿತಾ 2008ರಲ್ಲಿ ತೆರೆ ಕಂಡಿದ್ದ ಲೂಸ್ ಮಾದ ಯೋಗಿ ನಾಯಕನಾಗಿದ್ದ ನಂದ ಲವ್ಸ್ ನಂದಿತಾ ಚಿತ್ರದ ನಾಯಕಿಯಾಗಿ ನಟಿಸಿದ್ದವರು. ಆ ಚಿತ್ರ ಒಂದು ಮಟ್ಟಕ್ಕೆ ಗೆಲುವು ದಾಖಲಿಸಿದರೂ ಅದಾದ ನಂತರ ನಂದಿತಾ ನಾಪತ್ತೆಯಾಗಿದ್ದರು. ಅವರು ತಮಿಳು ತೆಲುಗಿನಲ್ಲಿ ನಟಿಸುತ್ತಿದ್ದಾರೆಂಬ ಸುದ್ದಿ ಬಂದಿತ್ತಷ್ಟೆ. ಆ ನಂತರ 2015ರಲ್ಲಿ ತೆರೆ ಕಂಡ ಚಾಮರಾಜಪೇಟೆ ಎಂಬ ಚಿತ್ರಕ್ಕೆ ನಾಯಕಿಯಾಗಿ ಮತ್ತೆ ಬಂದರಾದರೂ ಆ ಚಿತ್ರವಾಗಲಿ, ನಂದಿತಾ ಆಗಲಿ ಸುದ್ದಿಯಾಗಲಿಲ್ಲ.
ಆದರೆ ನಟನೆಯಿಂದ ಗಮನ ಸೆಳೆದಿದ್ದ ನಂದಿತಾ ಇದೀಗ ಯಶ್ ಅವರಂಥಾ ಸ್ಟಾರ್ ಚಿತ್ರದ ಮೂಲಕ ಮರಳಿದ್ದಾರೆ. ಈ ಚಿತ್ರದ ನಂತರ ನಂದಿತಾ ಭರಪೂರವಾದ ಅವಕಾಶಗಳನ್ನು ತನ್ನದಾಗಿಸಿಕೊಳ್ಳುವ ನಿರೀಕ್ಷೆ ಹೊಂದಿದ್ದಾರೆ.
https://www.youtube.com/watch?v=Z46GQ9fpPQE