ಜೆಡಿಎಸ್ ಮಾಜಿ ಶಾಸಕರ ವಿರುದ್ಧ ಕಿರುಕುಳ ಆರೋಪ-ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನ

Public TV
2 Min Read

ಮಂಡ್ಯ: ಜಿಲ್ಲೆಯ ಜೆಡಿಎಸ್ ಮಾಜಿ ಶಾಸಕ ಎಂ. ಶ್ರೀನಿವಾಸ್ ಅವರ ವಿರುದ್ಧ ಕಿರುಕುಳ ಆರೋಪವೊಂದು ಕೇಳಿ ಬಂದಿದೆ.

ಮಾಜಿ ಶಾಸಕರು ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಒಂದೇ ಕುಟುಂಬದ ಮೂವರು ಸದಸ್ಯರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಡ್ಯದ ಶ್ರೀನಿವಾಸಪುರ ಗೇಟ್ ನಲ್ಲಿ ನಡೆದಿದೆ.

ರವಿಕುಮಾರ್(55), ವಿಜಿಯಮ್ಮ(45) ಹಾಗೂ ರತನ್ ಗೌಡ(35) ಅಸ್ವಸ್ಥರು. ಈ ಮೂವರ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಲಾಗಿದೆ. ವಿಷ ಸೇವಿಸೋ ಮುನ್ನ ರತನ್ ಸೆಲ್ಫೀ ವಿಡಿಯೋ ಮಾಡಿ ರಾಜಕೀಯ ಮುಖಂಡರೊಬ್ಬರ ಹೆಸರನ್ನು ಹೇಳಿದ್ದಾರೆ.

ವಿಡಿಯೋದಲ್ಲಿ ಏನಿದೆ?
ಹುಡುಗರನ್ನ ಹುಡುಗಿಯರು ಯಾವ ಯಾವ ರೀತಿ ಮೋಸ ಮಾಡುತ್ತಾರೆ ಎನ್ನುವುದಕ್ಕೆ ನನ್ನ ಪತ್ನಿ ವಿದ್ಯಾ ಉದಾಹರಣೆ. ನನ್ನ ಪತ್ನಿ ವಿದ್ಯಾ ತುಂಬಾ ತೊಂದರೆ ಕೋಡುತ್ತಿದ್ದಳು. ಆಕೆಗೆ ತುಂಬ ಹವ್ಯಾಸಗಳಿತ್ತು. ನನ್ನ ತಂದೆ-ತಾಯಿಗೆ ವಿಷ ಹಾಕಿಸಿ ಸಾಯಿಸಿ ಎಂದು ಹೇಳಿದ್ದಳು. ಆಗ ನಾನು ಈ ವಿಷಯದ ಬಗ್ಗೆ ಆಕೆಯೊಂದಿಗೆ ಮಾತನಾಡಿದೆ. ಇದು ನನ್ನ ಫೋನಿನಲ್ಲಿ ರೆಕಾರ್ಡ್ ಆಗಿತ್ತು. ಆದ್ರೆ ಇದೀಗ ಅದನ್ನು ಡಿಲೀಟ್ ಮಾಡಲು ಎತ್ಕೊಂಡು ಹೋಗಿದ್ದಾರೆ. ಬೇರೊಂದು ಮದುವೆಯಾದೆ. ಹೀಗಾಗಿ ನಮ್ಮ ಮನೆಯತ್ರ ಬಂದು ಗಲಾಟೆ ಮಾಡಿ ನೈತಿಕ ಪೊಲೀಸ್ ಥರ ಹೊಡೆದು ನನ್ನ ಮಾನಮಮಾರ್ಯದೆ ತೆಗೆದಿದ್ದಾರೆ. ಇದಕ್ಕೆಲ್ಲ ಜೆಡಿಎಸ್ ಶಾಸಕ ಎಂ. ಶ್ರೀನಿವಾಸ್ ಹಾಗೂ ಆತನ ಬೆಂಬಲಿಗರಾದ ಕಸ್ತೂರಿ, ವಿನೋದ್, ವಿದ್ಯಾಶ್ರೀ, ಅವರ ಮಾವಂದಿರು, ಅವರ ಅಜ್ಜಿ ಭಾಗ್ಯಮ್ಮ, ರಮೇಶ್, ಹರಿಪ್ರಸಾದ್, ಅಲಮೇಲಮ್ಮ, ನಾಗರಾಜು ಅವರ ಮಗ ಚಂದ್ರ ಹಾಗೂ ತುಪ್ಪ ಶಶಿಯವೇ ಕಾರಣ. ಇದರ ಸಮಸ್ತ ಪ್ರತಿಯೊಂದು ದಾಖಲೆಗಳನ್ನು ಪೇಪರ್ ನಲ್ಲಿ ಬರೆದಿದ್ದೇನೆ. ಅಷ್ಟೇ ಅಲ್ಲದೇ ನಮ್ಮ ಮನೆಯಲ್ಲಿದ್ದ ಹಣ, ಚಿನ್ನಾಭರಣ ಹಾಗೂ ಕೀಗಳನ್ನು ತೆಗೆದುಕೊಂಡು ಹೋಗಿದ್ದಾರೆ.

ನನ್ನ ಮೇಲೆ ಹಲ್ಲೆ ಕೂಡ ಮಾಡಿದ್ದರು. ಚಿಕಿತ್ಸೆ ತೆಗೆದುಕೊಳ್ಳಲು ನನ್ನ ಬಳಿ ಹಣವಿರಲಿಲ್ಲ. ಈ ಸಂಬಂಧ ಪೊಲೀಸರಿಗೆ ದೂರು ನೀಡಲು ಹೋದಾಗ ಅವರು ಪ್ರಕರಣ ದಾಖಲಿಸಿಕೊಂಡಿರಲಿಲ್ಲ. ದಯವಿಟ್ಟು, ಈ ಜೆಡಿಎಸ್‍ಯಿಂದ ನನ್ನನ್ನು ಕಾಪಾಡಿ. ನನ್ನ ಸಾವಿಗೆ ನ್ಯಾಯ ಕೊಡಿಸಿ. ನಾನು ಮತ್ತೊಬ್ಬರನ್ನು ಮದುವೆಯಾಗಿದ್ದೀನಿ. ನನ್ನ ಪತ್ನಿ ಮಾಡಿದ ತಪ್ಪಿಗೆ ನಾನು ಕೈ ಮುಗಿದು ಕ್ಷಮೆ ಕೇಳುತ್ತೀನಿ. ಆ ಹುಡುಗಿಗೂ ರಕ್ಷಣೆ ನೀಡಿ. ಆ ಹುಡುಗಿದು ಯಾವುದೇ ತಪ್ಪಿಲ್ಲ. ಈ ಹುಡುಗಿ ಹುಚ್ಚಿ ತರಹ ಆಡಿ ನನ್ನ ಚೆಕ್‍ ಗೆ ನಕಲಿ ಸಹಿ ಮಾಡಿ ಹಣ ಪಡೆದಿರುವ ಬಗ್ಗೆ ಕೇಳಿದ್ದಕ್ಕೆ, ನನ್ನ ತಂದೆ-ತಾಯಿನ ಸಾಯಿಸು ಎಂದು ಕಿರುಕುಳ ನೀಡಿದ್ದಾಳೆ. ಅಷ್ಟೇ ಅಲ್ಲದೇ ನನ್ನ ವಿರುದ್ಧ ವರದಕ್ಷಿಣೆ ಕೇಸ್ ದಾಖಲಿಸಿದ್ದಾಳೆ. ದಯವಿಟ್ಟು ಹುಡುಗರನ್ನ ರಕ್ಷಿಸಿ, ನನ್ನ ಸಾವಿನಿಂದ ಅವರಿಗೆ ನ್ಯಾಯ ಸಿಗಲಿ ಎಂದು ರತನ್ ಹೇಳಿದ್ದಾರೆ.

ಸಿದ್ದರಾಮಯ್ಯ ನೀವು ಎಲ್ಲ ಭಾಗ್ಯಗಳನ್ನು ನೀಡಿದ್ದೀರ. ಈಗ ಜೆಡಿಎಸ್ ಮುಕ್ತ ಭಾಗ್ಯವನ್ನು ನೀಡಿ. ಮಂಡ್ಯದಲ್ಲಿ ಎಂ. ಶ್ರೀನಿವಾಸ್ ಪುಂಡಾಟಿಕೆ ಆಟಗಳನ್ನು ನಿಲ್ಲಿಸಿ. ನನ್ನ ಸಾವಿಗೆ ರಕ್ಷಣೆ ನೀಡಿ. ರಮ್ಯಾ ಮೇಡಂ ನಾನು ನಿಮ್ಮ ಅಭಿಮಾನಿ. ದಯವಿಟ್ಟು ನನಗೆ ರಕ್ಷಣೆ ಕೊಡಿಸಿ, ಆ ಹುಡುಗಿಗೆ ಏನೂ ಆಗದಂತೆ ರಕ್ಷಣೆ ಕೊಡಿಸಿ ಎಂದು ರತನ್ ವಿಡಿಯೋದಲ್ಲಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *