16 ವರ್ಷದ ಹುಡುಗನ ಮೇಲೆ 15 ಬಾಲಕರಿಂದ ರೇಪ್

Public TV
2 Min Read

ಮುಂಬೈ: 15 ಜನ ಬಾಲಕರು ಕಳೆದ ಒಂದು ವರ್ಷದಿಂದ ನಿರಂತರವಾಗಿ ನನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಮುಂಬೈನ 16 ವರ್ಷದ ಬಾಲಕನೊಬ್ಬ ಆರೋಪಿಸಿದ್ದಾನೆ.

ನಗರದ ಪಶ್ಚಿಮ ಅಂಧೇರಿಯಲ್ಲಿ ವಾಸವಾಗಿರುವ ಬಾಲಕ ಈ ಬಗ್ಗೆ ಡಿ.ಎನ್.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಜೂನ್ 26 ರಂದು ಬಾಲಕ ಕೊನೆಯ ಬಾರಿ ಅತ್ಯಾಚಾರಕ್ಕೆ ಒಳಪಟ್ಟಿದ್ದು, ಇದರಿಂದ ಆತ ತೀವ್ರ ನೋವಿನಿಂದ ಬಳಲಿದ್ದಾನೆ. ಇದ್ರಿಂದ ಬೇಸತ್ತ ಬಾಲಕ ತನ್ನ ಗೆಳೆಯನೊಂದಿಗೆ ವಿಷಯವನ್ನ ಹಂಚಿಕೊಂಡಿದ್ದಾಗಿ ಪೊಲೀಸರಿಗೆ ಹೇಳಿದ್ದಾನೆ.

ಈ ಸಂಬಂಧ 15 ರಿಂದ 17 ವರ್ಷ ವಯಸ್ಸಿನ ಎಲ್ಲಾ 15 ಆರೋಪಿಗಳ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಈಗಾಗಲೇ 7 ಜನರನ್ನು ವಶಕ್ಕೆ ಪಡೆದಿದ್ದಾರೆ.

ಅತ್ಯಾಚಾರಕ್ಕೆ ಒಳಗಾದ ಬಾಲಕನಿಗೆ ಈ 15 ಜನರು ಬ್ಲ್ಯಾಕ್ ಮೇಲ್ ಮಾಡುವ ಮೂಲಕ ದೈಹಿಕವಾಗಿ ಹಿಂಸೆ ಕೊಡುತ್ತಿದ್ದರು. ಬಾಲಕನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದು, ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆಗಿದ್ದೇನು?: 2016ರಲ್ಲಿ ಮೊದಲ ಬಾರಿಗೆ ನೆರೆಮನೆಯವನಿಂದ ಬಾಲಕನ ಮೇಲೆ ಅತ್ಯಾಚಾರ ನಡೆದಿದೆ. ಇದನ್ನ ಆತ ವಿಡಿಯೋ ಮಾಡಿಕೊಂಡಿದ್ದು ತನ್ನ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾನೆ. ಸಂತ್ರಸ್ತ ಬಾಲಕ ಭಯದಿಂದ ಈ ವಿಷಯವನ್ನ ಕುಟುಂಬದವರ ಬಳಿ ಹೇಳಿಕೊಂಡಿರಲಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ನಂತರದ ದಿನಗಳಲ್ಲಿ ಪಕ್ಕದ ಮನೆಯವನು ಈ 9ನೇ ತರಗತಿಯ ಬಾಲಕನಿಗೆ ಬ್ಲಾಕ್‍ಮೇಲ್ ಮಾಡಿ ತನ್ನ ಗೆಳಯರೊಂದಿಗೂ ಸೆಕ್ಸ್ ಮಾಡುವಂತೆ ಒತ್ತಾಯಿಸಿದ್ದಾನೆ.

ಬಾಲಕನನ್ನು ಸರ್ಕಾರಿ ಶಾಲೆಯೊಂದರ ನಿರ್ಜನ ಮೈದಾನಕ್ಕೆ ಕರೆದುಕೊಂಡು ಹೋಗಿ 15 ಬಾಲಕರು ಒಬ್ಬರ ನಂತರ ಒಬ್ಬರಾಗಿ ಬಾಲಕನ ಮೇಲೆ ಅತ್ಯಾಚಾರವೆಸಗಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದು ಇಷ್ಟಕ್ಕೇ ನಿಲ್ಲಲಿಲ್ಲ: ಎರಡು ತಿಂಗಳಿನಿಂದ ಬಾಲಕರಲ್ಲಿ ಒಬ್ಬ ರೆಸ್ಟೋರೆಂಟ್ ನಲ್ಲಿ ಊಟ ಮಾಡಲು 1100 ರೂ. ಕೇಳಿದ್ದಾನೆ. ಬಾಲಕ ನನ್ನ ಬಳಿ ಹಣವಿಲ್ಲವೆಂದು ಹೇಳಿದಾಗ ಕೋಪದಿಂದ ಆತನನ್ನು ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಮತ್ತೊಮ್ಮೆ ರೇಪ್ ಮಾಡಿದ್ದಾರೆ. ಇದಲ್ಲದೆ ನನ್ನ ಮೇಲೆ ಇನ್ನೂ 4 ಬಾರಿ ಅತ್ಯಾಚಾರ ನಡೆದಿತ್ತು ಎಂದು ಬಾಲಕ ಹೇಳಿಕೊಂಡಿದ್ದಾನೆ. ದೌರ್ಜನ್ಯವನ್ನು ವಿರೋಧಿಸಿದಾಗ ಅವರೆಲ್ಲ ಹಲ್ಲೆ ಮಾಡುತ್ತಿದ್ದರು ಎಂದು ಬಾಲಕ ದೂರಿನಲ್ಲಿ ಉಲ್ಲೇಖಿಸಿದ್ದಾನೆ.

ಸತತ ಲೈಂಗಿಕ ದೌರ್ಜನ್ಯದಿಂದಾಗಿ ಸೋಮವಾರದಂದು ಬಾಲಕ ತೀವ್ರ ನೋವಿನ ಬಗ್ಗೆ ಹೇಳಿಕೊಂಡಿದ್ದಾನೆ. ಬಾಲಕನನ್ನು ನಗರದ ಕೂಪರ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದು, ಆತನ ಮೇಲೆ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ.

15 ಜನ ಬಾಲಕರ ವಿರುದ್ಧ ಅಸಹಜ ಲೈಂಗಿಕ ಕ್ರಿಯೆ ಆರೋಪದಡಿ ಹಾಗೂ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿಕೊಳ್ಳಲಾಗಿದೆ. ಈ ಸಂಬಂಧ ವಿಚಾರಣೆ ನಡೆಯುತ್ತಿದೆ ಎಂದು ಮುಂಬೈ ಡೆಪ್ಯೂಟಿ ಕಮೀಷನರ್ ರಶ್ಮಿ ಕರಂದಿಕಾರ್ ತಿಳಿಸಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *