ನೊಂದ ವಿಜಯಲಕ್ಷ್ಮಿಗೆ ಸ್ಯಾಂಡಲ್‍ ವುಡ್‍ನಿಂದ ಸಿನಿಮಾ ಆಫರ್

Public TV
1 Min Read

ಬೆಂಗಳೂರು: ಹಿರಿಯ ನಟಿ ವಿಜಯಲಕ್ಷ್ಮಿ ಅವರಿಗೆ ಇತ್ತೀಚೆಗೆ ಯಾವುದೇ ಸಿನಿಮಾದಲ್ಲಿ ಅವಕಾಶಗಳು ಸಿಕ್ಕಿರಲಿಲ್ಲ ಎಂಬ ಸುದ್ದಿ ವರದಿಯಾಗಿತ್ತು. ಆದರೆ ಈಗ ಅವರಿಗೆ ಸ್ಯಾಂಡಲ್‍ವುಡ್ ನ ಸಿನಿಮಾವೊಂದರಲ್ಲಿ ಅಭಿನಯಿಸಲು ಅವಕಾಶ ಲಭಿಸಿದೆ.

ವಿಜಯಲಕ್ಷ್ಮಿ ಅವರು ಡಾ. ವಿಷ್ಣುವರ್ಧನ ಅಭಿನಯದ `ಸೂರ್ಯವಂಶ’ ಹಾಗು ಬಹುಭಾಷ ನಟ ಪ್ರಕಾಶ್ ರೈ ಅವರ ಅಭಿನಯದ `ನಾಗಮಂಡಲ’ ಸೂಪರ್ ಹಿಟ್ ಸಿನಿಮಾದಲ್ಲಿ ನಟಿಸಿದ್ದರು. ಈ ಎರಡು ಸಿನಿಮಾಗಳು ಅವರಿಗೆ ಹೆಸರು ತಂದು ಕೊಟ್ಟಿದ್ದವು. ಆದರೆ ಇತ್ತೀಚಿಗೆ ಅವರಿಗೆ ಸಿನಿಮಾರಂಗದಲ್ಲಿ ಯಾವುದೇ ಅವಕಾಶಗಳು ಸಿಕ್ಕಿರಲಿಲ್ಲ.

ವಿಜಯಲಕ್ಷ್ಮಿ ಅವರಿಗೆ ಸ್ಯಾಂಡಲ್‍ವುಡ್‍ನಲ್ಲಿ ನಟ ವಿನೋದ್ ಪ್ರಭಾಕರ್ ನಟನೆಯ `ಫೈಟರ್’ ಸಿನಿಮಾದಲ್ಲಿ ಅವಕಾಶ ಲಭಿಸಿದೆ. ಇತ್ತೀಚೆಗಷ್ಟೆ `ಫೈಟರ್’ ಸಿನಿಮಾದ ಮುಹೂರ್ತ ಅದ್ಧೂರಿಯಾಗಿ ನೇರವೇರಿತ್ತು. ಮುಹೂರ್ತ ಕಾರ್ಯಕ್ರಮದಲ್ಲಿ ನಟ ದರ್ಶನ್ ಕೂಡ ಪಾಲ್ಗೊಂಡಿದ್ದರು. ವಿಜಯಲಕ್ಷ್ಮಿ ಅವರು `ಫೈಟರ್’ ಸಿನಿಮಾದಲ್ಲಿ ಎರಡು ರೋಲ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ವಿಜಯಲಕ್ಷ್ಮಿ ನಟ ವಿನೋದ್ ಪ್ರಭಾಕರ್ ಅವರ ತಾಯಿಯ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಜೊತೆಗೆ ಒಬ್ಬ ಜಿಲ್ಲಾಧಿಕಾರಿ ಆಗಿ ಕೂಡ ನಟಿಸುತ್ತಿದ್ದಾರೆ. ಇದರಿಂದ ಒಂದೇ ಸಿನಿಮಾದಲ್ಲಿ ಎರಡು ಶೇಡ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ತಮ್ಮ ಸಿನಿಮಾ ರಂಗದ ಜೀವನವನ್ನು ಮತ್ತೆ ಆರಂಭಿಸುತ್ತಿದ್ದಾರೆ.

`ಫೈಟರ್’ ಸಿನಿಮಾದ ಚಿತ್ರೀಕರಣ ಆಗಸ್ಟ್ 6 ರಿಂದ ಪ್ರಾರಂಭವಾಗಲಿದೆ. ಈ ಸಿನಿಮಾದ ಶೂಟಿಂಗ್ ಬೆಂಗಳೂರು ಮತ್ತು ಉತ್ತರ ಕರ್ನಾಟಕದಲ್ಲಿ ನಡೆಯಲಿದೆ. ವಿಜಯಲಕ್ಷ್ಮಿ ಇದೇ ಮೊದಲ ಬಾರಿಗೆ ವಿನೋದ್ ಪ್ರಭಾಕರ್ ಜೊತೆಗೆ ಅಭಿನಯಿಸುತ್ತಿದ್ದಾರೆ. `ಫೈಟರ್ ಸಿನಿಮಾವನ್ನು ನಿರ್ದೇಶಕ ನೂತನ್ ಉಮೇಶ್ ಅವರು ನಿರ್ಮಾಣ ಮಾಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *