ಮಂಡ್ಯ: ಚಾಲಕನ ಅಜಾಗರೂಕತೆಯಿಂದ ವ್ಯಾನ್ ರಸ್ತೆ ಬದಿಯ ಕಬ್ಬಿನ ಗದ್ದೆಗೆ ಉರುಳಿ ಬಿದ್ದಿರುವ ಘಟನೆ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಮಹೇಂದ್ರ ಮ್ಯಾಕ್ಸಿಮ ವ್ಯಾನ್ ಮಗುಚಿ ಅಪಘಾತ ಸಂಭವಿಸಿದ್ದು, ಈ ವ್ಯಾನ್ನಲ್ಲಿ ಸುಮಾರು ಏಳು ಜನ ಪ್ರಾಯಾಣಿಕರು ಪ್ರಯಾಣಿಸುತ್ತಿದ್ದರು. ಆದರೆ ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇಂದು ಮುಂಜಾನೆ ವ್ಯಾನ್ ಚಾಲಕ ಪ್ರಯಾಣಿಕರನ್ನು ಕರೆದುಕೊಂಡು ಕೆಆರ್ ಪೇಟೆಯಿಂದ ತೆಂಡೆಕೆರೆಗೆ ಕಡೆ ಹೋಗುತ್ತಿದ್ದರು. ಪಟ್ಟಣದ ಹೊರವಲಯದಲ್ಲಿ ಚಾಲಕ ನಿದ್ದೆ ಮಂಪರಿನಿಂದ ಆಕಸ್ಮತ್ತಾಗಿ ವ್ಯಾನ್ ಕಬ್ಬಿನ ಗದ್ದೆಗೆ ಉರುಳಿ ಬಿದ್ದಿದೆ. ಚಾಲಕನ ಅಜಾಗರೂಕತೆಯಿಂದ ಈ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ವ್ಯಾನ್ ಚಾಲಕ ಚಂದ್ರುಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಈ ಸಂಬಂಧ ಕೆಆರ್ ಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.