ಮೈಸೂರಿಗ ಆಗಿದ್ರೆ ಬ್ಯಾಂಕ್ ಲೂಟಿಕೋರ ಓಡಿಹೋಗ್ತಿರಲಿಲ್ಲ- ಪ್ರಧಾನಿಗೆ ಸಿಎಂ ತಿರುಗೇಟು

Public TV
1 Min Read

ಮೈಸೂರು: ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರವಷ್ಟೇ ನಗರದಲ್ಲಿ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ್ದರು. ಇದೀಗ ಮುಖ್ಯಮಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿಯವರ ಕಾಲೆಳೆದಿದ್ದಾರೆ.

ಮೈಸೂರಿಗ ಚೌಕಿದಾರ (ಪ್ರಧಾನಿ) ಆಗಿದ್ರೆ ಬ್ಯಾಂಕ್ ಲೂಟಿಕೋರನನ್ನು ಓಡಿಹೋಗಲು ಬಿಡುತ್ತಿರಲಿಲ್ಲ. 11,500 ಕೋಟಿ ರೂಪಾಯಿ ಬ್ಯಾಂಕ್ ಲೂಟಿ ಮಾಡಿರೋ ವಜ್ರೋದ್ಯಮಿ ನೀರವ್ ಮೋದಿ ಎಸ್ಕೇಪ್ ಆಗ್ತಿರಲಿಲ್ಲ. ಮೈಸೂರಲ್ಲಿ ಹುಲಿಗಳು ಹುಟ್ಟಿದ್ದಾರೆ, ಬ್ರಿಟಿಷರ ವಿರುದ್ಧ ಹೋರಾಡಿದ್ದಾರೆ. ಮೈಸೂರಿಗರು ಭೂ ಸುಧಾರಣೆ ತಂದಿದ್ದಾರೆ. ಮೈಸೂರಿಗರ ಬಗ್ಗೆ ಪ್ರಧಾನಿ ಮೋದಿ ಮಾಡಿರೋ ಟೀಕೆ ಅಪಮಾನ ಅಂತ ಸಿಎಂ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: Commission ಸರ್ಕಾರವನ್ನು ತೊಲಗಿಸಿ Mission ಸರ್ಕಾರವನ್ನು ತನ್ನಿ: ಪ್ರಧಾನಿ ಮೋದಿ

ಒಟ್ಟಿನಲ್ಲಿ ಚೌಕಿದಾರ ಪ್ರಧಾನಿ ನರೇಂದ್ರ ಮೋದಿಗೆ ಸಿಎಂ ಸಿದ್ದರಾಮಯ್ಯ ಪ್ರತ್ಯುತ್ತರ ನೀಡಿದ್ದು, ಮಾತಿನ ಭರದಲ್ಲಿ ಪ್ರಧಾನಿ ಮೋದಿ ಅವರು ಮೈಸೂರಿಗೆ ಅಪಮಾನ ಮಾಡಿದ್ರಾ ಎಂಬ ಪ್ರಶ್ನೆ ಇದೀಗ ಎಲ್ಲಡೆ ಕೇಳಿಬಂದಿದೆ.

ನಿನ್ನೆಯಷ್ಟೇ ಮೈಸೂರಿನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡಿ, ಸಿಎಂ ಅವರ ಹೆಸರನ್ನು ಪ್ರಸ್ತಾಪ ಮಾಡದೆ ಮೈಸೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದಂತಹ ವ್ಯಕ್ತಿ ದಾರಿ ಮಧ್ಯೆ ತಮ್ಮ ನೈತಿಕತೆಯನ್ನು ಕಳೆದುಕೊಂಡು ಭ್ರಷ್ಟರಾಗಿದ್ದಾರೆ ಎನ್ನುವಂತಹ ಆರೋಪ ಮಾಡಿದ್ದಾರೆ. ಅದು ನೇರವಾಗಿ ಸಿದ್ದರಾಮಯ್ಯನವರಿಗೇ ಮಾಡಿದಂತಹ ಅಪಮಾನವಾಗಿದ್ದು, ಆದ್ರೆ ಎಲ್ಲೂ ಕೂಡ ಮೋದಿಯವರು ಸಿದ್ದರಾಮಯ್ಯ ಅವರ ಹೆಸರನ್ನು ಹೇಳಲಿಲ್ಲ. ಹೀಗಾಗಿ ಮೋದಿಯರ ಇದೇ ಒಂದು ಹೇಳಿಕೆಯನ್ನಿಟ್ಟುಕೊಂಡು ಸಿಎಂ ಅವರು ಟ್ವೀಟ್ ಮಾಡಿದ್ದಾರೆ.

ಇದು ಮೈಸೂರು ಮತ್ತು ಮೈಸೂರಿನ ಜನರಿಗೆ ಮಾಡಿದಂತಹ ದೊಡ್ಡ ಅಪಮಾನವಾಗಿದೆ. ಯಾಕಂದ್ರೆ ಮೈಸೂರಿನ ವ್ಯಕ್ತಿಯೊಬ್ಬ ಈ ದೇಶದ ಕಾವಲುಗಾರನಾಗಿದ್ರೆ, 11000 ಕೋಟಿ ರೂ. ಲೂಟಿ ಮಾಡಿದಂತಹ ವ್ಯಕ್ತಿಯನ್ನು ದೇಶ ತಪ್ಪಿಸಿಕೊಂಡು ಹೋಗಲು ಬಿಡ್ತಾ ಇರಲಿಲ್ಲ ಅನ್ನೋ ಮೂಲಕ ನೀರವ ಮೋದಿಯ ಪರಾರಿ ವಿಚಾರವನ್ನು ಸಿಎಂ ಅವರು ಈ ರೀತಿ ಪ್ರಸ್ತಾಪ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *