ಶಾಲೆ ನಡೆಯಲೇಬಾರದೆಂದು ಸಹಪಾಠಿಯನ್ನು 10ಕ್ಕೂ ಹೆಚ್ಚು ಬಾರಿ ಇರಿದು ಕೊಂದೇಬಿಟ್ಟ!

Public TV
2 Min Read

ವಡೋದರ: ಕಳೆದ ಎರಡು ದಿನಗಳ ಹಿಂದೆ ಗುಜರಾತ್ ವಡೋದರ ಶಾಲೆಯ ಶೌಚಾಲಯದಲ್ಲಿ ಕೊಲೆಯಾಗಿದ್ದ ವಿದ್ಯಾರ್ಥಿಯ ಪ್ರಕರಣವನ್ನು ಬೇಧಿಸಲು ಪೊಲೀಸರು ಯಶಸ್ವಿಯಾಗಿದ್ದು, ಅದೇ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಕೊಲೆ ಮಾಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಸದ್ಯ ಶಾಲೆಯ ಹಿರಿಯ ವಿದ್ಯಾರ್ಥಿಯನ್ನು ವಶಕ್ಕೆ ಪಡೆದು ಮಕ್ಕಳ ಬಾಲಾಪರಾಧಿ ಕಾಯ್ದೆಯ ಅಡಿ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಏನಿದು ಘಟನೆ:
ಕಳೆದ ಶುಕ್ರವಾರ 14 ವರ್ಷದ 9ನೇತರಗತಿ ವಿದ್ಯಾರ್ಥಿಯನ್ನು ಶಾಲೆಯ ಶೌಚಾಲಯದಲ್ಲಿ ಚಾಕುವಿನಿಂದ ಹಿರಿದು ಕೊಲೆ ಮಾಡಲಾಗಿತ್ತು. ಈ ಶಾಲೆಯ ಆಡಳಿತ ಮಂಡಳಿಯಿಂದ ಮಾಹಿತಿ ಪಡೆದು ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ವಿಚಾರಣೆ ಆರಂಭಿಸಿದ್ದರು. ಈ ವೇಳೆ ಕೊಲೆಯಾದ ವಿದ್ಯಾರ್ಥಿ ದೇಹದ ಮೇಲೆ 10ಕ್ಕೂ ಹೆಚ್ಚು ಗಾಯದ ಗುರುತು ಪತ್ತೆಯಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಶಾಲೆಯ 10ನೇ ವಿದ್ಯಾರ್ಥಿ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿ ವಿದ್ಯಾರ್ಥಿಯನ್ನು ಕಳೆದ ಒಂದು ವಾರದ ಹಿಂದೆಯಷ್ಟೇ ಶಾಲೆಗೆ ದಾಖಲು ಮಾಡಿಕೊಳ್ಳಲಾಗಿತ್ತು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಶಾಲೆಯ ಟಾಯ್ಲೆಟ್‍ನಲ್ಲಿ 2ನೇ ತರಗತಿ ಬಾಲಕನ ಕತ್ತು ಸೀಳಿ ಕೊಲೆ

ಕೊಲೆ ಮಾಡಿದ್ದು ಏಕೆ?
ಆರೋಪಿ ವಿದ್ಯಾರ್ಥಿ ಕೊಲೆಗೆ ಮಾಡಲು ಕಾರಣವನ್ನು ಬಿಚ್ಚಿಟ್ಟಿದ್ದು, ಶಾಲೆಯ ಶಿಕ್ಷಕರು ಹೋಂ ವರ್ಕ್ ಮಾಡದೇ ಬಂದ ಕಾರಣ ಬೈದಿದ್ದರು. ಅದ್ದರಿಂದ ಶಾಲೆ ನಾಳೆಯಿಂದ ನಡೆಯಬಾರದು ಎಂದು ತೀರ್ಮಾನಿಸಿ ಈ ಕೃತ್ಯ ನಡೆಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಶಾಲೆಯಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದ ವೇಳೆ ವಿದ್ಯಾರ್ಥಿಯ ಕೃತ್ಯ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಬಾಲಕ ಪ್ರದ್ಯುಮನ್ ಕೊಲೆ ಆರೋಪಿಯನ್ನ ಚಾಕು ಅಂಗಡಿಗೆ ಕರೆದುಕೊಂಡು ಹೋದ ಸಿಬಿಐ

ಆರೋಪಿ ವಿದ್ಯಾರ್ಥಿ ತನ್ನ ಪೋಷಕರ ಮನೆಯಲ್ಲಿ ವಾಸವಿದ್ದು, ಆತನ ತಂದೆ ತಾಯಿ ಗುಜರಾತ್‍ನ ಅನಂದ್ ನಗರದಲ್ಲಿ ನೆಲೆಸಿದ್ದಾರೆ ಎಂಬ ಮಾಹಿತಿ ಲಭಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಕಳೆದ ವರ್ಷ ಗುರುಗಾಂವ್ ನಲ್ಲಿ ಇಂತಹದ್ದೇ ಘಟನೆ ವರದಿಯಾಗಿತ್ತು. 7 ವರ್ಷದ ಬಾಲಕನನ್ನು ಸಹಪಾರಿ ವಿದ್ಯಾರ್ಥಿ ಶೌಚಾಲಯದಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಸದ್ಯ ಈ ಘಟನೆ ಮಸುವ ಮುನ್ನವೇ ಮತ್ತೊಂದು ಘಟನೆ ನಡೆದಿದ್ದು, ಪೋಷಕರಲ್ಲಿ ಅಂತಕಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಪ್ರದ್ಯುಮನ್ ಕೊಲೆ ಪ್ರಕರಣ- ವಿದ್ಯಾರ್ಥಿ ಮೇಲೆ ತಿಂಗಳ ಹಿಂದೆಯೇ ಸಿಬಿಐಗೆ ಅನುಮಾನವಿತ್ತು

Share This Article
Leave a Comment

Leave a Reply

Your email address will not be published. Required fields are marked *