ಲಂಬೋರ್ಗಿನಿ ಆಯ್ತು ಈಗ ದರ್ಶನ್ ಮನೆಯಂಗಳಕ್ಕೆ ಬಂತು ಜಿಪ್ಸಿ!

Public TV
1 Min Read

ಬೆಂಗಳೂರು: ಒಂದು ತಿಂಗಳ ಹಿಂದೆಯಷ್ಟೇ ಲಂಬೋರ್ಗಿನಿ ಕಾರು ಖರೀದಿಸಿದ್ದ ಸುದ್ದಿಯಾಗಿದ್ದ ದರ್ಶನ್ ಮನೆಗೆ ಈಗ ಜಿಪ್ಸಿ ಬಂದಿದೆ.

ದರ್ಶನ್ ಹೊಸ ಜಿಪ್ಸಿ ತೆಗೆದುಕೊಂಡಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದ್ದು, ಅಭಿಮಾನಿಗಳು ಈಗಾಗಲೇ ಜಿಪ್ಸಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.

ದರ್ಶನ್ ಬಳಿ, ಜಾಗ್ವಾರ್, ಪೋಶೆ, ಆಡಿ, ಐ 20 ಕಾರ್, ರೇಂಜ್ ರೋವರ್, ದುಬಾರಿ ಫಾರ್ಚೂನರ್, ಮಿನಿಕೂಪರ್, ಹಮ್ಮರ್ ಕಾರುಗಳಿವೆ. ಸದ್ಯಕ್ಕೆ ದರ್ಶನ್ ಯಜಮಾನ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಮೈಸೂರಿನಲ್ಲಿ ಶೂಟಿಂಗ್ ನಡೆಯುತ್ತಿದ್ದು, ಸೆಟ್ ನಲ್ಲಿ ಜಿಪ್ಸಿ ಕಾಣಿಸಿಕೊಂಡಿದೆ.

ಲಂಬೋರ್ಗಿನಿ ಕಾರು ಖರೀದಿ ಮಾಡಿ ಬೆಂಗಳೂರು, ಮೈಸೂರು ಸೇರಿದಂತೆ ಎಲ್ಲೆಡೆ ಸುತ್ತಾಡಿದ್ದರು. ಚಕ್ರವರ್ತಿ ಕಾರು ನೋಡಲು ದರ್ಶನ್ ಸ್ನೇಹಿತರೆಲ್ಲರೂ ಮನೆಗೆ ಭೇಟಿ ನೀಡಿ ಫೋಟೋಗಳನ್ನ ಕ್ಲಿಕ್ಕಿಸಿಕೊಂಡಿದ್ದರು.

ಲಂಬೋರ್ಗಿನಿ ಕಾರಿನ ನಂತರ ನಿರ್ಮಾಪಕ ರಾಮಮೂರ್ತಿ ದರ್ಶನ್ ಅವರಿಗೆ ಮಾರುತಿ 800 ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಹೊಸ ಕಾರಿನ ಬಗ್ಗೆ ಜನರು ಅಭಿಮಾನಿಗಳು ಮಾತನಾಡುತ್ತಿರುವಾಗಲೇ ದರ್ಶನ್ ಮನೆ ಅಂಗಳಕ್ಕೆ ಜಿಪ್ಸಿ ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *