ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರ: ಅಧಿಕಾರ ಸೂತ್ರ ಹೇಗಿರಲಿದೆ? ಸವಾಲುಗಳು ಏನು?

Public TV
1 Min Read

ಬೆಂಗಳೂರು: ಕರ್ನಾಟಕ ಪೊಲಿಟಿಕಲ್ ಲೀಗ್ ಕಪ್ ಅನ್ನು ಜಿಡಿಎಸ್- ಕಾಂಗ್ರೆಸ್ ಮೈತ್ರಿಕೂಟ ಕೊನೆಗೂ ಗೆದ್ದುಕೊಂಡಿದೆ. ಈ ಬಾರಿ ಕಪ್ ನಮ್ದೆ ಎಂದಿದ್ದ ಎಚ್‍ಡಿಕೆ ಕುಮಾರಸ್ವಾಮಿ ಕಪ್ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ನಾವು ಕಿಂಗ್ ಮೇಕರ್ ಅಲ್ಲ ಕಿಂಗ್ ಆಗ್ತೀವಿ ಎಂದಿದ್ದ ಕುಮಾರಸ್ವಾಮಿ `ಕಿಂಗ್’ ಆಗಿದ್ದಾರೆ.

ಈಗ ಕರ್ನಾಟಕದ ಕಿಂಗ್ ಆಗಿ ಆಯ್ಕೆಯಾದರೂ ಮುಂದೆ ಎಚ್‍ಡಿಕೆ ಮೇಲೆ ದೊಡ್ಡ ಸವಾಲಿದೆ. ಎರಡು ಪಕ್ಷಗಳನ್ನು ಒಗ್ಗೂಡಿಸಿ ನಡೆಸಿಕೊಂಡು ಹೋಗುವ ಜವಾಬ್ದಾರಿ ಎಚ್‍ಡಿಕೆ ಮೇಲಿದೆ. ಹೀಗಾಗಿ ಮೈತ್ರಿ ಸರ್ಕಾರದ ಮುಂದಿನ ಸವಾಲು ಮತ್ತು ಮೈತ್ರಿ ಸರ್ಕಾರದ ಅಧಿಕಾರದ ಸೂತ್ರ ಹೇಗಿರಲಿದೆ ಎನ್ನುವ ಕಿರು ಮಾಹಿತಿ ಇಲ್ಲಿದೆ.

ಅಧಿಕಾರ ಸೂತ್ರ ಹೇಗಿರಲಿದೆ?
ಇದು ಜೆಡಿಎಸ್ ನೇತೃತ್ವದ ಮೈತ್ರಿಕೂಟ ಸರ್ಕಾರವಾಗಿರುವ ಕಾರಣ ಪೂರ್ಣಾವಧಿಗೆ ಎಚ್.ಡಿ. ಕುಮಾರಸ್ವಾಮಿಯೇ ಮುಖ್ಯಮಂತ್ರಿ ಆಗಿರುತ್ತಾರೆ. ಜೆಡಿಎಸ್ ಗೆ ಕಾಂಗ್ರೆಸ್ ಬೇಷರತ್ ಬೆಂಬಲ ನೀಡಿರುವ ಕಾರಣ ಕೈ ಪಾಳೆಯಕ್ಕೆ ಉಪ ಮುಖ್ಯಮಂತ್ರಿ ಸಿಗುವ ಸಾಧ್ಯತೆಯಿದೆ. ಅದರಲ್ಲೂ ಕೆಪಿಸಿಸಿ ಅಧ್ಯಕ್ಷರಾಗಿರುವ ಪರಮೇಶ್ವರ್ ಅವರಿಗೆ ಉಪಮುಖ್ಯಮಂತ್ರಿ ಸಿಗುವ ಸಾಧ್ಯತೆಯಿದೆ.

ಸಚಿವ ಸಂಪುಟದಲ್ಲಿ ಭಾಗಿಯಾಗಲು ಡಿಕೆ ಶಿವಕುಮಾರ್ ಒಪ್ಪಿಗೆ ನೀಡಿಲ್ಲ ಎನ್ನಲಾಗಿದೆ. ಸ್ಪೀಕರ್, ಗೃಹ, ಗ್ರಾಮೀಣಾಭಿವೃದ್ಧಿ, ಇಂಧನ, ಉನ್ನತ ಶಿಕ್ಷಣ, ಸಾರಿಗೆ, ಆರೋಗ್ಯ, ಬೃಹತ್ ಕೈಗಾರಿಕೆ, ಮಹಿಳೆ ಮತ್ತು ಮಕ್ಕಳ ಖಾತೆ ಸೇರಿದಂತೆ ಕಾಂಗ್ರೆಸ್‍ಗೆ 20 ಸಚಿವ ಸ್ಥಾನ ಸಿಗುವ ಸಾಧ್ಯತೆಯಿದೆ.

ಹಣಕಾಸು, ಲೋಕೋಪಯೋಗಿ, ಕಂದಾಯ, ಸಹಕಾರ, ಬೆಂಗಳೂರು ಅಭಿವೃದ್ಧಿ, ಪ್ರಾಥಮಿಕ ಶಿಕ್ಷಣ, ಸಹಕಾರ ಖಾತೆಗಳು ಸೇರಿ ಒಟ್ಟು 12 ಸಚಿವ ಸ್ಥಾನಗಳನ್ನು ಜೆಡಿಎಸ್‍ಗೆ ನೀಡುವ ಸಾಧ್ಯತೆಯಿದೆ.

 ಸವಾಲುಗಳು ಏನು?
ಸೋಮವಾರ ಮುಖ್ಯಮಂತ್ರಿಯಾಗಿ ಎಚ್‍ಡಿಕೆ  ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮರುದಿನ ವಿಳಂಬ ಮಾಡದೆ ಮಂಗಳವಾರವೇ ವಿಶ್ವಾಸಮತ ಯಾಚನೆ ಮಾಡುವ ಸಾಧ್ಯತೆಯಿದೆ. ಬಿಎಸ್‍ವೈ ಸೋತರೂ ಆಪರೇಷನ್ ಕಮಲದ ಭೀತಿ ಇರುವ ಎಲ್ಲ ಶಾಸಕರನ್ನು ಒಗ್ಗಟ್ಟಾಗಿ ಇಡುವುದು ಬಹುದೊಡ್ಡ ಸವಾಲು ಇದ್ದು, ಬಹುಮತ ಸಾಬೀತುಪಡಿಸಿದರೆ 3ರಿಂದ 6 ತಿಂಗಳು ಎಚ್‍ಡಿಕೆ ನಿರಾಳವಾಗಿರಬಹುದು. ಮೈತ್ರಿಕೂಟದಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ ತಲೆದೋರಿದ್ದರೂ ಸರ್ಕಾರಕ್ಕೆ ಅಪಾಯವಿದ್ದು, ರಾಜಧರ್ಮ ಪಾಲನೆ ಮೂಲಕ ಮೈತ್ರಿ ಕಾಪಾಡಿಕೊಳ್ಳಬೇಕಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *