ಬೆಳಗಾವಿ: ತೀಟೆಗಾಗಿ ಹುಟ್ಟಿದ ಶಿಶು ಮುಖ್ಯಮಂತ್ರಿ ಕುಮಾರಸ್ವಾಮಿ ಎನ್ನಬೇಕೆ? ಅಥವಾ ಎಲ್ಲಾ ಸಮುದಾಯವನ್ನು ಮುನ್ನಡೆಸುವ ಸಿಎಂ ಎನ್ನಬೇಕೆ? ಎಂದು ಕೆಪಿಸಿಸಿ ಮಾಜಿ ಸದಸ್ಯ ಶಂಕರ್ ಮುನವಳ್ಳಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಎಸ್‍ಸಿ, ಎಸ್‍ಟಿ ಮುಂಬಡ್ತಿ ಮೀಸಲಿಗಾಗಿ ಆಗಿರೋ ಅನ್ಯಾಯವನ್ನು ಶೀಘ್ರದಲ್ಲಿ ಸರಿಪಡಿಸಬೇಕು. ರಾಜ್ಯದಲ್ಲಿ ದಲಿತರಿಗೆ ಮೀಸಲಾತಿ ಶೇ.50ಕ್ಕೆ ಹೆಚ್ಚಳ ಮಾಡಬೇಕು. ಇದಕ್ಕೆ ಸ್ಪಂದಿಸದಿದ್ರೆ ಹೋರಾಟದ ಹಾದಿ ತುಳಿಯುತ್ತೇವೆ ಅಂತಾ ಎಚ್ಚರಿಕೆ ನೀಡಿದ್ರು.
ದಲಿತ ಸಮೂದಾಯಕ್ಕೆ ಸೇರಿದ ಶಾಸಕರೆಲ್ಲರು ಶಂಡರು. ತಮ್ಮ ಬದಕು, ಕುಟುಂಬದ ಬದುಕಿಗಾಗಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ದಲಿತ ಸಮೂದಾಯಕ್ಕೆ ನ್ಯಾಯ ಕೊಡಲು ಅವರು ಶಾಸಕರಾಗಿಲ್ಲ ಅಂತ ಮುನವಳ್ಳಿ ಹೇಳಿಕೆ ನೀಡಿದ್ದು, ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.