ಸಿನಿಮಾ ಕ್ಷೇತ್ರದಲ್ಲಿ ಗ್ಲಾಮರ್ ಗೆ ಪ್ರಾಮುಖ್ಯತೆ ಹೆಚ್ಚು ಯಾಕೆ: ರಕ್ಷಿತಾ ಪ್ರೇಮ್ ಪ್ರಶ್ನೆ

Public TV
2 Min Read

ಬೆಂಗಳೂರು: ಬಾಲಿವುಡ್ ನಟಿ ಶ್ರೀದೇವಿ ನಿಧನದ ಸ್ಯಾಂಡಲ್ ವುಡ್ ನಲ್ಲೂ ಕಾಸ್ಮೆಟಿಕ್ ಸರ್ಜರಿ ಬಗ್ಗೆ ಚರ್ಚೆ ಆರಂಭಗೊಂಡಿದ್ದು, ಸಿನಿಮಾ ಕ್ಷೇತ್ರದಲ್ಲಿ ಗ್ಲಾಮರ್ ಗೆ ಪ್ರಾಮುಖ್ಯತೆ ಹೆಚ್ಚು ಯಾಕೆ ಎನ್ನುವ ಪ್ರಶ್ನೆಯನ್ನು ನಟಿ ರಕ್ಷಿತಾ ಪ್ರೇಮ್ ಎತ್ತಿದ್ದಾರೆ.

ಫೇಸ್ ಬುಕ್ ನಲ್ಲಿ ಶ್ರೀದೇವಿ ನಿಧನ ಕಾರಣದ ಬಗ್ಗೆ ಬೇರೆಯವರ ಪೋಸ್ಟ್ ನಲ್ಲಿರುವ ವಿಚಾರವನ್ನು ಪ್ರಸ್ತಾಪಿಸಿ ಕಾಸ್ಮೆಟಿಕ್ ಸರ್ಜರಿ ಟ್ರೆಂಡ್ ನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂಡಸ್ಟ್ರಿಯಲ್ಲಿ ಹೆಚ್ಚು ಕಾಲ ಇರಬೇಕಾದ್ರೆ ಕಾಸ್ಮೆಟಿಕ್ ಸರ್ಜರಿ ಮಾಡಿಕೊಳ್ಳಬೇಕು ಅನ್ನೋ ಮನೋಭಾವ ಒಳ್ಳೆಯದಲ್ಲ. ಕಾಸ್ಮೆಟಿಕ್ ಸರ್ಜರಿಯೊಂದೇ ಹೆಣ್ಣಿನ ಸೌಂದರ್ಯಕ್ಕೆ ಅನಿವಾರ್ಯವಲ್ಲ ಯಾಕಿಷ್ಟು ಗ್ಲಾಮರ್ ಗೆ ಪ್ರಾಮುಖ್ಯತೆ ಕೊಡಬೇಕು ಎಂದು ರಕ್ಷಿತಾ ಪ್ರೇಮ್ ಬೇಸರ ವ್ಯಕ್ತಪಡಿಸಿದ್ದಾರೆ.

ಹಿರಿಯ ನಟಿ ಶ್ರೀದೇವಿಯ ನಿಧನದ ಬಳಿಕ ಸಬ್ಯಾಸಾಚಿ ಹಾಗೂ ಬಾಲಿವುಡ್‍ಗೆ ಹತ್ತಿರವಿರುವ ಮಹಿಳೆಯೊಬ್ಬಳು ಫೇಸ್‍ಬುಕ್‍ನಲ್ಲಿ ಕಾಸ್ಮೆಟಿಕ್ ಸರ್ಜರಿಯ ಬಗ್ಗೆ ಬರೆದುಕೊಂಡಿದ್ದರು. ಅವರು ಬರೆದಿರುವ ವಿಚಾರವನ್ನು ರಕ್ಷಿತಾ ಪ್ರೇಮ್ ಅವರು ತಮ್ಮ ವಾಲ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪೋಸ್ಟ್ ನಲ್ಲಿ ಏನಿದೆ?
ನಾವು ಎಲ್ಲರೂ ಶ್ರೀದೇವಿಯ ಅಕಾಲಿಕ ಮರಣದಿಂದ ದುಃಖಿಸುತ್ತಿರುವಾಗಲೇ ಅವರ ಸಾವು ಹೇಗೆ ಸಂಭವಿಸಿತ್ತು ಎಂದು ನೆನಪಿನಲ್ಲಿಡುವುದು ಮುಖ್ಯ. ಶ್ರೀದೇವಿ ಅವರು ಸ್ಲಿಮ್ ಹಾಗೂ 40 ವರ್ಷ, 50 ವರ್ಷದಂತೆ ಕಾಣಲು ಸಮಾಜ ಅವರನ್ನು ಒತ್ತಾಯಿಸುತಿತ್ತು. ಅಷ್ಟೇ ಅಲ್ಲದೇ ನಿರಂತರವಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಿದ್ದರು. ಐದು ವರ್ಷಗಳ ಹಿಂದೆ ನಾನು ಅವರನ್ನು ಭೇಟಿ ಮಾಡಿದ್ದಾಗ ಅವರು ತುಂಬಾ ಸುಂದರವಾಗಿ ಕಾಣುತ್ತಿದ್ದರು. ಆದರೆ ಚಾಂದಿನಿ ಚಿತ್ರದಲ್ಲಿ ಅವರನ್ನು ನೋಡಿ ಎಲ್ಲರೂ ಪ್ರೀತಿಸುತ್ತಿದ್ದರು. ಈ ವಯಸ್ಸಿನಲ್ಲಿ ತೂಕ ಕಡಿಮೆ ಮಾಡಿಕೊಳ್ಳುವುದು, ರಿಂಕಲ್ಸ್ ಕಾಣಿಸದಂತೆ ಮಾಡಿಸಿಕೊಳ್ಳಲು ಅವರು ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾದ ಆಸ್ಪತ್ರೆಗೆ ನಿರಂತರವಾಗಿ ಭೇಟಿ ನೀಡಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಿದ್ದರು. ಈ ಫ್ಯಾಶನ್ ನಮಗೆ ನಿಜವಾಗಲೂ ಬೇಕೇ?

ಶಸ್ತ್ರಚಿಕಿತ್ಸೆ ಮಾಡಿಸಲು ಅಮೆರಿಕಕ್ಕೆ ಹೋಗುವ ವೇಳೆ ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಹೇಳಿದ ಪತಿ ಮಧ್ಯವಸ್ಥಿಕೆ ವಹಿಸಬೇಕಿತ್ತು. ನೀನು ಹೇಗಿದೆಯೋ ಹಾಗೇ ನಾನು ಇಷ್ಟಪಡುತ್ತೇನೆ ಎಂದು ಹೇಳಬೇಕಿತ್ತು. ಶ್ರೀದೇವಿಗೆ ಅವರ ಸೌಂದರ್ಯದ ಬಗ್ಗೆ ಅವರಿಗೆ ನಂಬಿಕೆ ಇರಲಿಲ್ಲ. ಯಾರೇ ಅವರಿಗೆ ಉಡುಪುಗಳನ್ನು ತಂದುಕೊಟ್ಟರು ಅವರು ಅದನ್ನು ಹಾಕಿಕೊಳ್ಳುತ್ತಿದ್ದರು. ನನ್ನ ತುಟಿಗಳು ನನಗೆ ಸಾಕಾಗಿ ಹೋಗಿದೆ. ನನ್ನ ಮುಖ ಚೆನ್ನಾಗಿಲ್ಲ ಹಾಗೂ ಉತ್ತಮ ಬಟ್ಟೆ ಧರಿಸಲು ದೇಹದ ಕೊಬ್ಬನ್ನು ತೆಗೆಯುವಂತಹ ಶಸ್ತ್ರಚಿಕಿತ್ಸೆಯನ್ನು ಮಾಡಿಸಿದ್ದರು. ಅವರು ಹೆಚ್ಚು ಕಾಲ ಬದುಕಿಲ್ಲ ಎಂಬುದು ದುಃಖದ ವಿಷಯ. ಅವರು ತಮ್ಮಗಾಗಿ ಬದುಕುವ ಬದಲು ತಮ್ಮ ಮಕ್ಕಳಿಗಾಗಿ ಬದುಕಬೇಕಿತ್ತು.

ಗ್ಲಾಮರ್ ನಲ್ಲಿ ಯಾಕೆ ಇಷ್ಟು ಒತ್ತಡವಿರುತ್ತದೆ. ಪ್ರತಿಯೊಂದು ಮಹಿಳೆ ಸುಂದರವಾಗಿ ಕಾಣಲು ಕಾಸ್ಮೆಟಿಕ್ ಸರ್ಜರಿಗಳು ಉಪಯೋಗವಾಗುವುದಿಲ್ಲ. ಚಿತ್ರರಂಗದಲ್ಲಿ ಉಳಿಯೋಕ್ಕೆ ಈ ರೀತಿ ಮಾಡುವುದು ಒಳ್ಳೆಯದಲ್ಲ. ಇದು ಬಹಳ ದುಃಖಕರ ವಿಷಯ.

Share This Article
Leave a Comment

Leave a Reply

Your email address will not be published. Required fields are marked *