ಗರ್ಭಿಣಿ ಮೇಕೆಯ ಮೇಲೆ ಅತ್ಯಾಚಾರವೆಸಗಿದ ಕಾಮುಕನನ್ನ ನಗ್ನವಾಗಿ ಮೆರವಣಿಗೆ ಮಾಡಿದ್ರು

Public TV
1 Min Read

ಅಬುಜಾ: ವ್ಯಕ್ತಿಯೊಬ್ಬ ಗರ್ಭಿಣಿ ಮೇಕೆಯೊಂದರ ಮೇಲೆ ಅತ್ಯಾಚಾರ ಮಾಡಿರುವ ಆಘಾತಕಾರಿ ಘಟನೆ ನೈಜೀರಿಯಾದ ಉಗೋ ಎಂಬಲ್ಲಿ ನಡೆದಿದೆ

ಆರೋಪಿ ಕಾಮುಕನನ್ನು ಶೀನಾ ರ್‍ಯಾಂಬೋ ಎಂದು ಗುರುತಿಸಿದ್ದು, ತನ್ನ ಮನೆಯಲ್ಲಿಯೇ ಈ ಹೀನ ಕೃತ್ಯ ಎಸಗಿದ್ದಾನೆ. ಮೇಕೆ ಕಿರುಚಾಟ ಕೇಳಿ ಸ್ಥಳೀಯರು ಆತನ ಮನೆಗೆ ಬಂದು ಬಾಗಿಲು ಬಡಿದ್ದಾರೆ. ಆದರೆ ಬಾಗಿಲು ತೆಗೆಯಲಿಲ್ಲ. ನಂತರ ಗ್ರಾಮಸ್ಥರು ಬಾಗಿಲು ಮುರಿದು ಓಳಗೆ ಹೋಗಿ ನೋಡಿದರೆ ಆಗ ಆರೋಪಿ ಮೂಕಪ್ರಾಣಿಯ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದನು ನೋಡಿದ್ದಾರೆ.

 

ಉಗೋದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆದರೆ ಅದಕ್ಕೂ ಮುಂಚೆ ಸ್ಥಳೀಯರು ಆರೋಪಿ ಕಾಮುಕನನ್ನ ನಗ್ನಗೊಳಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದಾರೆ. ಮೇಕೆಯನ್ನ ಆರೋಪಿಯ ಕುತ್ತಿಗೆಗೆ ಕಟ್ಟಿ ಮೆರವಣಿಗೆ ಮಾಡಿದ್ದು, ಈ ವೇಳೆ ಜೋರಾಗಿ ಆತನನ್ನು ಅಪಹಾಸ್ಯ ಮಾಡಿ ಬೈದಿದ್ದಾರೆ. ಬಳಿಕ ಪೊಲೀಸರು ಆತನನ್ನು ವಶಕ್ಕೆ ಪಡೆದು ನಂತರ ಬಂಧಿಸಿದ್ದಾರೆ.

ಆರೋಪಿ ಹಾಗೂ ಆತನ ಕುಟುಂಬದವರನ್ನ ಊರು ಬಿಟ್ಟು ಹೋಗುವಂತೆ ಗ್ರಾಮಸ್ಥರು ಹೇಳಿದ್ದಾರೆ. 20 ವರ್ಷ ವಯಸ್ಸಿನವನಾದ ಆರೋಪಿ ಶೀನಾ ರ್‍ಯಾಂಬೋ ಈ ಹಿಂದೆಯೂ ಅನೇಕ ಅಪರಾಧಗಳನ್ನ ಎಸಗಿದ್ದಾನೆ ಎಂದು ಸಮುದಾಯದ ಮುಖ್ಯಸ್ಥರು ಹೇಳಿದ್ದಾರೆ. ಈತ ಈ ಹಿಂದೆ ಇದ್ದ ಗ್ರಾಮಗಳಲ್ಲೂ ಈ ರೀತಿಯ ಕೃತ್ಯವೆಸಗಿದ್ದು ಇತರೆ ಸಮುದಾಯಗಳು ಈತನನ್ನು ಊರುಗಳಿಂದ ಹೊರಹಾಕಿದ್ದವು. ಆತನ ತಂದೆ ಮೇಲಿನ ಗೌರವದಿಂದ ಹಿಂದಿನ ಪ್ರಕರಣಗಳಲ್ಲಿ ಸುಮ್ಮನೆ ಬಿಟ್ಟು ಕಳಿಸಿದ್ದರು. ಆದ್ರೆ ಈಗ ಆತ ಊರಿನಿಂದ ಹೊರಹೋಗೋ ಮುನ್ನ ಏನಾದರೂ ತ್ಯಾಗ ಮಾಡಬೇಕು ಎಂದು ಅವರು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *