ಬೆಂಗಳೂರು: ಮಂಡ್ಯ ಲೋಕಸಭಾ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಮಾಜಿ ಡಿಸಿಎಂ ಆರ್ ಅಶೋಕ್‍ರನ್ನ ಕಣಕ್ಕಿಳಿಸಲು ವಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ ಒಲವು ತೋರಿಸಿದ್ದಾರೆ.
ಸೋಮವಾರ ಅಹ್ಮದಾಬಾದ್‍ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರನ್ನು ಭೇಟಿಯಾಗಿದ್ದ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಒಕ್ಕಲಿಗ ನಾಯಕರಾಗಿರೋ ಆರ್.ಅಶೋಕ್ ಅವರೇ ಸರಿಯಾದ ಅಭ್ಯರ್ಥಿಯಾಗ್ತಾರೆ ಅಂತ ಹೇಳಿದ್ದಾರೆ.
ಮೈತ್ರಿ ಸರ್ಕಾರದಲ್ಲಿ ಜೆಡಿಎಸ್, ಕಾಂಗ್ರೆಸ್ ನಡುವೆ ಕಚ್ಚಾಟ ಇದೆ. ಇದರ ಲಾಭ ಪಡೆಯಲು ನಾವು ಸಮರ್ಥವಾದ ಅಭ್ಯರ್ಥಿಯನ್ನೇ ನಿಲ್ಲಿಸಬೇಕಿದೆ. ಹಾಗಾಗಿ ಆರ್.ಅಶೋಕ್ ಅವರನ್ನ ಮಂಡ್ಯ ಲೋಕಸಭೆ ಉಪಚುನಾವಣೆಗೆ ನಿಲ್ಲಿಸಬೇಕು. ಆರ್ ಎಸ್‍ಎಸ್ ಅಭಿಪ್ರಾಯವೂ ಕೂಡ ಅಶೋಕ್ ಸ್ಪರ್ಧೆಗೆ ಸಲಹೆ ನೀಡಿದೆ ಅಂತ ಬಿಎಸ್‍ವೈ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮುಂದೆ ಪ್ರಸ್ತಾಪಿಸಿದ್ದಾರೆ. ಇದನ್ನೂ ಓದಿ: ಮತ್ತೆ ರಾಜ್ಯದಲ್ಲಿ ಆಪರೇಷನ್ ಕಮಲ? ಶಾ ಜೊತೆ ಬಿಎಸ್‍ವೈ ಚರ್ಚಿಸಿದ್ದೇನು?
ಇದೇ ವೇಳೆ ರಾಮುಲು ರಾಜೀನಾಮೆಯಿಂದ ತೆರವಾದ ಬಳ್ಳಾರಿಗೆ ಜೆ.ಶಾಂತಾ ಮತ್ತು ತಮ್ಮ ರಾಜೀನಾಮೆಯಿಂದ ತೆರವಾದ ಶಿವಮೊಗ್ಗಕ್ಕೆ ಬಿ.ವೈ ರಾಘವೇಂದ್ರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಆದ್ರೆ ಈ ವಿಚಾರವಾಗಿ ಅಮಿತ್ ಷಾ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.