ಶಿಕ್ಷಣ ಮುಗಿಯುವವರೆಗೂ ಸಾಮಾಜಿಕ ಜಾಲತಾಣವನ್ನ ಬಳಸಲ್ಲ – ವಿದ್ಯಾರ್ಥಿಗಳಿಂದ ಪೋಷಕರ ಮೇಲೆ ಪ್ರತಿಜ್ಞೆ

Public TV
1 Min Read

ಮಂಗಳೂರು: ನನ್ನ ಪದವಿ ಪೂರ್ವ ಶಿಕ್ಷಣ ಮುಗಿಯುವವರೆಗೂ ಸಾಮಾಜಿಕ ಜಾಲತಾಣವನ್ನು ಬಳಸೋದಿಲ್ಲ ಅಂತಾ ವಿದ್ಯಾರ್ಥಿಗಳು ತಂದೆ -ತಾಯಿಯ ಮೇಲೆ ಪ್ರಮಾಣ ಮಾಡಿರುವ ವಿಶೇಷ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.

ಪುತ್ತೂರಿನ ಅಂಬಿಕಾ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಪ್ರಮಾಣ ಮಾಡಿದ್ದು, ಜೀವನದ ಗುರಿ ತಲುಪುವವರೆಗೆ ಸಾಮಾಜಿಕ ಜಾಲತಾಣವಾದ ವಾಟ್ಸಪ್, ಫೇಸ್ ಬುಕ್ ಬಳಸಲ್ಲ ಅಂತಾ ತಂದೆ-ತಾಯಿಯ ಮೇಲೆ ಪ್ರತಿಜ್ಞೆ ಕೈಗೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ಸೃಷ್ಟಿಸಿ ಪರಿಚಯ ಮಾಡಿಕೊಂಡು ದುರುಪಯೋಗ ಮಾಡುವ ಹಲವು ಘಟನೆಗಳನ್ನು ಕೇಳಿದ್ದೇವೆ, ನೋಡಿದ್ದೇವೆ. ಇತ್ತೀಚೆಗೆ ಗಡಿಭಾಗದ ಕೇರಳದಲ್ಲಿ ಲವ್ ಜಿಹಾದ್ ಪ್ರಕರಣಗಳು ಆಗಿವೆ. ಇದು ನಾನು ಪರೋಕ್ಷವಾಗಿ ಭಯೋತ್ಪಾದನೆಗೆ ಮತ್ತು ಹಲವಾರು ಘಟನೆಗಳಿಗೆ ಸಾಮಾಜಿಕ ಜಾಲತಾಣಗಳೇ ಕಾರಣವಾಗಿದೆ. ಆದ್ದರಿಂದ ನಮ್ಮನ್ನು ಹೆತ್ತುಹೊತ್ತ ತಂದೆ-ತಾಯಿಗಳಿಗೆ ನಾವು ಸಿಗಬೇಕು. ನಮ್ಮ ಸಮಯವನ್ನು, ಜೀವನವನ್ನು ತಿನ್ನುವ ಸಾಮಾಜಿಕ ಜಾಲತಾಣಗಳಿಂದ ಹೊರಬರಬೇಕೆಂದು ನಾವು ಸ್ವ- ತೀರ್ಮಾನ ತೆಗೊಂಡು ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ವಿದ್ಯಾರ್ಥಿನಿಯರು ಹೇಳಿದ್ದಾರೆ.

Share This Article
1 Comment

Leave a Reply

Your email address will not be published. Required fields are marked *