ಫಿಕ್ಸ್ ಆಯ್ತು 2.0 ಸಿನಿಮಾದ ರಿಲೀಸ್ ಡೇಟ್

Public TV
1 Min Read

ಮುಂಬೈ: ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಕಿಲಾಡಿ ಅಕ್ಷಯ್ ಕುಮಾರ್ ನಟನೆಯ `2.0′ ಸಿನಿಮಾ ರಿಲೀಸ್ ಡೇಟ್ ಫಿಕ್ಸ್ ಆಗಿದೆ.

ಮುಂದಿನ ವರ್ಷದ ಏಪ್ರಿಲ್ 27 ರಂದು `2.0` ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಈ ಮೊದಲು ಜನವರಿ 26ರಂದು ಸಿನಿಮಾ ರಿಲೀಸ್ ಡೇಟ್ ಫಿಕ್ಸ್ ಆಗಿತ್ತು. ಆದರೆ ತ್ರಿಡಿ ಗ್ರಾಫಿಕ್ಸ್ ವರ್ಕ್ ಕಂಪ್ಲಿಟ್ ಆಗದ ಕಾರಣ ರಿಲೀಸ್ ಡೇಟ್ ಮುಂದೂಡಲಾಗಿತ್ತು.

ಈಗ ಚಿತ್ರತಂಡ 2018 ಏಪ್ರಿಲ್ 27 ರಂದು ರಿಲೀಸ್ ಮಾಡಲು ನಿರ್ಧರಿಸಿದೆ. ಬಾಹುಬಲಿ-2 ಸಿನಿಮಾ ಕೂಡ ಏಪ್ರಿಲ್ 28 ರಂದು ರಿಲೀಸ್ ಆಗಿ ಅಳಿಸದ ದಾಖಲೆ ಬರೆದಿತ್ತು. ಈಗ ಅದೇ ದಾರಿಯಲ್ಲಿ ಶಂಕರ್ ಸಾರಥ್ಯದ 2.0 ಹೆಜ್ಜೆ ಇಡಲು ಸಜ್ಜಾಗಿದೆ.

400 ಕೋಟಿ ರೂ.ಬಜೆಟ್‍ನಲ್ಲಿ ನಿರ್ಮಾಣವಾಗಿರುವ ಮೊದಲ ಭಾರತೀಯ ಸಿನಿಮಾವಾಗಿದ್ದು, ತ್ರೀಡಿ ತಂತ್ರಜ್ಞಾನದಲ್ಲಿ ನಿರ್ಮಾಣವಾಗುತ್ತಿದೆ. 2.0 ಸಿನಿಮಾದಲ್ಲಿ ರಜನಿಕಾಂತ್, ಅಕ್ಷಯ್ ಕುಮಾರ್ ಮತ್ತು ಆ್ಯಮಿ ಜಾಕ್ಸನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎಸ್.ಶಂಕರ್ ಆ್ಯಕ್ಷನ್ ಕಟ್ ಹೇಳಿದ್ದು, ಎ.ಆರ್.ರೆಹಮಾನ್ ಸಂಗೀತದಲ್ಲಿ ಹಾಡುಗಳು ಮೂಡಿ ಬಂದಿವೆ. ಸಿನಿಮಾ ತೆಲುಗು ಮತ್ತು ಹಿಂದಿ ಎರಡು ಭಾಷೆಯಲ್ಲಿ ಮೂಡಿಬರಲಿದೆ.

https://www.youtube.com/watch?v=t5pm_1NIXWs

Share This Article
Leave a Comment

Leave a Reply

Your email address will not be published. Required fields are marked *