ಅಂಬಾನಿ ಪುತ್ರನ ನಿಶ್ಚಿತಾರ್ಥದಲ್ಲಿ ಬಲೂನ್ ಟ್ರೇಯಲ್ಲಿ ಅತಿಥಿಗಳಿಗೆ ಭಕ್ಷ್ಯ- ವಿಡಿಯೋ ನೋಡಿ

Public TV
2 Min Read

ಮುಂಬೈ: ಇತ್ತೀಚೆಗೆ ರಿಲಯನ್ಸ್ ಇಂಡಸ್ಟ್ರೀಸ್ ಕಂಪೆನಿಯ ಮುಖ್ಯಸ್ಥ ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಅವರ ಪುತ್ರ ಆಕಾಶ್ ಅಂಬಾನಿ ನಿಶ್ಚಿತಾರ್ಥ ಸಮಾರಂಭದಲ್ಲಿ ಆಕಾಶದಿಂದ ಬಲೂನ್ ಟ್ರೇಗಳ ಮೂಲಕ ಊಟ ಬರುವ ವ್ಯವಸ್ಥೆ ಮಾಡಲಾಗಿತ್ತು.

ಗುರುವಾರ ಮುಂಬೈನಲ್ಲಿ ಆಕಾಶ್ ಅಂಬಾನಿ ಹಾಗೂ ಶ್ಲೋಕಾ ಮಹ್ತಾ ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಿದೆ. ನಿಶ್ಚಿತಾರ್ಥದಲ್ಲಿ ವರ್ಣ ರಂಜಿತವಾದ ಪುಷ್ಪಾಲಂಕಾರವನ್ನು ಮಾಡಲಾಗಿತ್ತು. ಇದು ಎಲ್ಲರ ಕಣ್ಮನವನ್ನು ಸೆಳೆಯುತ್ತಿತ್ತು. ಇದರ ಜೊತೆಗೆ ಬಂದಿದ್ದ ಅತಿಥಿಗಳಿಗೆ ಬಲೂನ್ ಗಳ ಮೂಲಕ ಆಹಾರದ ಟ್ರೇಗಳು ಗಾಳಿಯಲ್ಲಿ ಬಂದು ಅವರ ಕೈಗೆ ಸೇರುತ್ತಿದ್ದವು.

ಈ ಆಹಾರದ ಟ್ರೇಗಳು ಗಾಳಿಯಲ್ಲಿ ಬಂದು ಬೀಳುತ್ತಿದ್ದ ವಿಡಿಯೋ ಬೆಳಕಿಗೆ ಬಂದಿದ್ದು, ಈಗ ವಿಡಿಯೋ ವೈರಲ್ ಆಗಿದೆ. ನಿಶ್ಚಿತಾರ್ಥದಲ್ಲಿ ಫ್ರೆಂಚ್ ಐಷಾರಾಮಿ ಆಹಾರದ ಬ್ರಾಂಡ್ `ಲಡುರೀ’ ಯನ್ನು ಪಾರ್ಟಿಯಲ್ಲಿದ್ದ ಅತಿಥಿಗಳಿಗೆ ನೀಡಲಾಯಿತು.

ಇನ್ನು ನಿಶ್ಚಿತಾರ್ಥ ನಡೆದ ವೇದಿಕೆಯನ್ನು ವಿವಿಧ ರೀತಿಯ ವರ್ಣ ರಂಜಿತವಾದ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ನಿಶ್ಚಿತಾರ್ಥದ ಕೇಕ್ ಕೂಡ ಆಕರ್ಷಕವಾಗಿ ವಿನ್ಯಾಸ ಮಾಡಿಸಲಾಗಿತ್ತು. ಪಾರ್ಟಿಯಲ್ಲಿ ಎಲ್ಲೆಲ್ಲೂ ಹೂಗಳಿಂದ ಅಲಂಕೃತಗೊಂಡಿತ್ತು.

ಆಕಾಶ್ ಹಾಗೂ ಶ್ಲೋಕಾ ನಿಶ್ಚಿತಾರ್ಥ ಮುಕೇಶ್ ಅಂಬಾನಿ ನಿಶ್ಚಿತಾರ್ಥದಲ್ಲಿ ಬಾಲಿವುಡ್ ತಾರೆಯರು, ಕ್ರಿಕೆಟರ್ ಹಾಗೂ ಗಣ್ಯ ವ್ಯಕ್ತಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸಚಿನ್ ತೆಂಡೂಲ್ಕರ್ ಹಾಗೂ ಅವರ ಪತ್ನಿ ಅಂಜಲಿ ಭಾಗಿಯಾಗಿದ್ದರು. ಇನ್ನೂ ಬಾಲಿವುಡ್ ತಾರೆಗಳಾದ ಶಾರೂಖ್ ಖಾನ್, ಪ್ರಿಯಂಕಾ ಚೋಪ್ರಾ, ನಿಕ್ ಜೋನಸ್, ಕರಣ್ ಜೋಹರ್, ಅಲಿಯಾ ಭಟ್ ಹಾಗೂ ರಣ್‍ಬೀರ್ ಕಪೂರ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.

ಕಾರ್ಯಕ್ರಮಕ್ಕೆ ಅಭಿಷೇಕ್ ಬಚ್ಚನ್ ಪತ್ನಿ ಐಶ್ಚರ್ಯಾ ರೈ ಬಚ್ಚನ್ ಮತ್ತು ಮಗಳು ಆರಾಧ್ಯಳೊಂದಿಗೆ ಆಗಮಿಸಿದ್ದರು. ಅಮೀರ್ ಖಾನ್, ಕಿರಣ್ ರಾವ್, ಹಿರಿಯ ನಟಿ ರೇಖಾ, ಪರಿಣೀತಿ ಚೋಪ್ರಾ, ಆದಿತ್ಯ ರಾಯ್ ಕಪೂರ್, ಸಿದ್ದಾರ್ಥ್ ಮತ್ತು ಶ್ರದ್ಧಾ ಕಪೂರ್ ಇನ್ನು ಅನೇಕ ಇನ್ನು ಗಣ್ಯರು ಪಾಲ್ಗೊಂಡಿದ್ದರು.

ಮುಕೇಶ್ ಹಾಗೂ ನೀತಾ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ನಿಶ್ಚಿತಾರ್ಥ ಕೂಡ ಉದ್ಯಮಿ ಅಜಯ್ ಪಿರಾಮಲ್ ಅವರ ಪುತ್ರ ಆನಂದ್ ಜೊತೆ ಮೇ ತಿಂಗಳಲ್ಲಿ ನಡೆದಿತ್ತು. ಸದ್ಯ ಈಗ ಆಕಾಶ್- ಶ್ಲೋಕಾ, ಇಶಾ ಹಾಗೂ ಆನಂದ್ ಮದುವೆ ಇದೇ ವರ್ಷ ಡಿಸೆಂಬರ್ ತಿಂಗಳಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ.

https://www.youtube.com/watch?v=opEIKlOe6CM

Share This Article
Leave a Comment

Leave a Reply

Your email address will not be published. Required fields are marked *