ದಿನಭವಿಷ್ಯ: 10-04-2018

Public TV
1 Min Read

ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರ ಮಾಸ,
ಕೃಷ್ಣ ಪಕ್ಷ, ದಶಮಿ ತಿಥಿ,
ಮಂಗಳವಾರ, ಶ್ರವಣ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 3:30 ರಿಂದ 5:03
ಗುಳಿಕಕಾಲ: ಮಧ್ಯಾಹ್ನ 12:27 ರಿಂದ 1:59
ಯಮಗಂಡಕಾಲ: ಬೆಳಗ್ಗೆ 9:19 ರಿಂದ 10:52

ಮೇಷ: ಥಳುಕಿನ ಮಾತಿಗೆ ಮರುಳಾಗಬೇಡಿ, ಪುಣ್ಯಕ್ಷೇತ್ರ ದರ್ಶನ, ಮಾನಸಿಕ ನೆಮ್ಮದಿ, ರೋಗ ಬಾಧೆ, ನಾನಾ ವಿಚಾರಗಳಲ್ಲಿ ಆಸಕ್ತಿ,

ವೃಷಭ: ವ್ಯಾಪಾರಿಗಳಿಗೆ ಲಾಭ, ದುಶ್ಚಟಗಳಿಗೆ ಹಣವ್ಯಯ, ಮನಃಕ್ಲೇಷ, ದಾಂಪತ್ಯದಲ್ಲಿ ಕಲಹ, ತಾಳ್ಮೆ ಅತ್ಯಗತ್ಯ.

ಮಿಥುನ: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ತೀರ್ಥಕ್ಷೇತ್ರ ದರ್ಶನ, ರಾಜ ವೀರೋಧ, ಸಣ್ಣ ಮಾತಿನಿಂದ ಕಲಹ.

ಕಟಕ: ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಮಿತ್ರರ ಬೆಂಬಲ, ಹಿತ ಶತ್ರುಗಳ ಬಾಧೆ, ಕ್ರಯ-ವಿಕ್ರಯಗಳಿಂದ ಲಾಭ.

ಸಿಂಹ: ಕೈಗಾರಿಕೋದ್ಯಮಿಗಳಿಗೆ ಯಶಸ್ಸು, ವಾಹನ ಯೋಗ, ಕೃಷಿಕರಿಗೆ ಲಾಭ, ನಂಬಿದ ಜನರಿಂದ ಮೋಸ.

ಕನ್ಯಾ: ಅಪರಿಚಿತರ ವಿಚಾರದಲ್ಲಿ ಜಾಗ್ರತೆ, ಮಗನಿಂದ ಶುಭ ಸುದ್ದಿ, ಗಣ್ಯ ವ್ಯಕ್ತಿಗಳ ಭೇಟಿ, ಸುಖ ಭೋಜನ ಪ್ರಾಪ್ತಿ.

ತುಲಾ: ಅತಿಯಾದ ಮುಂಗೋಪ, ಆತ್ಮೀಯರಿಂದ ಸಲಹೆ, ಅತಿಯಾದ ನಿದ್ರೆ, ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿ.

ವೃಶ್ಚಿಕ: ನಿರೀಕ್ಷಿತ ಆದಾಯ, ಸರ್ಕಾರಿ ಕಾರ್ಯಗಳಲ್ಲಿ ವಿಳಂಬ, ದ್ರವ್ಯ ಲಾಭ, ಶ್ರಮಕ್ಕೆ ತಕ್ಕ ಫಲ, ಕಾರ್ಯ ಸಾಧನೆ.

ಧನಸ್ಸು: ಧಾರ್ಮಿಕ ಕಾರ್ಯಗಳಲ್ಲಿ ಒಲವು, ಉದ್ಯೋಗದಲ್ಲಿ ಬಡ್ತಿ, ಸ್ಥಳ ಬದಲಾವಣೆ, ಆದಾಯ ಉತ್ತಮ.

ಮಕರ: ಹಠದಿಂದ ತೊಂದರೆ, ಕಾರ್ಯ ಸಿದ್ಧಿ, ಮಾನಸಿಕ ನೆಮ್ಮದಿ, ಸಕಾಲದಲ್ಲಿ ಹಣ ಪ್ರಾಪ್ತಿ.

ಕುಂಭ: ಅನಗತ್ಯ ವಿಚಾರಗಳಿಂದ ಕಲಹ, ಬುದ್ಧಿವಂತಿಕೆಯಿಂದ ಮನ್ನಣೆ ಪಡೆಯುವಿರಿ, ಸುಖ ಭೋಜನ ಪ್ರಾಪ್ತಿ.

ಮೀನ: ಅಪವಾದಗಳು ದೂರವಾಗುತ್ತವೆ, ಯತ್ನ ಕಾರ್ಯದಲ್ಲಿ ಅನುಕೂಲ, ವ್ಯಾಪಾರ-ವ್ಯವಹಾರದಲ್ಲಿ ಏರುಪೇರು.

Share This Article
Leave a Comment

Leave a Reply

Your email address will not be published. Required fields are marked *