ಕಿಸ್ಸಿಂಗ್ ಸೀನ್‍ನ ಕರಾಳ ಸತ್ಯ ಬಿಚ್ಚಿಟ್ಟ ರಾಖಿ ಸಾವಂತ್

Public TV
1 Min Read

ಮುಂಬೈ: ತನ್ನ ಬೋಲ್ಡ್ ಆ್ಯಕ್ಟಿಂಗ್ ಮತ್ತು ಸೆಕ್ಸಿ ಲುಕ್ ನಿಂದ ಪಡ್ಡೆ ಹುಡುಗರ ರಾಣಿ ಅಂತಾ ಕರೆಸಿಕೊಳ್ಳುವ ರಾಖಿ ಸಾವಂತಾ ಕಿಸ್ ಸೀನ್ ಮಾಡುವಾಗ ಆಗೋ ಅನುಭವವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಸದ್ಯ ರಾಖಿ ಸಾವಂತ್ ಸಿನಿಮಾವೊಂದರ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದು, ಚುಂಬನ ದೃಶ್ಯದ ಶೂಟಿಂಗ್ ನಂತರ 2007ರಲ್ಲಿ ನಡೆದ ಘಟನೆಯೊಂದು ನೆನಪು ಮಾಡಿಕೊಂಡಿದ್ದಾರೆ. ಸಿನಿಮಾದಲ್ಲಿ ಕಿಸ್ ಸೀನ್ ಮಾಡುವಾಗ ನನಗೆ 2007ರಲ್ಲಿ ನಡೆದ ಪಾರ್ಟಿಯ ಮಿಖಾ ಸಿಂಗ್ ಪ್ರಕರಣ ನೆನಪಿಗೆ ಬಂತು. ಅಂದು ನನಗೆ ಒತ್ತಾಯಪೂರ್ವಕವಾಗಿ ಕಿಸ್ ಮಾಡಿದ್ದರಿಂದ ನನಗೆ ತುಂಬಾ ಇರಿಸು ಮುರಿಸು ಉಂಟಾಗಿತ್ತು. ಎಲ್ಲರೂ ನನ್ನ ಅಸಹಾಯಕತೆಯನ್ನು ದುರುಪಯೋಗ ಮಾಡಿಕೊಂಡು ಕಿಸ್ ಮಾಡಿದ್ರು ಅಂತಾ ರಾಖಿ ಸಾವಂತ್ ಹೇಳಿಕೊಂಡಿದ್ದಾರೆ.

ಇಂದು ಕಿಸ್ಸಿಂಗ್ ಸೀನ್‍ಗಾಗಿ ಒಟ್ಟು 55 ಬಾರಿ ರಿಟೇಕ್ ಮಾಡಲಾಯಿತು. ಸೆಟ್‍ನಲ್ಲಿ ಪದೇ ಪದೇ ಕಿಸ್ ಮಾಡುವಾಗ ಮಿಖಾ ಘಟನೆ ನೆನಪು ಬಂದು ಒಂದು ಕ್ಷಣ ನಾನು ಭಯಗೊಂಡಿದ್ದೆ. 2007ರಲ್ಲಿ ಅಂದು ನಡೆದ ಕಹಿ ಘಟನೆ ಇನ್ನೂ ನನ್ನ ಮನಸ್ಸಿನಲ್ಲಿದೆ. ಪಾರ್ಟಿಯಲ್ಲಿ ನನ್ನ ಅಸಹಾಯಕತೆಯನ್ನು ದುರುಪಯೋಗ ಮಾಡಿಕೊಳ್ಳಲಾಗಿತ್ತು. ಒಂದೊಂದು ಸಲ ಜಗತ್ತಿನಲ್ಲಿ ಇಂತಹ ಜನರು ಇರುತ್ತಾರೆ ಎಂಬ ಪ್ರಶ್ನೆ ನನ್ನಲ್ಲಿ ಕಾಡುತ್ತದೆ ಅಂತಾ ರಾಖಿ ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ವಿರುಷ್ಕಾ ಈ ಕಾಂಡೋಮ್‍ಗಳನ್ನೆ ಬಳಸಲಿ-ಪತಂಜಲಿ ಕಾಂಡೋಮ್ ತರ್ತಿರಾ: ರಾಮ್‍ದೇವ್‍ಗೆ ರಾಖಿ ಚಾಲೆಂಜ್

ಈ ತರಹದ ಕಿಸ್ಸಿಂಗ್ ಸೀನ್ ಗಳಲ್ಲಿ ನಾನು ನಟಿಸದೇ ಇದ್ದಿದರಿಂದ ಚಿತ್ರೀಕರಣ ವೇಳೆ ಮುಜುಗರ ಉಂಟಾಗುತ್ತಿತ್ತು. ಹೀಗಾಗಿ ಶೂಟಿಂಗ್ ಸಮಯದಲ್ಲಿ ಅರ್ಧ ಬಾಟಲ್ ಮದ್ಯ ಸೇವಿಸಬೇಕಾಗಿ ಬಂತು. ಮೊದಲಿಗೆ ಕಿಸ್ಸಿಂಗ್ ಸೀನ್ ಮಾಡಲ್ಲ ಅಂದ್ರು, ಚಿತ್ರದ ಆ ಸನ್ನಿವೇಶಕ್ಕಾಗಿ ಅವಶ್ಯಕವಾಗಿತ್ತು ಅಂತಾ ಹೇಳಿದರು. ಇದನ್ನೂ ಓದಿ: ವಿರಾಟ್ ಕೊಹ್ಲಿ ಮದುವೆ ಸುದ್ದಿ ಕೇಳಿ ಗಳಗಳನೇ ಅತ್ತ ರಾಖಿ ಸಾವಂತ್-ವಿಡಿಯೋ ನೋಡಿ

Share This Article
Leave a Comment

Leave a Reply

Your email address will not be published. Required fields are marked *