ಸಿಂಪಲ್ ಆಗಿ ಮಸಾಲಾ ಬ್ರೆಡ್ ಮಾಡುವ ವಿಧಾನ

Public TV
1 Min Read

ಈಗಂತೂ ತುಂಬಾ ಚಳಿ ಸಂಜೆ ಏನಾದರೂ ಬಿಸಿಬಿಸಿ, ಖಾರ ಖಾರವಾಗಿ ತಿನ್ನೋಣ ಎನ್ನಿಸುತ್ತದೆ. ಮನೆಯಲ್ಲಿ ಬ್ರೆಡ್ ಇದ್ದರೆ ಸಿಂಪಲ್ ಆಗಿ ಮಸಾಲ ಬ್ರೆಡ್ ಮಾಡಲು ಇಲ್ಲಿದೆ ಸುಲಭ ವಿಧಾನ.

ಬೇಕಾಗುವ ಸಾಮಾಗ್ರಿಗಳು 1. ಕಡ್ಲೆಹಿಟ್ಟು – ಒಂದೂವರೆ ಕಪ್ 2. ಅಕ್ಕಿಹಿಟ್ಟು – 1 ಕಪ್ 3. ಖಾರದ ಪುಡಿ – 2 ಚಮಚ 4. ಉಪ್ಪು – ರುಚಿಗೆ ತಕ್ಕಷ್ಟು 5 ಕೊತ್ತಂಬರಿ ಸೊಪ್ಪು- ಸ್ವಲ್ಪ 6. ಎಳ್ಳು – 2 ಚಮಚ 7. ಎಣ್ಣೆ- ಕರಿಯಲು 8. ಬ್ರೆಡ್ ಸ್ಲೈಸ್ – 6

ಮಾಡುವ ವಿಧಾನ * ಒಂದು ಬೌಲ್‍ಗೆ ಜರಡಿ ಹಿಡಿದ ಕಡ್ಲೆಹಿಟ್ಟು, ಅಕ್ಕಿ ಹಿಟ್ಟು, ಉಪ್ಪು, ಖಾರದ ಪುಡಿ, ಕೊತ್ತಂಬರಿ ಸೊಪ್ಪು, ಎಳ್ಳು, 2 ಚಮಚ ಎಣ್ಣೆ ಮತ್ತು ನೀರು ಹಾಕಿ ಬೊಂಡಾ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. * ಹಿಟ್ಟು ತೀರಾ ತೆಳುವಾಗಿರಬಾರದು, ಸ್ವಲ್ಪ ಗಟ್ಟಿಯಾಗಿರುವಂತೆ ಕಲಸಿ. * ನಂತರ ಬ್ರೆಡ್ ಸ್ಲೈಸ್‍ನ 2 ಭಾಗಕ್ಕೆ ಕಲಸಿದ ಹಿಟ್ಟನ್ನು ಸ್ವಲ್ಪ ಹಾಕಿ. * ನಂತರ ಅದನ್ನು ಎಣ್ಣೆಯಲ್ಲಿ ಹಾಕಿ ಕಂದು ಬಣ್ಣ ಬರುವವರೆಗೆ ಕರಿಯಿರಿ. * ಸಾಸ್ ಅಥವಾ ಕೆಚಪ್ ಜೊತೆ ಸವಿಯಿರಿ. * ಬೇಕಿದ್ದರೆ ಕಲಸಿದ ಹಿಟ್ಟಿಗೆ ಬೇಯಿಸಿದ ಆಲೂಗಡ್ಡೆ ಮ್ಯಾಶ್ ಮಾಡಿ ಮಿಕ್ಸ್ ಮಾಡಿಕೊಳ್ಳಬಹುದು. ಜೊತೆಗೆ ತುರಿದ ಕ್ಯಾರೆಟ್, ಬೇಯಿಸಿದ ಬಟಾಣಿ,ಸಣ್ಣಗೆ ಹೆಚ್ಚಿದ ಎಲೆಕೋಸು, ಕ್ಯಾಪ್ಸಿಕಮ್ ಇತರೆ ತರಕಾರಿಗಳನ್ನು ಮಿಕ್ಸ್ ಮಾಡಿಕೊಳ್ಳಬಹುದು.

Share This Article
Leave a Comment

Leave a Reply

Your email address will not be published. Required fields are marked *