ಮೈಸೂರು: ನಾನು ಅನಂತ್‌ಕುಮಾರ್ ಹೆಗ್ಡೆ, ಪ್ರತಾಪ್ ಸಿಂಹಗಿಂತಲೂ ಪಕ್ಕಾ ಹಿಂದೂ. ನಾನು ಜಾತ್ಯಾತೀತ ಹಿಂದು. ಅವರೆಲ್ಲರೂ ಕೋಮುವಾದಿ ಹಿಂದೂಗಳು ಎಂದು ಸಿಎಂ ಸಿದ್ದರಾಮಯ್ಯನವರು ಪ್ರತಿಕ್ರಿಯಿಸಿದ್ದಾರೆ.
ಪ್ರತಾಪ್ ಸಿಂಹ ಅವರ ಆರೋಪದ ಬಗ್ಗೆ ಮಾತನಾಡಿದ ಸಿಎಂ, ಘಟನೆ ಎಲ್ಲಿ ನಡೆದಿದೆ ಎನ್ನುವುದು ನನಗೆ ಗೊತ್ತಿಲ್ಲ. ಓವರ್ ಸ್ಪೀಡ್ ನಿಂದ ಇಲ್ಲ ಅಜಾಗರೂಕತೆಯಿಂದ ಅಪಘಾತಗಳು ಸಂಭವಿಸುತ್ತವೆ. ಈ ರೀತಿ ಕ್ರಿಮಿನಲ್ ಆಲೋಚನೆಗಳು ಮಾಡಬಾರದು ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಸಚಿವ ಅನಂತ್ ಕುಮಾರ್ ಹೆಗ್ಡೆ ಕಾರ್ ಅಪಘಾತ- ಸಿಎಂಗೆ ಸಂಸದ ಪ್ರತಾಪ್ ಸಿಂಹ ಸವಾಲ್
ಉತ್ತರ ಕರ್ನಾಟಕದಿಂದ ಕೆಲವು ಮುಖಂಡರು ನಿನ್ನೆ ಭೇಟಿ ಮಾಡಿ ಬಾದಾಮಿಯಿಂದ ಸ್ಪರ್ಧಿಸುವಂತೆ ಒತ್ತಾಯ ಮಾಡಿದ್ದಾರೆ. ಬಾದಾಮಿ ಕ್ಷೇತ್ರದಲ್ಲಿ ಸ್ವಲ್ಪ ಗೊಂದಲ ಇದೆ ಹಾಗಾಗಿ ಅಭ್ಯರ್ಥಿ ನಿರ್ಧಾರವನ್ನು ಕಾಯ್ದಿರಿಸಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹತ್ಯೆಗೆ ಯತ್ನ !
ಇದೇ ವೇಳೆ ಸಿಎಂ ನಾಡಿನ ಜನತೆಗೆ ಬಸವ ಜಯಂತಿಯ ಶುಭಾಶಯಗಳನ್ನು ಕೋರಿದರು.