ರಾಯಚೂರು: ಸತ್ತ ಕುರಿಗಳನ್ನ ಮರಕ್ಕೆ ನೇತು ಹಾಕಿದ್ರೆ ಉಳಿದ ಕುರಿಗಳಿಗೆ ಒಳಿತಾಗುತ್ತಂತೆ. ಹೀಗಂತ ಯಾರೋ ಹೇಳಿದ ಮೌಢ್ಯದ ಮಾತು ನಂಬಿದ್ದಾರೆ ರಾಯಚೂರಿನ ದೇವದುರ್ಗದ ಮಂದಿ.
ಇಲ್ಲಿ ವಿಚಿತ್ರ ರೋಗಕ್ಕೆ ಕುರಿ, ಮೇಕೆಗಳು ಸಾಯುತ್ತಿವೆ. ವೈದ್ಯರ ಚಿಕಿತ್ಸೆಗೆ ಫಲ ಸಿಕ್ಕಿಲ್ಲ. ಇದರಿಂದ ನೊಂದು ಬೆಂದ ಕುರಿಗಾಹಿಗಳು ಸತ್ತ ಕುರಿ, ಮೇಕೆಗಳನ್ನ ಬೇವಿನ ಮರಕ್ಕೆ ನೇತು ಹಾಕ್ತಿದ್ದಾರೆ.
ಈ ರಸ್ತೆಯಲ್ಲಿ ಓಡಾಡುವವರ ಮೂಗಿಗೆ ರಾಚುತ್ತಿದೆ ಕೆಟ್ಟ ದುರ್ವಾಸನೆ. ಸತ್ತ ಜಾನುವಾರುಗಳನ್ನ ಹೀಗೆ ಬಿಟ್ಟರೇ ರೋಗಾಣುಗಳು ತೀವ್ರಗತಿಯಲ್ಲಿ ಹರಡುತ್ತವೆ. ಮತ್ತಷ್ಟು ರೋಗ-ರುಜಿನ ಹರಡುತ್ತವೆ ಎಂಬ ಸಾಮಾನ್ಯ ಜ್ಞಾನವೂ ಇವರಿಗೆ ಇಲ್ವಾ ಎಂಬ ಪ್ರಶ್ನೆ ಮೂಡುತ್ತಿದೆ. ಜೊತೆಗೆ ಕುರಿಗಾಹಿಗಳಲ್ಲಿ ಅರಿವು ಮೂಡಿಸುವಲ್ಲಿ ಪಶುಸಂಗೋಪನಾ ಇಲಾಖೆ ವಿಫಲವಾವಾಗಿದೆ ಎಂಬ ಆರೋಪ ಕೇಳಿಬಂದಿದೆ.