ಪತಿಯನ್ನು ಕೊಂದು, ಪ್ರೇಮಿಯನ್ನೇ ತನ್ನ ಗಂಡ ಎಂದು ನಂಬಿಸಲು ಆತನ ಮುಖಕ್ಕೆ ಆ್ಯಸಿಡ್ ಸುರಿದ ಪತ್ನಿ

Public TV
2 Min Read

ಹೈದರಾಬಾದ್: ತೆಲಂಗಾಣದ ನಗರ್ ಕರ್ನೂಲ್ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ನಡೆದ ಸುಧಾಕರ್ ರೆಡ್ಡಿ ಎಂಬವರ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಟ್ವಿಸ್ಟ್ ಬೆಳಕಿಗೆ ಬರುತ್ತಿದೆ.

ಮೃತ ಸುಧಾಕರ್ ರೆಡ್ಡಿಯವರು ನಗರ್ ಕರ್ನೂಲ್ ನ ಹೌಸಿಂಗ್ ಬೋರ್ಡ್ ಕಾಲೋನಿಯ ತಮ್ಮ ಮನೆಯಲ್ಲಿ ಶುಕ್ರವಾರ ಕೊಲೆಯಾಗಿದ್ದರು. ಸುಧಾಕರ್ ರೆಡ್ಡಿ ರನ್ನು ಆತನ ಪತ್ನಿ ಸ್ವಾತಿ ಹಾಗೂ ಪತ್ನಿಯ ಪ್ರಿಯಕರ ರಾಜೇಶ್ ಎಂಬುವರು ಸೇರಿ ಕೊಲೆ ಮಾಡಿದ್ದಾರೆ.

ಕ್ರಷರ್ ವ್ಯಾಪಾರ ಮಾಡುತ್ತಿದ್ದ ಸುಧಾಕರ್ ರೆಡ್ಡಿ ವ್ಯಾಪಾರ ಕೆಲಸದ ಮೇಲೆ ಹೈದರಾಬಾದ್ ತೆರಳಿದ್ದರು. ಈ ಸಮಯದಲ್ಲಿ ಸ್ವಾತಿ ತನ್ನ ಗಂಡ ಮನೆಯಲ್ಲಿ ಇಲ್ಲ ಎಂಬುದನ್ನ ತಿಳಿಸಿ, ತನ್ನ ಪ್ರೀಯಕರನನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಆದರೆ ಅಂದು ಮನೆಗೆ ವಾಪಸ್ ಆದ ಸುಧಾಕರ್ ರೆಡ್ಡಿ ಕೈಗೆ ಸ್ವಾತಿ ಹಾಗೂ ರಾಜೇಶ್ ಸಿಕ್ಕಿಬಿದ್ದಿದ್ದು, ಇಬ್ಬರ ನಡುವಿನ ಆಕ್ರಮ ಸಂಬಂಧ ಪತಿಗೆ ತಿಳಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸುಧಾಕರ್ ರೆಡ್ಡಿ ಮನೆಗೆ ವಂದ ವೇಳೆ ಸಿಕ್ಕಿಬಿದ್ದ ಸ್ವಾತಿ ಹಾಗೂ ರಾಜೇಶ್ ಸೇರಿ ಆತನನ್ನು ಕೊಲೆ ಮಾಡಿ, ದೇಹವನ್ನು ನವಾಬ್ ಪೇಟ್ ಪ್ರದೇಶ ಸಮೀಪವಿದ್ದ ಅರಣ್ಯ ಪ್ರದೇಶದಕ್ಕೆ ಕಾರಿನಲ್ಲಿ ತೆಗೆದುಕೊಂಡು ಹೋಗಿ ಸುಟ್ಟು ಹಾಕಿದ್ದಾರೆ. ನಂತರ ಮನೆಗೆ ಬಂದ ಸ್ವಾತಿ ತನ್ನ ಗಂಡನ ಬಟ್ಟೆಗಳನ್ನು ರಾಜೇಶ್ ಗೆ ನೀಡಿ ಆತನ್ನು ತನ್ನ ಗಂಡನ ಹಾಗೇ ಸಿದ್ಧಪಡಿಸಿ, ಆತನನ್ನು ಯಾರು ಗುರುತು ಹಿಡಿಯದಂತೆ ಮಾಡಲು ಆತನ ಮುಖದ ಮೇಲೆ ಆ್ಯಸಿಡ್ ಎರಚಿದ್ದಾಳೆ.

ನಂತರ ಗುರುತು ಸಿಗದ ದುಷ್ಕರ್ಮಿಗಳು ಮನೆಗೆ ಬಂದು ತನ್ನ ಪತಿ ಸುಧಾಕರ್ ರೆಡ್ಡಿ ಅವರ ಮೇಲೆ ದಾಳಿ ಮಾಡಿದ್ದಾರೆ ಎಂದು ಹೇಳಿ, ಗಾಯಗೊಂಡ ಸುಧಾಕರ್ ರೆಡ್ಡಿ ಅಲಿಯಾಸ್ ರಾಜೇಶ್ ನನ್ನ ಹೈದರಾಬಾದಿನ ಡಿಆರ್ ಟಿಓ ಆಸ್ಪತ್ರೆಗೆ ದಾಖಲಿಸಿದ್ದಾಳೆ.

ಘಟನೆ ಕುರಿತು ನ್ಯಾಯಾಧೀಶರ ಎದುರು ಹೇಳಿಕೆಯನ್ನು ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಧಾಕರ್ ರೆಡ್ಡಿಯನ್ನು ನೋಡಲು ಬಂದ ಕುಟುಂಬ ಸದಸ್ಯರು ಮುಖದ ಮೇಲೆ ತೀವ್ರ ಸುಟ್ಟ ಗಾಯವಾಗಿದ್ದರಿಂದ ಆತನ್ನು ಗುರುತಿಸಲು ವಿಫಲರಾಗುತ್ತಾರೆ. ಆದರೆ ಸುಧಾಕರ್ ರೆಡ್ಡಿ ತಾಯಿ ಮಗನ ವರ್ತನೆ ನೋಡಿ ಸಂಶಯಗೊಂಡಿದ್ದರೂ, ಆದರೆ ಮಗ ತೀವ್ರವಾಗಿ ಗಾಯಗೊಂಡಿರುವುದರಿಂದ ಹೀಗೆ ಮಾತನಾಡುತ್ತಿದ್ದಾನೆ ಎಂದು ತಿಳಿದ ಅವರು ಅದನ್ನು ನಿರ್ಲಕ್ಷ್ಯ ಮಾಡಿದ್ದರು.

ಘಟನೆ ಬೆಳಕಿಗೆ ಬಂದಿದ್ದು ಹೇಗೆ: ಆಸ್ಪತ್ರೆ ಚಿಕಿತ್ಸೆ ಪಡೆದ ನಂತರ ಸುಧಾಕರ್ ರೆಡ್ಡಿ ಅಲಿಯಾಸ್ ರಾಜೇಶ್ ನ ಕೈ ಬೆರಳುಗಳ ಹೆಬ್ಬೆಟ್ಟು ಗುರುತನ್ನು ಆಸ್ಪತ್ರೆಯ ಆಡಳಿತ ಮಂಡಳಿ ಪಡೆಯುತ್ತಾರೆ. ಆದರೆ ಆತನ ಕೈ ಬೆರಳುಗಳ ಗುರುತು ಸುಧಾಕರ್ ಅವರ ಕೈಬೆರಳಿನ ಗುರುತು ಹೊಂದಾಣಿಕೆ ಆಗದ ಕಾರಣ ಪ್ರಕರಣದ ಸತ್ಯಾಂಶ ಬೆಳಕಿಗೆ ಬಂದಿದೆ.

 

Share This Article
Leave a Comment

Leave a Reply

Your email address will not be published. Required fields are marked *