ಸಿದ್ದು ಸರ್ಕಾರದ ಯೋಜನೆಯಲ್ಲಿ ಯಾರಿಗೆ ಎಷ್ಟು ಕಮಿಷನ್: ಸಿಟಿ ರವಿ ಹೇಳ್ತಾರೆ ಓದಿ

Public TV
2 Min Read

ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮೋದಿ ಕಾಂಗ್ರೆಸ್ ಸರ್ಕಾರದ ಕಮಿಷನ್ ಬಗ್ಗೆ ಮಾತಾನಾಡುತ್ತಾರೆ ಅಂತ ಮೊದಲೇ ಗೊತ್ತಾಗ್ತಿದ್ದರೆ ಸಂಪೂರ್ಣ ಮಾಹಿತಿ ನೀಡುತ್ತಿದ್ದೆವು ಅಂತ ಶಾಸಕ ಸಿಟಿ ರವಿ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರಗೆ ಸರ್ಕಾರ ತೆಗೆದುಕೊಳ್ಳುವ ಕಮಿಷನ್ ಕುರಿತು ಫುಲ್ ಡಿಟೈಲ್ಸ್ ಸಿಕ್ಕಿಲ್ಲ. ಒಟ್ಟು 23% ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ. ಟೆಂಡರ್ ಕೊಡಬೇಕಾದ್ರೆ 10% ತೆಗೆದುಕೊಂಡರೆ ಬಿಲ್ ಕಂಪ್ಲೀಟ್ ಆಗುವಷ್ಟೋತ್ತಿಗೆ 23% ಪಡೆದುಕೊಳ್ಳುತ್ತಿದ್ದಾರೆ ಅಂತ ಆರೋಪಿಸಿದ್ರು. ಇದನ್ನೂ ಓದಿ: ಮೋದಿ ವಿರುದ್ಧದ ರಮ್ಯಾ ಟ್ವೀಟ್ ಗೆ ಶಾಸಕ ಜಮೀರ್ ಅಹಮದ್ ಅಸಮಾಧಾನ!

ಕಮಿಷನ್ ವಿಚಾರದ ಬಗ್ಗೆ ವಿಧಾನ ಸಭೆಯಲ್ಲಿ ಚರ್ಚೆಗೆ ನಾನು ಸಿದ್ಧನಾಗಿರುತ್ತೇನೆ. ಒಟ್ಟಿನಲ್ಲಿ ಮೋದಿಯವರು ಕಮಿಷನ್ ಬಗ್ಗೆ ಮಾತನಾಡುತ್ತಾರೆ ಅಂತ ಮಾಹಿತಿ ಗೊತ್ತಿದ್ದರೆ, ಸಂಪೂರ್ಣ ಮಾಹಿತಿ ಕೊಡುತ್ತಿದ್ದೆವು ಅಂತ ಅವರು ಹೇಳಿದರು. ಇದನ್ನೂ ಓದಿ: ಈಕೆ ಯಾರು? ಸಾಧನೆ ಏನು? ಕನ್ನಡ ಬಾರದ ಕಾಡುಪಾಪ- ಮೋದಿ ಕಾಲೆಳೆದ ರಮ್ಯಾ ವಿರುದ್ಧ ಜಗ್ಗೇಶ್ ಕಿಡಿ

ಲೋಕಾಯುಕ್ತ ಮುಗಿಸಲು ಎಸಿಬಿ ರಚನೆ ಮಾಡಿದ್ರು. ಇದು ಇವರ ಸಾಧನೆ ಅಂತ ಹೇಳಿಕೊಂಡಿದ್ದಾರೆ. 46 ಸಾವಿರ ಕೋಟಿ ಖರ್ಚು ಮಾಡಿ 2 ಲಕ್ಷ ಹೆಕ್ಟೆರ್ ಗೆ ನೀರಾವರಿ ಸೌಲಭ್ಯ ನೀಡಿದ್ದಾರೆ. ಇಲ್ಲಿ ದುಡ್ಡು ಹೊಡೆದಿರುವುದು ಖಚಿತವಾಗುತ್ತಿದೆ. ರಾಜ್ಯಪಾಲರ ಮೂಲಕ ಪೋಸ್ಟ್ ಮಾರ್ಟಂ ಮಾಡಿದ್ದಾರೆ. ಈ ಬುಕ್ ಇವರ ಬಂಡವಾಳ ತೋರಿಸುತ್ತೆ ಅಂತ ಅವರು ಹೇಳಿದ್ರು. ಇದನ್ನೂ ಓದಿ: ಮೋದಿ ಭಾಷಣವನ್ನ ಮೂರು ಅಕ್ಷರಗಳಲ್ಲಿ ಟೀಕಿಸಿದ ರಮ್ಯಾ  

ರಮ್ಯಾ ಟ್ವೀಟ್ ಗೆ ತೀಕ್ಷ್ಣ ಪ್ರತಿಕ್ರಿಯೆ: ನಿನ್ನೆ ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕದ ರಾಜ್ಯದ ಜನತೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿಯವರು ತಮ್ಮ ಭಾಷಣ ಮುಗಿಸುತ್ತಿದ್ದಂತೆಯೇ ಇತ್ತ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು ಟ್ವೀಟ್ ಮಾಡುವ ಮೂಲಕ ಪ್ರಧಾನಿಯವರ ಕಾಲೆಳೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಟಿ ರವಿ, ಯದ್ ಭಾವಂ ತದ್ ಭವತಿ(ಭಾವನೆ ಇದ್ದಂತೆ ಫಲ) ಎನ್ನುವಂತೆ ಅವರ ಹೇಳಿಕೆ ಅವರ ಮನಸ್ಸು ಏನು ಅನ್ನೋದು ತೋರಿಸುತ್ತೆ. ಒಬ್ಬ ಪ್ರಧಾನಿ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ದೇಶಕ್ಕಾಗಿ ನವರಾತ್ರಿ ಉಪವಾಸ ಮಾಡುವ ಪ್ರಧಾನಿ ಬಗ್ಗೆ ಈ ರೀತಿ ಮಾತನಾಡಿದ್ರೆ ಇವರನ್ನ ಏನನ್ನಬೇಕು ಅಂತ ಗೊತ್ತಾಗ್ತಿಲ್ಲ ಅಂದ್ರು. ಇದನ್ನೂ ಓದಿ: ಕನ್ನಡಿಗ ರಾಹುಲ್ ದ್ರಾವಿಡ್‍ ಬಗ್ಗೆ ಮೋದಿ ಪ್ರಶಂಸೆ

Share This Article
Leave a Comment

Leave a Reply

Your email address will not be published. Required fields are marked *