ಶೂಟಿಂಗ್ ವೇಳೆ ರಾಗಿಣಿ ದ್ವಿವೇದಿಗೆ ಗಾಯ, ಆಸ್ಪತ್ರೆಗೆ ದಾಖಲು

Public TV
1 Min Read

ಬೆಂಗಳೂರು: ಸಿನಿಮಾ ಒಂದರ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ನಟಿ ರಾಗಿಣಿ ದ್ವಿವೇದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇಂದು ಮಿನರ್ವ್ ಮಿಲ್ ನಲ್ಲಿ ರಾಗಿಣಿ ಅಭಿನಯದ ಎಮ್.ಎನ್.ಸಿ.ಎಚ್ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಫೈಟಿಂಗ್ ಶೂಟಿಂಗ್ ನಲ್ಲಿ ಭಾಗವಹಿಸಿದ ಸಹ ಕಲಾವಿದರೊಬ್ಬರು ಟೈಮಿಂಗ್ ಮಿಸ್‍ಆಗಿ ರಾಗಿಣಿಯವರ ಕಿವಿಗೆ ಪಂಚ್ ಮಾಡಿದ್ದಾರೆ. ತಕ್ಷಣ ಕೆಳಗೆ ಬಿದ್ದ ರಾಗಿಣಿ ಕಿವಿಯಿಂದ ರಕ್ತ ಬಂದಿದೆ. ಈ ಘಟನೆಯಿಂದಾಗಿ ರಾಗಿಣಿ ಕಿವಿಗೆ ಗಾಯವಾಗಿದ್ದು, ಚಿತ್ರತಂಡ ಕೂಡಲೇ ರಾಗಿಣಿ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದೆ.

ವೈದ್ಯರು ರಾಗಿಣಿ ಅವರಿಗೆ ಎರಡು ದಿನ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದಾರೆ. ರಾಗಿಣಿ ಅವರ ದೃಶ್ಯಗಳನ್ನು ಶೂಟ್ ಮಾಡುತ್ತಿದ್ದ ಚಿತ್ರತಂಡ ಚಿತ್ರೀಕರಣವನ್ನು ಮುಂದೂಡಿದೆ.

ಮುಸ್ಸಂಜೆ ಮಹೇಶ್ ನಿರ್ದೇಶನದ ಎಮ್.ಎನ್.ಸಿ.ಎಚ್ ಸಿನಿಮಾದಲ್ಲಿ ತನಿಖಾ ಅಧಿಕಾರಿಯಾಗಿ ರಾಗಿಣಿ ಕಾಣಿಸಿಕೊಂಡಿದ್ದಾರೆ. ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ ಆಗಿದ್ದು ರಾಗಿಣಿ ಮತ್ತೊಮ್ಮೆ ಆ್ಯಕ್ಷನ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ರಾಗಿಣಿ ಜೊತೆಯಲ್ಲಿ ಸಂಯುಕ್ತ, ನಕ್ಷತ್ರ, ಪ್ರಥಮ ಹಾಗೂ ಮೇಘನಾ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕರ್ನಾಟಕದ ಸುತ್ತ-ಮುತ್ತ ಚಿತ್ರೀಕರಣ ನಡೆಯಲಿದೆ.

Share This Article
Leave a Comment

Leave a Reply

Your email address will not be published. Required fields are marked *