ಪ್ರಿಯಾ ವಾರಿಯರ್ ಗೆ ಸುಪ್ರೀಂನಿಂದ ಗುಡ್ ನ್ಯೂಸ್

Public TV
2 Min Read

ನವದೆಹಲಿ: ಮಲೆಯಾಳಂ ನಟಿ ಪ್ರಿಯಾ ವಾರಿಯರ್ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣಗಳ ತನಿಖೆಗೆ ಸುಪ್ರೀಂ ಕೋರ್ಟ್ ತಡೆ ನೀಡಿ ಅದೇಶ ನೀಡಿದೆ.

ಪ್ರಿಯಾ ವಾರಿಯರ್ ನಟನೆಯ ಚಿತ್ರದ ಹಾಡಿನ ವಿರುದ್ಧ ತೆಲಂಗಾಣದಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ ವಿಚಾರಣೆ ತಡೆ ಕೋರಿ ಪ್ರಿಯಾ ಸೋಮವಾರ ಸುಪ್ರಿಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ರಾಜ್ಯಗಳಿಗೆ ತಮ್ಮ ವಿರುದ್ಧ ಕ್ರಿಮಿನಲ್ ವಿಚಾರಣೆ ನಡೆಸದಂತೆ ನಿರ್ದೇಶನ ನೀಡಲು ಮನವಿ ಸಲ್ಲಿಸಿದ್ದರು. ಅಲ್ಲದೇ ಚಿತ್ರದ ನಿರ್ದೇಶಕರು ಸುಪ್ರೀಂ ಮೊರೆ ಹೋಗಿದ್ದರು.

ಪ್ರಿಯಾ ವಾರಿಯರ್ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ. ದೀಪಕ್ ಮಿಶ್ರಾ, ನ್ಯಾ. ಎಎಂ ಖಾನ್ವಿಲ್ಕರ್ ಮತ್ತು ಡಿವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠವು ಮುಂದಿನ ವಿಚಾರಣೆ ನಡೆಯುವವರೆಗೂ ಯಾವುದೇ ಕ್ರಿಮಿನಲ್ ವಿಚಾರಣೆ ನಡೆಸದಂತೆ ಸೂಚಿಸಿದೆ. ಅಲ್ಲದೇ ಚಿತ್ರ ನಿರ್ದೇಶಕರ ಅರ್ಜಿಗೂ ಈ ಸೂಚನೆಗಳು ಅನ್ವಯವಾಗುತ್ತದೆ ಎಂದು ತಿಳಿಸಿದೆ. ಪ್ರಿಯಾ ವಿರುದ್ಧ ದಾಖಲಾಗಿದ್ದ ದೂರಿನ ಕುರಿತು ತೆಲಂಗಾಣ ಸರ್ಕಾರ ಮತ್ತು ಸೇರಿ ಇತರೇ ರಾಜ್ಯಗಳಿಗೆ ವಿವರಣೆ ಕೇಳಿ ನೋಟಿಸ್ ಜಾರಿ ಮಾಡಿದೆ.

ಏನಿದು ಪ್ರಕರಣ? ಪ್ರಿಯಾ ವಾರಿಯರ್ ನಟನೆಯ `ಒರು ಅಡಾರ್ ಲವ್’ ಚಿತ್ರದಲ್ಲಿನ ಹಾಡಿನ ವಿರುದ್ಧ ತೆಲಂಗಾಣದ ಹೈದರಬಾದ್ ನ ಫಲಕ್‍ನಾಮಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಚಿತ್ರದ ಹಾಡಿನಲ್ಲಿ ಪ್ರವಾದಿ ಕೀರ್ತನೆಗಳನ್ನ ಬಳಸಿರುವುದು ಮುಸಲ್ಮಾನರ ಧಾರ್ಮಿಕ ಭಾವನೆಗೆ ಧಕ್ಕೆಯಾಗುತ್ತದೆ ಎಂದು ದೂರಿನಲ್ಲಿ ಉಲ್ಲೇಖಿಸದ್ದರು. ಅಲ್ಲದೇ ಮಹಾರಾಷ್ಟ್ರದ ಮುಂಬೈ ರಝಾ ಆಕಾಡೆಮಿಯಲ್ಲೂ ಹಾಡಿನ ವಿರುದ್ಧ ದೂರು ದಾಖಲಿಸಲಾಗಿತ್ತು. ಇದನ್ನೂ ಓದಿ: ತನ್ನ ನೆಚ್ಚಿನ ಕ್ರಿಕೆಟರ್ ಯಾರು ಅನ್ನೋದನ್ನು ರಿವಿಲ್ ಮಾಡಿದ್ರು ಪ್ರಿಯಾ

ಈ ಕುರಿತು ಪ್ರಿಯಾ ತಮ್ಮ ಪರ ವಕೀಲೆ ಪಲ್ಲವಿ ಪ್ರತಾಪ್ ಮೂಲಕ ಅರ್ಜಿ ಸಲ್ಲಿಸದ್ದರು. ಈ ವೇಳೆ ಮಾತನಾಡಿದ್ದ ಅವರು, ಮಲಯಾಳಂ ಯೇತರ ರಾಜ್ಯಗಳಲ್ಲಿ ದೂರು ದಾಖಲಿಸಿರುವವರು ಹಾಡನ್ನ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಪ್ರವಾದಿ ಮಹಮ್ಮದ್ ಹಾಗೂ ಅವರ ಮೊದಲ ಪತ್ನಿ ಖದೀಜಾ ಅವರ ನಡುವಿನ ಪ್ರೀತಿಯನ್ನು ಹಾಡು ಶ್ಲಾಘಿಸುತ್ತದೆ. ಇದು ಜಾನಪದ ಹಾಡು. ಜಬ್ಬಾರ್ ಎಂಬವರು 1978ರಲ್ಲಿ ರಚಿಸಿದ್ದಾರೆ. ಕಳೆದ 40 ವರ್ಷಗಳಿಂದ ಮುಸ್ಲಿಮರು ಇದನ್ನು ಹಾಡುತ್ತಿದ್ದು ಈಗ ಏಕೆ ವಿರೋಧಿಸುತ್ತಿದ್ದಾರೆ ಎಂದು ಪ್ರಿಯಾ ಪ್ರಶ್ನಿದ್ದರು. ಇದನ್ನೂ ಓದಿ: ಕನ್ನಡಕ್ಕೆ ಬರ್ತಾಳಂತೆ ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್!

Share This Article
Leave a Comment

Leave a Reply

Your email address will not be published. Required fields are marked *