ಕೊಪ್ಪಳ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯಕ್ಕೆ ಆಗಮಿಸುತ್ತಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಮಾವೇಶಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.
ಬ್ಯಾನರ್‍ಗಳಲ್ಲಿ ಮಾದಿಗ ಸಮುದಾಯದ ಮುಖಂಡ ಸಚಿವ ಎಚ್. ಆಂಜನೇಯ, ಕೆ.ಎಚ್ ಮುನಿಯಪ್ಪ ಅವರ ಭಾವಚಿತ್ರ ಹಾಕದಿದ್ದಕ್ಕೆ ಇದೀಗ ಸಮುದಾಯ ಆಕ್ರೋಶ ವ್ಯಕ್ತಪಡಿಸುತ್ತಿದೆ. ಕಾಂಗ್ರೆಸ್ ಪಕ್ಷ ಮಾದಿಗ ಸಮುದಾಯದ ಮುಖಂಡರಿಗೆ ಅನ್ಯಾಯವೆಸಗಿದೆ, ಮಾದಿಗ ಸಮುದಾಯದವನ್ನ ಕಡೆಗಣಿಸಿದ್ದಾರೆಂದು ಟೀಕಿಸಿ ವಾಟ್ಸಪ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ಸಮಾವೇಶಕ್ಕೆ ಬರೋರಿಗೆ ಸಿಗುತ್ತೆ ಸಮೋಸಾ, ಬನ್!
ಹಲಗೇರಿ ಜಿ.ಪಂ. ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಗೂಳಪ್ಪ ಅವರು ಹಲಗೇರಿ ಯುವಸೇವೆ ಗ್ರುಪ್ ನಲ್ಲಿ ಈ ಬಗ್ಗೆ ಕಿಡಿ ಕಾರಿದ್ದಾರೆ. ಇದನ್ನೂ ಒದಿ: ರಾಹುಲ್ ಸಂಚರಿಸೋ ಮಾರ್ಗದಲ್ಲಿ ಕೃತಕ ಹಸಿರೀಕರಣ- ರಸ್ತೆ ಮಧ್ಯೆ ಬೆಳೆದ ಪಾಮ್ ಗಿಡ ನೆಡಿಸಲು ಮುಂದಾದ ಅಜಯ್ ಸಿಂಗ್