ಉಡುಪಿ: ಬಿಜೆಪಿ ಸಮಾವೇಶಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿ ಶ್ರೀಕೃಷ್ಣಮಠ ಮಠ ಮತ್ತು ದೇವಾಲಯಕ್ಕೆ ಹೋಗುವುದಿಲ್ಲ ಎಂದು ತಿಳಿಸಿದ್ದಾರೆ.
ರಾಜಕೀಯ ಪ್ರವಾಸ ಜೊತೆ ಧಾರ್ಮಿಕ ಪ್ರವಾಸವನ್ನು ಮೋದಿ ಮಾಡುವುದಿಲ್ಲ ಎನ್ನುವ ಸಂದೇಶ ಪ್ರಧಾನಿ ಕಚೇರಿಯಿಂದ ರಾಜ್ಯ ಮತ್ತು ಜಿಲ್ಲಾ ಬಿಜೆಪಿಗೆ ಸಂದೇಶ ರವಾನೆಯಾಗಿದೆ.
ಪ್ರಧಾನಿ ಮೋದಿ ಮಠಕ್ಕೆ ಬರಬೇಕೆಂದು ನಾವು ಅಪೇಕ್ಷಿಸಿದ್ದೆವು, ಅಧಿಕೃತ ಪಟ್ಟಿಯಲ್ಲಿ ಮೋದಿ ಮಠ ಭೇಟಿ ಕಾರ್ಯಕ್ರಮ ಇಲ್ಲ. ಪ್ರಧಾನಿ ಕಾರ್ಯಾಲಯದ ತೀರ್ಮಾನವೇ ಅಂತಿಮ ಎಂದು ಉಡುಪಿ ಕಾರ್ಯಕ್ರಮದ ಉಸ್ತುವಾರಿ ಉದಯಕುಮಾರ್ ಶೆಟ್ಟಿ ಹೇಳಿದ್ದಾರೆ.
ಪ್ರಚಾರ ಸಂದರ್ಭ ಚುನಾವಣಾ ಪ್ರಚಾರ ಮಾತ್ರ ಮಾಡ್ತಾರೆ, ಮಠದ ಭೇಟಿಗೆ ಇನ್ನೊಂದು ದಿನ ಫಿಕ್ಸ್ ಮಾಡುತ್ತೇವೆ ಅಂತ ಹೇಳಿದ್ದಾರೆ. ಈ ನಡುವೆ ಪ್ರಧಾನಿ ಮೋದಿ ಮಠ ಭೇಟಿಯ ಕಾರ್ಯಕ್ರಮ ದಿಢೀರ್ ಫಿಕ್ಸ್ ಆಗ್ಬಹುದು ಎಂಬ ಹಿನ್ನೆಲೆಯಲ್ಲಿ ಕೃಷ್ಣಮಠಕ್ಕೆ ಟೈಟ್ ಸೆಕ್ಯೂರಿಟಿ ಕೊಡಲಾಗಿದೆ. ಪ್ರಧಾನಿ ಮಠ ಭೇಟಿ ಫಿಕ್ಸ್ ಆದ್ರೆ ರಥಬೀದಿ ಪ್ರವೇಶ ಬಂದ್ ಮಾಡಲಾಗುವುದು ಅಂತ ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ರಥಬೀದಿಯಲ್ಲಿ ಬಿಎಸ್‍ಎಫ್, ಎಸ್‍ಎಸ್‍ಎಫ್ ಸಿಬ್ಬಂದಿ ಭಾರೀ ಭದ್ರತೆ ನಿಯೋಜಿಸಿದ್ದು, ರಾಜ್ಯ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿಕೊಂಡಿದ್ದಾರೆ.