ಮೆಟ್ರೋ ಕಾಮಗಾರಿಯ ಗಾರ್ಡರ್ ಬಿದ್ದು ಆಟೋ, ಕಾರ್, 2 ಬೈಕ್ ಜಖಂ-7 ಜನರಿಗೆ ಗಾಯ

Public TV
1 Min Read

ನವದೆಹಲಿ: ಮೆಟ್ರೋ ಕಾಮಗಾರಿಯ ಗಾರ್ಡರ್ ಬಿದ್ದು ಆಟೋ, ಕಾರ್ ಮತ್ತು ಎರಡು ಬೈಕ್‍ಗಳು ಜಖಂಗೊಂಡಿರುವ ಘಟನೆ ನವದೆಹಲಿಯ ಮೋಹನ್ ನಗರದಲ್ಲಿ ಸೋಮವಾರ ನಡೆದಿದೆ.

ಮೋಹನ್ ನಗರದಲ್ಲಿ ಮೆಟ್ರೋ ನಿರ್ಮಾಣದ ಕಾಮಗಾರಿ ನಡೆಯುತ್ತಿದ್ದು, ಮೇಲ್ಗಡೆಯಿಂದ ಕಬ್ಬಿಣದ ಗಾರ್ಡರ್ ಬಿದ್ದಿದೆ. ಈ ವೇಳೆ ರಸ್ತೆಯಲ್ಲಿ ಚಲಿಸುತ್ತಿದ್ದ ವಾಹನಗಳ ಮೇಲೆಯೇ ಗಾರ್ಡರ್ ಬಿದ್ದಿದ್ದರಿಂದ ಆಟೋ, ಕಾರ್ ಮತ್ತು ಎರಡು ಬೈಕ್ ಗಳು ಸಂಪೂರ್ಣ ಜಖಂಗೊಂಡಿವೆ. ಘಟನೆಯಲ್ಲಿ ಗಾಯಗೊಂಡ 7 ಜನರನನ್ನು ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೀಮಾ ಮತ್ತು ಅತುಲ್ ಎಂಬವರಿಗೆ ಗಂಭೀರವಾಗಿ ಗಾಯಗೊಂಡಿದ್ದು, ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬಿದ್ದಿರುವ ಗಾರ್ಡರ್ ನ್ನು ಭಾನುವಾರ ರಾತ್ರಿಯೇ ಮೆಟ್ರೋ ಕಂಬಗಳ ಮೇಲೆ ಏರಿಸಲಾಗಿತ್ತು ಎಂದು ವರದಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *