ಮಂಡ್ಯ: ಜಿಲ್ಲೆಯ ನಾಗಮಂಗಲ ತಾಲೂಕಿನ ಕಂಬದಹಳ್ಳಿ ಗ್ರಾಮದಲ್ಲಿ ಮೊರಾರ್ಜಿದೇಸಾಯಿ ವಸತಿ ಶಾಲೆಯ 10 ನೇ ತರಗತಿ ವಿದ್ಯಾರ್ಥಿನಿ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.
15 ವರ್ಷದ ವಿನುತಾ ನೇಣಿಗೆ ಶರಣಾದ ವಿದ್ಯಾರ್ಥಿನಿ. ಮೂಲತಃ ಹಾಸನ ಜಿಲ್ಲೆ, ಚನ್ನರಾಯ ಪಟ್ಟಣ ತಾಲೂಕಿನವಳಾದ ವಿನುತಾ ಕಂಬದಹಳ್ಳಿಯಲ್ಲಿರುವ ಮೊರಾರ್ಜಿದೇಸಾಯಿ ವಸತಿ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿದ್ದಳು.
ಎಂದಿನಂತೆ ನಿನ್ನೆಯೂ ರಾತ್ರಿ ಸ್ನೇಹಿತೆಯರ ಜೊತೆ ಊಟ ಮಾಡಿ ರೂಮಿನಲ್ಲಿ ಮಲಗಿದ್ದ ವಿನುತ, ತನ್ನ ಚೂಡಿದಾರದ ಶಾಲನ್ನೇ ಹಗ್ಗದ ರೀತಿ ಬಳಸಿ ನೇಣಿಗೆ ಶರಣಾಗಿದ್ದಾಳೆ. ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವುದಕ್ಕೆ ಕಾರಣ ತಿಳಿದು ಬಂದಿಲ್ಲ.
ಘಟನೆ ಸಂಬಂಧ ಬಿಂಡಿಗನವಿಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.