ತಿಮ್ಮಪ್ಪನ ಪ್ರಸಾದಕ್ಕೆ ಸರ್ಜಿಕಲ್ ಸ್ಟ್ರೈಕ್-ಲ್ಯಾಬ್‍ನಿಂದ ಗ್ರೀನ್ ಸಿಗ್ನಲ್ ಸಿಕ್ರಷ್ಟೇ ಭಕ್ತರಿಗೆ ಪ್ರಸಾದ

Public TV
1 Min Read

ಬೆಂಗಳೂರು: ವಿಶ್ವದ ಪ್ರಸಿದ್ಧ ಕ್ಷೇತ್ರ ತಿರುಪತಿ ತಿಮ್ಮಪ್ಪನಿಗೆ ಕರ್ನಾಟಕದ ವ್ಯಕ್ತಿಯೊಬ್ಬರಿಂದ ಸರ್ಜಿಕಲ್ ಸ್ಟ್ರೈಕ್. ಇನ್ನು ಮುಂದೆ ತಿರುಪತಿ ತಿಮ್ಮಪ್ಪನ ಪ್ರಸಾದ ನೇರವಾಗಿ ಭಕ್ತರಿಗೆ ಸಿಗಲ್ಲ. ಅಷ್ಟೇ ಅಲ್ಲದೇ ಕೊಂಚ ಏನಾದ್ರೂ ಎಡವಟ್ಟಾದ್ರೂ ಪ್ರಸಾದವೇ ನಿಷೇಧವಾಗಲಿದೆ.

ವಿಶ್ವದ ಕೋಟಿ ಕೋಟಿ ಭಕ್ತರ ದೇವಾಲಯ ತಿರುಪತಿ ತಿರುಮಲ. ಅಲ್ಲಿನ ಲಡ್ಡು ಪ್ರಸಾದ ಅಂದ್ರೆ ಭಕ್ತರಿಗೆ ಪರಮ ಪವಿತ್ರ. ಆದ್ರೆ ಪ್ರಸಾದದಲ್ಲಿ ಕಬ್ಬಿಣದ ತುಂಡು, ಪಾನ್ ಪರಾಗ್ ಪ್ಯಾಕೇಟ್, ಜಿರಳೆ ಸಿಕ್ಕಿ ಸಾಕಷ್ಟು ವಿವಾದವಾಗಿತ್ತು. ಬೆಂಗಳೂರಿನ ಆರ್‍ಟಿಐ ಕಾರ್ಯಕರ್ತ ನರಸಿಂಹಮೂರ್ತಿ ಎಂಬವರು ಭಕ್ತರಿಗೆ ನೀಡುವ ಪ್ರಸಾದ ಹಾಗೂ ಅಲ್ಲಿನ ದೇವಾಲಯದಲ್ಲಿ ನೀಡುವ ಊಟಕ್ಕೆ ಆಹಾರ ಮತ್ತು ಗುಣಮಟ್ಟ ಇಲಾಖೆಯಿಂದ ಅಂದ್ರೆ ಎಫ್‍ಎಸ್‍ಎಸ್‍ನಿಂದ ಅನುಮತಿ ಪಡೆದಿಲ್ಲ ಅಂತಾ ಕಾನೂನು ಸಮರ ನಡೆಸಿದ್ದರು.

ಅಲ್ಲಿನ ಮುಖ್ಯಮಂತ್ರಿಗಳಿಂದ ಹಿಡಿದು ದೇವಾಲಯದ ಆಡಳಿತ ಮಂಡಳಿ ದೇವರ ಪ್ರಸಾದ ಸರ್ವಶ್ರೇಷ್ಠ, ಇದಕ್ಕೆ ಯಾವ ಇಲಾಖೆಯ ಸರ್ಟಿಫಿಕೆಟ್ ಪಡೆಯುವ ಆಗತ್ಯವಿಲ್ಲ ಅಂತ ಮೊಂಡುವಾದ ಮಾಡಿದ್ದರು. ಹೀಗಾಗಿ ನರಸಿಂಹಮೂರ್ತಿ ದೇಗುಲದ ಆಡಳಿತಾಧಿಕಾರಿ ಸಾಂಬಶಿವ್ ಎಂಬವರ ಮೇಲೆ ದೆಹಲಿ ಎಫ್‍ಎಸ್‍ಎಸ್‍ಎಐ ದೂರು ಕೊಟ್ಟಿದ್ದರು. ಕೊನೆಗೆ ಈಗ ಇವರನ್ನು ಎತ್ತಂಗಡಿ ಮಾಡಲಾಗಿದ್ದು, ಲೈಸೆನ್ಸ್ ಪಡೆಯುವಂತೆ ಆದೇಶ ಹೊರಡಿಸಿದೆ.

305 ವರ್ಷಗಳ ಬಳಿಕ ತಿರುಮಲ ದೇವಾಲಾಯ ಪ್ರಸಾದಕ್ಕೆ ಆಹಾರ ಮತ್ತು ಗುಣಮಟ್ಟ ಇಲಾಖೆಯಿಂದ ಲೈಸೆನ್ಸ್ ಪಡೆದಿದ್ದು, ಇನ್ಮುಂದೆ ಪ್ರಸಾದ ತಯಾರಿಕೆಯಲ್ಲಿ ಭಾರೀ ಬದಲಾವಣೆ ಆಗಲಿದೆ. ಹಾಗಿದ್ರೆ ತಿಮ್ಮಪ್ಪ ಸನ್ನಿಧಿಯ ಪ್ರಸಾದಕ್ಕೆ ಏನೇನಲ್ಲ ರೂಲ್ಸ್ ಅನ್ವಯವಾಗಲಿವೆ. ಹೊಸ ರೂಲ್ಸ್‍ಗಳು ಈ ಕೆಳಗಿನಂತಿವೆ.

ತಿಮ್ಮಪ್ಪನ ಪ್ರಸಾದಕ್ಕೂ ರೂಲ್ಸ್
1. ಪ್ರಸಾದ ತಯಾರಿಸುವವರು ಏಪ್ರನ್, ಕೈಗೆ ಗ್ಲೌಸ್, ಹದಿನೈದು ದಿನಕ್ಕೊಮ್ಮೆ ಮೆಡಿಕಲ್ ಟೆಸ್ಟ್ ನಡೆಸಬೇಕು
2. ತಿಂಗಳಿಗೊಮ್ಮೆ ಅಥವಾ ಹದಿನೈದು ದಿನಕ್ಕೊಮ್ಮೆ ಪ್ರಸಾದದ ಸ್ಯಾಂಪಲ್ ಟೆಸ್ಟ್‍ಗೆ ನೀಡಬೇಕು
3. ಪ್ರಸಾದಕ್ಕೆ ಏನೇನಲ್ಲ ಹಾಕಾಲಾಗುತ್ತೆ ಅನ್ನೋ ಮಾಹಿತಿ ಕೊಡಬೇಕು, ಅಡುಗೆ ಮನೆ ಸ್ವಚ್ಛತೆ ಇರಬೇಕು
4. ಗುಣಮಟ್ಟ ಕಾಪಾಡದೇ ಇದ್ರೆ ಪ್ರಸಾದಕ್ಕೆ ನಿಷೇಧ ಹೇರುವ ಸಾಧ್ಯತೆಯೂ ಇದೆ.

ಈ ಹೊಸ ನಿಯಮಾವಳಿಗಳ ಜಾರಿಯಾದರೆ ತಿಮ್ಮಪ್ಪನ ಪ್ರಸಾದವನ್ನು ಇನ್ಮುಂದೆ ಭಕ್ತರು ಕಣ್ಣುಮುಚ್ಚಿಕೊಂಡು ತಿನ್ನಬಹುದು.

 

Share This Article
Leave a Comment

Leave a Reply

Your email address will not be published. Required fields are marked *