8 ವರ್ಷದ ಬಳಿಕ ಮತ್ತೆ ಕೇರಳದ ನಾಗವಲ್ಲಿಯ ಅರಮನೆಯಲ್ಲಿ ಸದ್ದು!

Public TV
1 Min Read

ಬೆಂಗಳೂರು: ಸ್ಯಾಂಡಲ್‍ವುಡ್ ನ ಎವರ್ ಗ್ರೀನ್ ಸಿನಿಮಾಗಳಲ್ಲಿ ಒಂದಾದ ಆಪ್ತಮಿತ್ರ ಚಿತ್ರದ ಮತ್ತೊಂದು ಭಾಗ ಚಿತ್ರಮಂದರಿಕ್ಕೆ ಲಗ್ಗೆಯಿಡಲು ರೆಡಿಯಾಗುತ್ತಿದೆ. ಇಂದು ನಾಗವಲ್ಲಿ ವರ್ಸಸ್ ಆಪ್ತಮಿತ್ರರು ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ನೋಡುಗರಲ್ಲಿ ಮತ್ತೊಮ್ಮೆ ಭಯ ಹುಟ್ಟಿಸಲು ನಾಗವಲ್ಲಿ ಬರಲಿದ್ದಾಳೆ.

ಟ್ರೇಲರ್ ಬಿಡುಗಡೆಯಾಗಿದ್ದು ನೋಡುಗರಿಂದ ಮತ್ತು ವಿಮರ್ಶಾತ್ಮಕರಿಂದ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಈ ಹಿಂದೆ ತೆರೆಕಂಡಿರುವ ಆಪ್ತಮಿತ್ರ ಮತ್ತು ಆಪ್ತರಕ್ಷಕ ಎರಡು ಚಿತ್ರಗಳು ಜನರಲ್ಲಿ ಅಚ್ಚಳಿಯದೇ ಉಳಿದುಕೊಂಡಿವೆ. ಚಿತ್ರವನ್ನು ಎಷ್ಟೇ ಸಾರಿ ನೋಡಿದ್ರೂ ಪದೇ ಪದೇ ನೋಡಬೇಕೆನ್ನುವ ಸಿನಿಮಾಗಳಲ್ಲಿ ಆಪ್ತಮಿತ್ರ ಮತ್ತು ಆಪ್ತರಕ್ಷಕ ಸೇರಿಕೊಂಡಿವೆ. ಮೊದಲೆರೆಡು ಚಿತ್ರಗಳು ಹಿರಿಯ ನಟರಾದ ವಿಷ್ಣುವರ್ಧನ್, ರಮೇಶ್, ಸೌಂದರ್ಯ, ಪ್ರೇಮಾ, ಅವಿನಾಶ್, ದ್ವಾರಕೀಶ್ ಸೇರಿದಂತೆ ದೊಡ್ಡ ತಾರಾಬಳಗವನ್ನು ಹೊಂದಿದ್ದವು.

‘ನಾಗವಲ್ಲಿ ಮತ್ತು ಆಪ್ತಮಿತ್ರರು’ ಸಿನಿಮಾದಲ್ಲಿ ಈ ಬಾರಿ ಯುವ ಕಲಾವಿದರನ್ನು ಕಾಣಬಹುದಾಗಿದೆ. ಟ್ರೇಲರ್ ನಲ್ಲಿ ನೋಡಿದರೆ ಕಲಾವಿದರು ಹೊಸಬರು ಎಂಬ ಅನುಭವವಾಗುವುದುದ ತುಂಬಾನೇ ವಿರಳ. ಆಪ್ತಮಿತ್ರ ಸಿನಿಮಾ ರಿಲೀಸ್ ಗೂ ಮುನ್ನ ನಟಿ ಸೌಂದರ್ಯ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದರು. ಇನ್ನು ಕಾಕತಾಳಿಯ ಎಂಬಂತೆ ಆಪ್ತರಕ್ಷಕ ಚಿತ್ರ ಬಿಡುಗಡೆಗೂ ಮುನ್ನ ಸಾಹಸಸಿಂಹ ವಿಷ್ಣುವರ್ಧನ ಬಾರದ ಲೋಕಕ್ಕೆ ತಮ್ಮ ಪಯಣವನ್ನು ಬೆಳೆಸಿದರು.

ಈ ಮೊದಲಿನ ಎರಡು ಸಿನಿಮಾಗಳ ಕಥೆಯನ್ನು ಆಧಾರವಾಗಿರಿಸಿಕೊಂಡು ವಿಷ್ಣುವರ್ಧನ್ ಮತ್ತು ಸೌಂದರ್ಯ ಸಾವಿಗೆ ಹೇಗೆ ನಾಗವಲ್ಲಿ ಕಾರಣವಾಗ್ತಾಳೆ ಎಂಬುದನ್ನು ಕಂಡುಹಿಡಿಯಲು ಆಪ್ತಮಿತ್ರರ ತಂಡವೊಂದು ಮುಂದಾಗುತ್ತದೆ. ಎಲ್ಲ ವಿಷ್ಣು ಅಭಿಮಾನಿಗಳು ಕೇರಳದಲ್ಲಿ ನಾಗವಲ್ಲಿಯ ಅರಮನೆಗೆ ತೆರಳುತ್ತಾರೆ. ವಿಷ್ಣು ಅಭಿಮಾನಿಗಳಿಗೆ ನಾಗವಲ್ಲಿ ಸಿಗ್ತಾಳಾ, ಅರಮನೆಯಿಂದ ಎಲ್ಲರೂ ಹೊರಗೆ ಬರ್ತಾರಾ ಎಂಬ ಕೂತುಹೂಲವನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಅರಮನೆ ಪ್ರವೇಶದ ಬಳಿಕ ಕ್ಷಣ ಕ್ಷಣಕ್ಕೂ ನೋಡುಗರನ್ನು ಬೆಚ್ಚಿ ಬೀಳಿಸುವುದು ಖಂಡಿತ.

ಕೇರಳದ ನಾಗವಲ್ಲಿ ವಾಸಿಸುತ್ತಿದ್ದ ಅರಮನೆಯಲ್ಲೇ ಶೂಟಿಂಗ್ ಮಾಡಿರುವುದು ಈ ಚಿತ್ರದ ವಿಶೇಷ. ವಿಕ್ರಂ ಕಾರ್ತಿಕ್, ವೈಷ್ಣವಿ ಮೇನನ್ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ನಾಗವಲ್ಲಿ ಮಗದೊಮ್ಮೆ ಈ ಚಿತ್ರದ ಮೂಲಕ ಬರಲಿದ್ದಾಳೆ.

Share This Article
Leave a Comment

Leave a Reply

Your email address will not be published. Required fields are marked *