ಚಂದನ್ ನಂಗೆ ಯಾಕೆ ವಿಶೇಷ ವ್ಯಕ್ತಿ: ಬೊಂಬೆ ನಿವೇದಿತಾ ಹೇಳ್ತಾರೆ ಓದಿ

Public TV
2 Min Read

ಬೆಂಗಳೂರು: ಬಿಗ್ ಬಾಸ್ ಸೀಸನ್ 5ರ ವಿನ್ನರ್ ಹಾಸನ ಮೂಲದ ಚಂದನ್ ಶೆಟ್ಟಿ ಅವರು ಸೋಮವಾರ ರಾತ್ರಿ ಪಬ್ಲಿಕ್ ಟಿವಿ ಕಚೇರಿಗೆ ಬಂದು ತಮ್ಮ ಅನುಭವಗಳನ್ನು ಹಂಚಿಕೊಂಡರು. ಈ ವೇಳೆ ಗೆಳತಿ ನಿವೇದಿತಾ ಗೌಡ ಅವರು ಮೈಸೂರಿನಿಂದ ಪೋನ್ ಮೂಲಕ ಮಾತನಾಡಿ ಚಂದನ್ ಒಬ್ಬ ಒಳ್ಳೆಯ ಗೆಳೆಯ ಎಂಬುದನ್ನು ನಿರೂಪಿಸಿದ್ರು.

ಮೈಸೂರಿನಲ್ಲಿ ತುಂಬಾ ಚೆನ್ನಾಗಿಯೇ ಜನ ರೆಸ್ಪಾನ್ಸ್ ಮಾಡಿದ್ದಾರೆ. ಎಲ್ಲರೂ ನನ್ನ ತುಂಬಾ ಇಷ್ಟ ಪಡುತ್ತಿದ್ದಾರೆ. ನಾನು ಎಲ್ಲೇ ಹೋದ್ರೂ ಪ್ಲೀಸ್ ಚಂದನ್ ಅಂತ ಕರೆಯಿರಿ ಎಂದು ಜನ ಹೇಳುತ್ತಿದ್ದಾರೆ. ಆವಾಗ ನಾನು ಚಂದನ್.. ಚಂದನ್ ಎಂದು ಕರೆಯುತ್ತೇನೆ. ಒಟ್ಟಿನಲ್ಲಿ ಎಲ್ಲರಿಗೂ ನಾನು ಚಂದನ್ ಅಂತ ಕರೆಯುವುದು ತುಂಬಾ ಇಷ್ಟ ಅಂತ ನಿವೀ ಹೇಳಿದ್ರು. ಇದನ್ನೂ ಓದಿ: ಬೌನ್ಸರ್ ಗಳು ನನ್ನನ್ನು ಪಬ್‍ನಿಂದ ಹೊರ ಹಾಕಿದ್ದೆ ಸ್ಫೂರ್ತಿ ಆಯ್ತು!

ಬಿಗ್ ಬಾಸ್ ಮನೆಯಲ್ಲಿ ಅವಳು ಯಾವಾಗಲೂ ಚಂದನ್ ಚಂದನ್ ಅಂತ ಕರೆಯುವುದು ಎಲ್ಲರಿಗೂ ಒಂದು ಸ್ವಲ್ಪ ಬೇಜಾರಾಗ್ಬಿಟ್ಟಿತ್ತು. ಹೀಗಾಗಿ ಎಲ್ಲರೂ ರೇಗ್ಸಿ ರೇಗ್ಸಿ ಅವಳು ಕರೆಯುವುದನ್ನೇ ಬಿಡಿಸಿದ್ರು. ನೋಡು ನಿವಿ ಇದೀಗ ಜನ ಅದನ್ನೇ ಜಾಸ್ತಿ ಇಷ್ಟಪಡುತ್ತಿದ್ದಾರೆ ಅಂತ ಚಂದನ್ ಅವರು ನಿವೇದಿತಾಳಿಗೆ ಹೇಳಿದ್ರು. ಇದನ್ನೂ ಓದಿ: ಚಂದನ್ ಶೆಟ್ಟಿ ನನಗೆ ಯಾಕೆ ಸ್ಪೆಷಲ್ ಅಂತ ಹೇಳಿದ್ರು ಅರ್ಜುನ್ ಜನ್ಯ

ಇದೇ ಸಂದರ್ಭದಲ್ಲಿ ವಿನ್ ಆದ ಬಗ್ಗೆ ಎಷ್ಟು ಖುಷಿಯಾಯ್ತು ನಿಂಗೆ ಅಂತ ನಿವೇದಿತಾ ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಚಂದನ್, ತುಂಬಾ ಖುಷಿಯಾಗ್ತಿದೆ. ನಾನು ಗೆಲ್ತೀನಿ ಅನ್ನೋದನ್ನು ನಿರೀಕ್ಷೆ ಮಾಡಿರಲಿಲ್ಲ. ಚಂದನ್ ನೀವು ಮಾಡೋ ಮ್ಯೂಸಿಕ್ ಇಷ್ಟವಾಗ್ತಿದೆ ಅಂತ ಜನ ಹೇಳ್ತಿದ್ದಾರೆ ಹೊರತು ಯಾರೂ ಗುಡ್ ಹ್ಯೂಮನ್ ಬೀಯಿಂಗ್ ಅಂತ ಹೇಳ್ತಿಲ್ಲ ಅಂತ ಅಂದು ನಿನ್ನ ಜೊತೆ ಕೇಳಿದ್ದೆ ಅಲ್ವಾ ಅಂದ್ರು.

ವೇಳೆ ನಿವೇದಿತಾ ಗೌಡ ಅವರು, ನಾನು ಹೇಳಿದ್ದೆ ತಾನೇ ನೀನು ಒಳ್ಳೆಯ ವ್ಯಕ್ತಿ ಅಂತ. ಹೌದು, ಆದ್ರೆ ನಂಗೆ ಗೊತ್ತಿರಲಿಲ್ಲ. ಅವಾಗ ನೀನು ಹೇಳಿದ್ದಕ್ಕೆ ಸಮಾಧಾನ ಪಟ್ಟುಕೊಳ್ತಿದ್ದೆ ಅಂತ ಹೇಳಿದ್ರು.

ಚಂದನ್ ಯಾಕೆ ಸ್ಪೆಷಲ್: ಬಿಗ್ ಬಾಸ್ ಮನೆಯಲ್ಲಿ ಖುಷಿ, ದುಃಖ ಎರಡನ್ನೂ ನಿವೇದಿತಾ ಹಂಚಿಕೊಳ್ತಿದ್ದೀದ್ದು ಚಂದನ್ ಜೊತೆ. ಹೀಗಾಗಿ ಯಾಕೆ ಚಂದನ್ ನಿಮಗೆ ಸ್ಪೆಷಲ್ ಅಂತ ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ನಿವೀ,  ಚಂದನ್ ಒಬ್ಬರೇ ನನ್ನ ಮೈಂಡ್ ಸೆಟ್ ನ್ನು ಅರ್ಥ ಮಾಡಿಕೊಳ್ಳುತ್ತಿದ್ದ ವ್ಯಕ್ತಿ. ಆದ್ರೆ ಅವಾಗ ನನಗೆ ಅನ್ನಿಸುತ್ತಿತ್ತು. ಯಾಕೆ ನಾನು ಚಂದನ್ ಅವರನ್ನು ಹಚ್ಚಿಕೊಂಡಿದ್ದೀನಿ. ಅವರು ಹೇಳಿದ್ರೆ ಮಾತ್ರ ನನಗೆ ಸಮಾಧಾನವಾಗುತ್ತದೆ ಅಂತ. ಆದ್ರೆ ಇದೀಗ ಅರ್ಥವಾಗುತ್ತಿದೆ. ಆ ಮನೆಯೊಳಗಡೆ ಚಂದನ್ ಮಾತ್ರ ನನ್ನ ತುಂಬಾ ಇಷ್ಟಪಡುತ್ತಿದ್ದದು. ನಾನು ಹೇಗಿದ್ದೀನಿ ಹಾಗೇಯೇ ಅವರು ನನ್ನ ಸ್ವೀರಿಸುತ್ತಿದ್ದರು ಅಂತ ಹೇಳಿದ್ರು.

ಬಿಗ್ ಬಾಸ್ ಮನೆಯಲ್ಲಿ ನನಗೆ ನಿವೀ, ದಿವಾಕರ್ ಹಾಗೂ ಸಮೀರ್ ಆಚಾರ್ಯ ಈ ಮೂವರೇ ನನ್ನ ಪ್ರೋತ್ಸಾಹಿಸುತ್ತಿದ್ದರು. ಮನೆಯಲ್ಲಿ ಎಲ್ಲರೂ ಅವರವರಿಗೆ ಬೇಜಾರಾದಾಗ ನನ್ನ ಬಳಿ ಬಂದು ಹಾಡು ಹೇಳಿಸುತ್ತಿದ್ದರು. ಆ ಸಂದರ್ಭದಲ್ಲಿ ನಾನು ಹಾಡು ಹೇಳಿ ಅವರನ್ನು ಖುಷಿ ಪಡಿಸುತ್ತಿದ್ದೆ ಅಂತ ತಮ್ಮ ಮನದಾಳದ ಮಾತುಗಳನ್ನು ಪಬ್ಲಿಕ್ ಟಿವಿ ಕಚೇರಿಯಲ್ಲಿ ಬಿಚ್ಚಿಟ್ಟರು. ಚಂದನ್ ಶೆಟ್ಟಿಯವರು ನಿವೇದಿತಾ ಗೌಡ ಅವರಿಗೆ ಒಂದು ಟೆಡ್ಡಿಬೇರನ್ನು ಉಡುಗೊರೆಯಾಗಿ ನೀಡಿದ್ದಾರೆ.

https://www.youtube.com/watch?v=_5g4UpRbWiE

Share This Article
Leave a Comment

Leave a Reply

Your email address will not be published. Required fields are marked *