ಶ್ರೀದೇವಿಯ ಕಣ್ಣಿನ ರೆಪ್ಪೆ ನಟನೆ ಮಾಡ್ತಿತ್ತು- ಶ್ರೀದೇವಿ ಜೊತೆ ಸಿನಿಮಾ ಮಾಡಿದ್ದು ನೆನೆದು ಕಣ್ಣೀರಿಟ್ಟ ಲೀಲಾವತಿ

Public TV
1 Min Read

ಬೆಂಗಳೂರು: ಬಹುಭಾಷಾ ನಟಿ ಶ್ರೀದೇವಿ ನಿಧನಕ್ಕೆ ಹಿರಿಯ ನಟಿ ಲೀಲಾವತಿ ಹಾಗೂ ನಟ ವಿನೋದ್ ರಾಜ್ ಕಂಬನಿ ಮಿಡಿದಿದ್ದಾರೆ.

ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ಮಾತನಾಡಿದ ಹಿರಿಯ ನಟಿ ಲೀಲಾವತಿ ಶ್ರೀದೇವಿ ಜೊತೆಯಲ್ಲಿ ಸಿನಿಮಾ ಮಾಡಿದ್ದನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ಶ್ರೀದೇವಿಯ ಕಣ್ಣಿನ ರೆಪ್ಪೆ ನಟನೆಯನ್ನ ಮಾಡುತ್ತಿತ್ತು. ನಟನೆಯಲ್ಲಿ ಶ್ರೀದೇವಿ ರೂಪಸಿಯಾಗಿದ್ದರು. ಶ್ರೀದೇವಿ ರೂಪವೇ ದೇವತೆಯ ರೂಪದಂತೆ ಕಂಗೊಳಿಸುತ್ತ ಸುಂದರವಾದ ಮನಸ್ಸು ಇದ್ದವರು ಎಂದು ಬಣ್ಣಿಸಿದರು.

ಶ್ರೀದೇವಿ ಆತ್ಮಕ್ಕೆ ಶಾಂತಿ ಸಿಗಲಿ, ಹೃದಯಾಘಾತ ಆಕೆಗೆ ಸಾವನ್ನು ತಂದಿದೆ. ಒಬ್ಬ ಚಿತ್ರನಟರನ್ನು ಕಳೆದುಕೊಂಡಾಗ ನಾನೇ ಸತ್ತು ಬದುಕಿದ ಹಾಗೆ ಆಗುತ್ತದೆ. ಮಗನಿಗಾಗಿ ಬದುಕಬೇಕು ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು. ಇದೇ ವೇಳೆ ನಟ ವಿನೋದ್ ರಾಜ್ ಕೂಡ ಸಂತಾಪವನ್ನ ವ್ಯಕ್ತಪಡಿಸಿದರು.

ಕನ್ನಡದ ಭಕ್ತ ಕುಂಬಾರ ಹಾಗೂ ಹೆಣ್ಣು ಸಂಸಾರದ ಕಣ್ಣು ಚಿತ್ರಗಳಲ್ಲಿ ಲೀಲಾವತಿ ಹಾಗೂ ಶ್ರೀದೇವಿ ಒಟ್ಟಿಗೆ ನಟಿಸಿದ್ದರು.

https://www.youtube.com/watch?v=_KNZgFFSYj4&feature=youtu.be

Share This Article
Leave a Comment

Leave a Reply

Your email address will not be published. Required fields are marked *