ಫ್ಲೈ ಓವರ್ ಗಾಗಿ ಪ್ರಧಾನಿಗೆ ಪತ್ರ ಬರೆದ ಸಾಮಾಜಿಕ ಕಾರ್ಯಕರ್ತ

Public TV
1 Min Read

ತುಮಕೂರು: ನಗರಕ್ಕೆ ಹೆಬ್ಬಾಗಿಲಿನಂತಿರುವ ಕ್ಯಾತ್ಸಂದ್ರದ ಸಿದ್ಧಗಂಗಾ ವೃತ್ತದಲ್ಲಿ ರಸ್ತೆ ದಾಟೋದು ಬಹಳ ಕಷ್ಟ. ತುಸು ಯಾಮಾರಿದ್ರೂ ಅಪಘಾತ ಗ್ಯಾರಂಟಿ. ಸ್ಥಳೀಯರ ಈ ಸಮಸ್ಯೆ ಅರಿತ ಸಾಮಾಜಿಕ ಕಾರ್ಯಕರ್ತರ ಆಟೋ ಯಡಿಯೂರಪ್ಪ, ಪ್ರಧಾನಿ ಮೋದಿಗೆ ಪತ್ರ ಬರೆದು ಮೇಲ್ಸೆತುವೆಗೆ ಮನವಿ ಮಾಡಿದ್ದರು.

ಆಟೋ ಯಡಿಯೂರಪ್ಪ ಬರೆದ ಪತ್ರಕ್ಕೆ ಪ್ರತಿಕ್ರಿಯಿಸಿದ ಪ್ರದಾನಿ ಕಾರ್ಯಾಲಯ ತುಮಕೂರು ಜಿಲ್ಲಾಧಿಕಾರಿಗೆ ನಿರ್ದೆಶನ ನೀಡಿದೆ. ಜಿಲ್ಲಾಧಿಕಾರಿಗಳು ಪಿಎಂ ಕಚೇರಿ ಪತ್ರ ಮಹಾನಗರ ಪಾಲಿಕೆಗೆ ರವಾನಿಸಿದ್ದಾರೆ. ಅಲ್ಲದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೂ ಪ್ರದಾನಿ ಮಂತ್ರಿಗೆ ಬರೆದಿದ್ದ ಪತ್ರವನ್ನ ಕಳುಹಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಆಟೋ ಯಡಿಯೂರಪ್ಪ ತಮ್ಮ ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಸಂಬಂಧಪಟ್ಟರ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹದ ಹೋರಾಟಕ್ಕೆ ಮುಂದಾಗುವ ಎಚ್ಚರಿಕೆ ನೀಡಿದ್ದಾರೆ.

ಈ ವೃತ್ತ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಮೂಲಕ ಬಹುತೇಕ ಜಿಲ್ಲೆಗಳನ್ನ ಸಂಪರ್ಕಿಸುವ ರಸ್ತೆ ಕೂಡ ಆಗಿದೆ. ಹಾಗಾಗಿ ವಾಹನ ಸಂಚಾರ ದಟ್ಟವಾಗಿದೆ. ಈ ವೃತ್ತದ ಮೂಲಕ ದಾಟಬೇಕಾದರೆ ಹರಸಹಾಸ ಪಡಬೇಕು. ಅಪಘಾತವಾಗಿ ಹಲವು ಜೀವಗಳು ಬಲಿಯಾಗಿವೆ.

Share This Article
Leave a Comment

Leave a Reply

Your email address will not be published. Required fields are marked *