‘ಸುಯಿ ಧಾಗಾ’ ಶೂಟಿಂಗ್ ನಿಂದ ದಿಢೀರ್ ರಜೆ ತೆಗೆದುಕೊಂಡ ಅನುಷ್ಕಾ!

Public TV
1 Min Read

ಮುಂಬೈ: ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ‘ಸುಯಿ ಧಾಗಾ’ ಶೂಟಿಂಗ್ ನಿಂದ ದಿಡೀರ್ ಅಂತಾ ರಜೆ ತೆಗೆದುಕೊಂಡಿದ್ದಾರೆ.

ವರುಣ್ ಧವನ್ ಮತ್ತು ಅನುಷ್ಕಾ ನಟನೆಯ ‘ಸುಯಿ ಧಾಗಾ’ ಸಿನಿಮಾದ ಶೂಟಿಂಗ್ ನವದೆಹಲಿ ಯಲ್ಲಿ ನಡೆಯುತ್ತಿದ್ದು, ಅದಕ್ಕೆ ಅನುಷ್ಕಾ ತನ್ನ ಪತಿ ಜೊತೆ ಸಮಯ ಕಳೆಯಲು 2 ದಿನ ರಜೆ ತೆಗೆದುಕೊಂಡಿದ್ದಾರೆಂದು ಮಾಧ್ಯಮವೊಂದು ವರದಿ ಮಾಡಿದೆ.

ವಿರುಷ್ಕಾರ ಬಿಡುವಿಲ್ಲದ ವೇಳಾಪಟ್ಟಿಯಿಂದ ದಂಪತಿ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ, ಆದ್ದರಿಂದ ಅನುಷ್ಕಾ ಅವರು ಎರಡು ದಿನ ರಜೆ ತೆಗೆದುಕೊಂಡಿದ್ದಾರೆ ಅಂತಾ ಹೇಳಲಾಗುತ್ತಿದೆ.

ವಿರುಷ್ಕಾ ಪರಸ್ಪರ ದೂರದಲ್ಲಿದ್ದರೂ ಇವರು ನಿರಂತರವಾಗಿ ಸಾಮಾಜಿಕ ಜಾಲಾತಾಣದಲ್ಲಿ ಫೋಟೋಗಳನ್ನು ಮತ್ತು ಸಂದೇಶಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಈ ಜೋಡಿಯ ಭಾನುವಾರ ಪೇಂಟಿಂಗ್ ಅಂತರ್ಜಾಲದಲ್ಲಿ ವೈರಲ್ ಆಗಿತ್ತು. ಮತ್ತೊಂದೆಡೆ, ವರದಿಗಳ ಪ್ರಕಾರ ‘ಕರಣ್ ಜೋಹರ್ ಕಾಫಿ ವಿಥ್ ಕರಣ್’ ಶೋ ನಲ್ಲಿ ಈ ದಂಪತಿಗಳು ಕಾಣಿಸಿಕೊಳ್ಳುತ್ತಾರೆಂಬ ಸುದ್ದಿ ಹರಿದಾಡುತ್ತಿದೆ.

ವಿಶ್ರಾಂತಿ ಪಡೆದ ನಂತರ, ವಿರಾಟ್ ಕೊಹ್ಲಿ ಐಪಿಎಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸಲಿದ್ದಾರೆ. ಅನುಷ್ಕಾ ಶರ್ಮಾ ಪ್ರಸ್ತುತ ನವ ದೆಹಲಿಯಲ್ಲಿ ವರುಣ್ ಧವನ್ ಜೊತೆ `ಸುಯಿ ಧಾಗಾ’ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಆನಂದ್ ಎಲ್. ರಾಯ್ ಅವರ `ಜೀರೋ’ ಚಿತ್ರದಲ್ಲಿ ಶಾರುಖ್ ಖಾನ್ ಮತ್ತು ಕತ್ರಿನಾ ಕೈಫ್ ಜೊತೆ ಅನುಷ್ಕಾ ನಟಿಸುತ್ತಿದ್ದಾರೆ.

`ಸುಯಿ ಧಾಗಾ’ ಸಿನಿಮಾದಲ್ಲಿ ಅನುಷ್ಕಾ ಸೀರೆಯುಟ್ಟ ಚಿತ್ರಗಳು ವೈರಲ್ ಆಗಿತ್ತು. ಈ ಸಿನಿಮಾವನ್ನು ಶರತ್ ಕಟಾರಿಯಾ ಅವರು ನಿರ್ದೇಶನ ಮಾಡುತ್ತಿದ್ದು, ಇದು ಸೆಪ್ಪೆಂಬರ್ 29 ರಂದು ರಿಲೀಸ್ ಆಗಲಿದೆ ಅಂತಾ ಚಿತ್ರತಂಡ ತಿಳಿಸಿದೆ.

2017 ಡಿಸೆಂಬರ್ ನಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಲಂಡನ್ ನಲ್ಲಿ ವಿವಾಹವಾಗಿದ್ದರು. ಈ ದಂಪತಿ ಮದುವೆಯಾದ ನಂತರ ಹೊಸ ವರ್ಷವನ್ನು ಆಚರಿಸಲು ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣ ಬೆಳೆಸಿದ್ದರು. ಭಾರತಕ್ಕೆ ಮರಳಿದ ಬಳಿಕ ಇಬ್ಬರು ತಮ್ಮ ವೃತ್ತಿಯತ್ತ ಗಮನ ಹರಿಸಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *