ಸಾಕು ನಾಯಿ ತೊಳೆಯಲು ಹೋಗಿ ಸ್ನೇಹಿತರಿಬ್ಬರು ನೀರುಪಾಲು!

Public TV
1 Min Read

ತುಮಕೂರು: ಸಾಕು ನಾಯಿಯ ಮೈತೊಳೆಯಲು ಹೋದ ಇಬ್ಬರು ಬಾಲಕರು ಕಾಲುಜಾರಿ ಕೆರೆಗೆ ಬಿದ್ದು ಮೃತಪಟ್ಟಿರುವ ಘಟನೆ ಜಿಲ್ಲೆಯ ಶಿರಾ ತಾಲೂಕಿನ ಹಳೇಬಿಜ್ಜನಬೆಳ್ಳ ಗ್ರಾಮದಲ್ಲಿ ಸಂಭವಿಸಿದೆ.

ಸಚಿನ್ (14) ಮತ್ತು ಹರೀಶ್ (14) ನೀರು ಪಾಲಾದ ಬಾಲಕರು. ಈ ಇಬ್ಬರು ಬಾಲಕರು ಸ್ನೇಹಿತರಾಗಿದ್ದು, ಗುರುವಾರ ಮಧ್ಯಾಹ್ನದ ವೇಳೆಗೆ ಸಚಿನ್ ಮನೆಯ ಸಾಕು ನಾಯಿಯ ಮೈತೊಳೆಯಲು ಊರ ಹೊರವಲಯದಲ್ಲಿರುವ ಕೆರೆಗೆ ಹೋಗಿದ್ದಾರೆ.

ಈ ವೇಳೆ ನಾಯಿ ಮೈ ಮೇಲೆ ನೀರು ಹಾಕುತ್ತಿದ್ದಂತೆ ತಪ್ಪಿಸಿಕೊಂಡಿದೆ. ಆಗ ನಾಯಿಯನ್ನು ಹಿಡಿಯಲು ಹೋದ ಇಬ್ಬರೂ ಬಾಲಕರು ಕಾಲು ಜಾರಿ ಕೆರೆಗೆ ಬಿದ್ದಿದ್ದಾರೆ. ಪರಿಣಾಮ ಈಜು ಬಾರದೆ ಇಬ್ಬರು ಮೃತಪಟ್ಟಿದ್ದಾರೆ.

ಈ ಸಂಬಂಧ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *