ಇಂಗ್ಲೆಂಡ್ ಸೂಪರ್ ಲೀಗ್ ಸ್ಮೃತಿ ಮಂಧಾನ ದಾಖಲೆ – 6 ಇನ್ನಿಂಗ್ಸ್, 338 ರನ್

Public TV
1 Min Read

ಟೌನ್‍ಟನ್: ಇಂಗ್ಲೆಂಡ್ ನ್ ಟೌನ್‍ಟನ್ ನಲ್ಲಿ ನಡೆಯುತ್ತಿರುವ ಟಿ20 ಸೂಪರ್ ಲೀಗ್ ನಲ್ಲಿ ಭಾಗವಹಿಸಿದ ಮೊದಲ ಟೀಂ ಇಂಡಿಯಾ ಆಟಗಾರ್ತಿ ಎಂಬ ಹೆಗ್ಗಳಿಕೆ ಗಳಿಸಿದ ಸ್ಮೃತಿ ಮಂಧಾನ 6 ಇನ್ನಿಂಗ್ಸ್ ಗಳಲ್ಲಿ 328 ರನ್ ಸಿಡಿಸಿ ದಾಖಲೆ ಬರೆದಿದ್ದಾರೆ.

22 ವರ್ಷ ಮಂಧಾನ ಸೂಪರ್ ಲೀಗ್ ನ ವೆಸ್ಟರ್ನ್ ಸ್ಟೋಮ್ ತಂಡದ ಪರ ಆಡುತ್ತಿದ್ದು, ಇದುವರೆಗೂ ಆಡಿರುವ 6 ಇನ್ನಿಂಗ್ಸ್ ಗಳಲ್ಲಿ ಕ್ರಮವಾಗಿ 48, 37, 52*, 43*, 102, 56 ಗಳಿಸಿ ಟೂರ್ನಿಯಲ್ಲಿ ವೈಯಕ್ತಿಕವಾಗಿ ಅತಿಹೆಚ್ಚು ರನ್ ಗಳಿಸಿದ ಆಟಗಾರ್ತಿ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಈ ಹಿಂದೆ 2016 ರಲ್ಲಿ ವೆಸ್ಟ್ ವಿಂಡೀಸ್ ಆಟಗಾರ್ತಿ ಸ್ಟೆಫಾನಿ ಟೇಲರ್ 289 ರನ್ ಗಳಿಸಿ ದಾಖಲೆ ಬರೆದಿದ್ದರು.

ಟೂರ್ನಿಯಲ್ಲಿ 18 ಎಸೆತಗಳಲ್ಲೇ ಅರ್ಧಶತಕ ಪೂರೈಸಿದ ದಾಖಲೆಯನ್ನು ಮಂಧಾನ ಮಾಡಿದ್ದು, ಉಳಿದಂತೆ ಐಸಿಸಿ ಮಹಿಳಾ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ 4ನೇ, ಟಿ20 ಯಲ್ಲಿ 13 ಸ್ಥಾನ ಪಡೆದಿದ್ದಾರೆ.

ಮಂಧಾನ ಬ್ಯಾಟಿಂಗ್ ಕುರಿತು ಪ್ರಶಂಸೆ ವ್ಯಕ್ತಪಡಿಸಿರುವ ವೆಸ್ಟರ್ನ್ ಸ್ಟೋಮ್ ತಂಡದ ನಾಯಕಿ ಹೀಥರ್ ನೈಟ್, ತಂಡದ ಪ್ರತಿ ಪಂದ್ಯದ ಗೆಲುವಿಗೆ ಮಂಧಾನ ಅವರ ಆಕ್ರಮಣಕಾರಿ ಆಟವೇ ಕಾರಣವಾಗಿದ್ದು, ಪ್ರತಿ ಎಸೆತವನ್ನು ಬೌಂಡರಿಗೆ ಸಿಡಿಸಲು ಯತ್ನಿಸುತ್ತಾರೆ. ಪ್ರತಿ ಎಸೆವನ್ನು ತಮಗೆ ಅನುಕೂಲವಾಗುವಂತೆ ಮಾರ್ಪಡು ಮಾಡಿಕೊಳ್ಳವುದು ಮಂಧಾನ ಬ್ಯಾಟಿಂಗ್ ಶೈಲಿಯ ವಿಶೇಷತೆ ಎಂದು ಹೊಗಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

https://twitter.com/SirJadejaaaa/status/1025471477049581568

Share This Article
Leave a Comment

Leave a Reply

Your email address will not be published. Required fields are marked *