ಸಿಗರೇಟಿನಿಂದ ಸುಟ್ಟು, ಅಡುಗೆ ಮನೆಯಲ್ಲೇ ಅಪ್ರಾಪ್ತೆ ಮೇಲೆ ಮಾಲೀಕನಿಂದ ನಿರಂತರ ಅತ್ಯಾಚಾರ!

Public TV
2 Min Read

ಛತ್ತೀಸ್‍ಗಢ: 15 ವರ್ಷದ ಅಪ್ರಾಪ್ತೆಯ ಮೇಲೆ ಮನೆಯ ಮಾಲೀಕನೇ ಸಿಗರೇಟಿನಿಂದ ಸುಟ್ಟು ಅಡುಗೆ ಮನೆಯಲ್ಲಿಯೇ ನಿರಂತರವಾಗಿ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಹರಿಯಾಣದ ಘರಿದಾಬಾದ್‍ನಲ್ಲಿ ನಡೆದಿದೆ.

ಸಂತ್ರಸ್ತೆಗೆ ಗಂಭೀರವಾಗಿ ಗಾಯವಾಗಿದ್ದು, ಸದ್ಯಕ್ಕೆ ಜಿಲ್ಲೆಯ ಬಿ.ಕೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಎರಡು ವರ್ಷಗಳ ಹಿಂದೆ ಸುರೇಂದರ್ ಎಂಬುವನು ಸಂತ್ರಸ್ತೆಯನ್ನು ಜಾರ್ಖಂಡ್‍ನ ಗೋದಾ ಜಿಲ್ಲೆಯಿಂದ ದೆಹಲಿಗೆ ಸಾಗಿಸಿದ್ದನು ಎಂದು ವರದಿಗಳು ತಿಳಿಸಿವೆ.

ಸಂತ್ರಸ್ತೆಯ ಪೋಷಕರು ರಸ್ತೆ ಅಪಘಾತದಲ್ಲಿ ಮೃತಪಟ್ಟ ನಂತರ ಆಕೆಯನ್ನು ಮತ್ತು ಅವಳ ಸಹೋದರರನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ. ಆಗ ಆಕೆಯ ಅಜ್ಜಿ ಮನೆಗೆ ಬಂದಿದ್ದು, ಆಕೆಯನ್ನ ಕೆಟ್ಟದಾಗಿ ನೋಡಿಕೊಳ್ಳುತ್ತಿದ್ದರು. ಮಾನವೀಯತೆ ಇಲ್ಲದೆ ಸಂತ್ರಸ್ತೆಯನ್ನು ಸುರೇಂದರ್ ಗೆ 4,000 ರೂ. ಗೆ ಮಾರಾಟ ಮಾಡಿದ್ದಳು.

ಸುರೇಂದರ್ ಸಂತ್ರಸ್ತೆಯನ್ನು ತನ್ನ ಮನೆಗೆ ಕರೆದುಕೊಂದು ಬಂದು ಅನೇಕ ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ನನಗೆ ಪ್ರತಿದಿನ ಹೊಡೆಯುತ್ತಿದ್ದನು. ಬಲವಂತವಾಗಿ ಅತ್ಯಾಚಾರ ಮಾಡುತ್ತಿದ್ದನು. ನಂತರ ಕೆಲ ದಿನಗಳಾದ ಮೇಲೆ ನನ್ನನ್ನು ದೆಹಲಿಯ ಬೇರೆ ದಂಪತಿಗೆ ಮನೆಕೆಲಸಕ್ಕೆ ನೇಮಕ ಮಾಡಿದ್ದನು. ಆಗ ಸ್ವಲ್ಪದಿನ ನನ್ನ ಮೇಲೆ ಯಾವುದೇ ರೀತಿ ದೌರ್ಜನ್ಯ ಎಸಗುತ್ತಿರಲಿಲ್ಲ ಎಂದು ನೊಂದ ಸಂತ್ರಸ್ತೆ ಹೇಳಿದ್ದಾಳೆ.

ದೆಹಲಿಯ ದಂಪತಿಯ ಮನೆಗೆ ಕೆಲಸಕ್ಕೆ ನೇಮಕಗೊಂಡಾಗ ನಾನು ಸಂತೋಷದಿಂದ ಇದ್ದೆ. ಆದರೆ ಆ ಮನೆಯಲ್ಲಿ ನನ್ನ ಒಪ್ಪಂದ ಮುಗಿದಿತ್ತು. ಮತ್ತೆ ನನಗೆ ಹಿಂಸೆ ಕೊಡಲು ಪ್ರಾರಂಭಿಸಿದನು. ದೆಹಲಿಯಲ್ಲಿ ನನ್ನ ಒಪ್ಪಂದ ಕೊನೆಗೊಂಡ ಬಳಿಕ ಸುರೇಂದರ್ ನ ಸ್ನೇಹಿತ ಮಣಿ ಮಿಶ್ರಾ ಮನೆಗೆ 30,000 ರೂ. ಗೆ ಮಾರಾಟ ಮಾಡಿದನು. ಆದರೆ ಮಿಶ್ರಾ ಸುರೇಂದರ್ ಗಿಂತ ಕೆಟ್ಟವನಾಗಿದ್ದು, ಯಾವಾಗಲೂ ಹೊಡೆಯುತ್ತಿದ್ದ. ಒಂದು ವೇಳೆ ನಾನು ಕಿರುಚಿದರೆ ಅಡುಗೆ ಮನೆಯಲ್ಲಿದ್ದ ಕೆಂಪು ಚಾಕು ತೋರಿಸಿ ಬೆದರಿಕೆ ಹಾಕುತ್ತಿದ್ದ. ಅಷ್ಟೇ ಅಲ್ಲದೇ ನನ್ನ ಕಾಲುಗಳನ್ನು ಕಟ್ಟಿ ಸಿಗರೇಟುಗಳಿಂದ ಕಾಲುಗಳನ್ನು ಸುಡುತ್ತಿದ್ದ ಎಂದು ಸಂತ್ರಸ್ತೆ ಹೇಳಿದ್ದಾಳೆ.

ಒಂದು ದಿನ ಮಿಶ್ರಾ ಪತ್ನಿ ಮತ್ತು ಮಕ್ಕಳು ಹೊರಗಡೆ ಇದ್ದಾಗಲೇ ತೀವ್ರವಾಗಿ ಹೊಡೆದು ಅತ್ಯಾಚಾರ ಎಸಗಿದ್ದಾನೆ. ಬಳಿಕ ಸಂತ್ರಸ್ತೆ ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಹೊರಬಂದಿದ್ದಾಳೆ. ನಂತರ ಆಕೆಗೆ ಇಬ್ಬರು ಯುವಕರು ಸಿಕ್ಕಿದ್ದು, ಎಲ್ಲಾ ವಿಚಾರವನ್ನು ಅವರಿಗೆ ತಿಳಿಸಿದ್ದಾಳೆ. ಆಗ ಆಕೆಯ ಕಣ್ಣುಗಳು ಊದಿಕೊಂಡು ದೇಹವೆಲ್ಲಾ ಸಿಗರೇಟಿನಿಂದ ಗಾಯಗೊಂಡಿದ್ದವು. ನಂತರ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆರೋಪಿ ಮತ್ತು ಅವರ ಕುಟುಂಬದವರನ್ನು ಪತ್ತೆಹಚ್ಚಲು ವಿಶೇಷ ತಂಡವನ್ನು ರಚಿಸಲಾಗಿದೆ. ಈ ಕೃತ್ಯದಲ್ಲಿ ಅಜ್ಜಿಯ ಪಾತ್ರವೂ ಇತ್ತಾ ಎಂಬುದನ್ನ ಪರಿಶೀಲಿಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇದೊಂದು ಅಪರೂಪದ ಪ್ರಕರಣ, ಆದರೆ ಈಗ ಸಂತ್ರಸ್ತೆಯ ವೈದ್ಯಕೀಯ ಸ್ಥಿತಿ ಮುಖ್ಯವಾಗಿದೆ ಎಂದು ರಾಜ್ಯದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಬಾಲ್ ಕೃಷನ್ ಗೋಯೆಲ್ ತಿಳಿಸಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *