ಸಿಎಂ ಅವರ ಅಮ್ಮನ ಮಾಂಸ ತಿಂದಂತೆ, ಟಿಪ್ಪು ಒಬ್ಬ ಕಚಡ, ಅತ್ಯಾಚಾರಿ- ವಿರಾಟ್ ಸಮಾವೇಶದಲ್ಲಿ ಕಲ್ಲಡ್ಕ ವೀರಾವೇಶ

Public TV
2 Min Read

ಬೆಂಗಳೂರು: ಗೋಮಾಂಸ ತಿನ್ನುತ್ತೇನೆ ಎಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಮ್ಮನ ಮಾಂಸ ತಿಂದಂತೆ. ಹಸುವನ್ನ ತಾಯಿ ಎಂದು ಪೂಜಿಸುವ ಸಂಸ್ಕೃತಿ ನಮ್ಮದು ಅಂತ ಕಲ್ಲಡ್ಕ ಪ್ರಭಾಕರ್ ಭಟ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಮತ್ತಿಕೆರೆಯ ಜೆಪಿ ಪಾರ್ಕ್ ನಲ್ಲಿ ನಡೆದ ವಿರಾಟ್ ಹಿಂದೂ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಮುಸ್ಲಿಮರು ರಾಷ್ಟ್ರ ದ್ರೋಹಿಗಳು. ಸುಂದರವಾಗಿ ಕಂಡದ್ದನ್ನ ಹಾಳು ಮಾಡುವುದೇ ಮುಸ್ಲಿಮರ ಕಾಯಕ. ಟಿಪ್ಪು ಒಬ್ಬ ಕಚಡ, ಆತ ಒಬ್ಬ ಅತ್ಯಾಚಾರಿ. ಬಹಮನಿ ಒಬ್ಬ ಅತ್ಯಾಚಾರಿ, ಅವನನ್ನ ಆರಾಧಿಸುತ್ತೀರಿ. ಹುಡುಗಿಯರನ್ನ ಬಳಸಿಕೊಂಡವನಲ್ಲಿ ಅಕ್ಬರ್ ಮೊದಲಿಗ. ಕಾಂಗ್ರೆಸ್ ಸರ್ಕಾರವನ್ನ ಮೊದಲು ಕಿತ್ತೊಗೆಯಬೇಕು ಅಂತ ವಾಗ್ದಾಳಿ ನಡೆಸಿದರು.

ನಟ ಸೈಫ್ ಆಲಿ ಖಾನ್ ಒಬ್ಬ ಬೆರಕೆ. ನೀವು ಮೂರು ಮಕ್ಕಳನ್ನ ಮಾಡಿ. ಒಂದನ್ನ ಧರ್ಮಕ್ಕೆ ಕೊಡಿ, ಒಂದನ್ನ ಸೈನ್ಯಕ್ಕೆ ಕೊಡಿ, ಇನ್ನೂಂದನ್ನ ನೀವು ಸಾಕಿ ಅಂತ ಜನರಿಗೆ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ರು.

ಈ ದೇಶ ತುಂಡಾಗಿರೋದು ಎರಡು ವಿಚಾರದಲ್ಲಿ. ಮುಸಲ್ಮಾನರು ನಮಗೆ ಮುಸ್ಲಿಂ ರಾಷ್ಟ್ರ ಬೇಕು ಅಂತ 17 ವರ್ಷ ಗಲಾಟೆ ಮಾಡಿದ್ರು. ಗಲಾಟೆಯ ಸಂದರ್ಭದಲ್ಲಿ ಹಿಂದೂ ತಾಯಂದಿರ ಮೇಲೆ ಅತ್ಯಾಚಾರ ಮಾಡಿದ್ರು. ಹಿಂದೂ ದೇವಸ್ಥಾನವನ್ನ ಒಡೆದು ಹಾಕಿದ್ರು. ಆಗ ಈ ರಾಜಕೀಯ ನಾಯಕರು ದೇಶವನ್ನ ತುಂಡರಿಸಿದ್ರು. ಇದು ಹೇಳಿದ್ದು ನಾನಲ್ಲ, ಅಂಬೇಡ್ಕರ್ ಅಂದ್ರು.

ಶುಕ್ರವಾರ ಬಂದ್ರೆ ಸಾಕು ಕೆಲವರು ಒಂದು ದಿಕ್ಕಿನ ಕಡೆ ಮುಖಮಾಡಿ ಕಾಲು ಮಡಚಿಕೊಂಡು ಅಲ್ಲಾ ಅಂತ ಕೂಗ್ತಾರೆ. ಇನ್ನೂ ಕೆಲವರು ಓ ಏಸುವೆ ಎಲ್ಲಿರುವೆ ಎಂದು ಕೂಗ್ತಾರೆ. ಹಾಗಾದ್ರೆ ಬೇರೆ ದಿನ ಆ ದೇವರು ಇರುವುದಿಲ್ವಾ ಅಂತ ಭಟ್ ಪ್ರಶ್ನಿಸಿದ್ರು.

ನಮ್ಮ ದೇವಸ್ಥಾನಕ್ಕೆ ಯಾಕೆ ನೀವು ಕೈ ಹಾಕ್ತಿರಾ? ಮುಸ್ಲಿಮರಿಗೆ ವಕ್ಫ್ ಮಂಡಳಿಯಿದೆ. ನಮಗೂ ನಮ್ಮ ದೇವಸ್ಥಾನವನ್ನ ನಿರ್ವಹಿಸುವ ಶಕ್ತಿಯಿದೆ. ನಮ್ಮ ಶಾಲೆಯಲ್ಲಿ ಕಲಿಯುವ ಮಕ್ಕಳ ಅನ್ನ ಸಿಎಂ ಸಿದ್ದರಾಮಯ್ಯ ಕಿತ್ಕೊಂಡ್ರು. ನಾನು ಅಹಿಂದ ಪರ ಅಂತ ಹೇಳ್ತಿರಲ್ಲ ಸ್ವಾಮಿ, ಆ ಶಾಲೆಯಲ್ಲಿ ಓದುವ 94 ಪ್ರತಿಶತ ಮಕ್ಕಳು ಅಹಿಂದ ವರ್ಗದ ಮಕ್ಕಳು. ನೀವು ಕೇಳಿ ಭಿಕ್ಷೆ ಬೇಡಿ ಅಂತಾರೆ, ನಾವು ಕೇಳಲ್ಲ. ನಮಗೆ ಕೋಟಿ ಕೋಟಿ ಹಣ ಜನ ನೀಡ್ತಾರೆ. ನಮಗೂ ರಮಾನಾಥ್ ರೈಗೂ ಜಗಳ ಇದೆ ಅಂತಾರೆ. ನಮಗೂ ರೈ ಗೂ ಯಾವುದೇ ಜಗಳವಿಲ್ಲ. ನಾನು ರೈ ಆಸ್ತಿಯಲ್ಲಿ ಕೈ ಹಾಕಿಲ್ಲ ಅಂತ ಹೇಳಿದ್ರು.

Share This Article
Leave a Comment

Leave a Reply

Your email address will not be published. Required fields are marked *