ನೀವು ಚಿಕನ್ ಪ್ರಿಯರೇ.. ಹಾಗಿದ್ರೆ ಈ ಸುದ್ದಿಯನ್ನು ಮಿಸ್ ಮಾಡ್ದೆ ಓದಿ

Public TV
1 Min Read

ನವದೆಹಲಿ: ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಪೌಲ್ಟ್ರಿ ಉದ್ಯಮವು ಮನುಷ್ಯನ ಆರೋಗ್ಯ ಮೇಲೆ ಗಂಭೀರ ಸಮಸ್ಯೆಯನ್ನು ತಂದೊಡ್ಡುವ ಪ್ರತಿಜೀವಕ-ನಿರೋಧಕ ಉತ್ಪತ್ತಿ ಮಾಡುವ ತಾಣವಾಗಿದೆ ಅನ್ನೋ ಶಾಕಿಂಗ್ ನ್ಯೂಸ್ ಹೊರಬಿದ್ದಿದೆ.

ವಿಶ್ವ ಆರೋಗ್ಯ ಸಂಸ್ಥೆಯೂ ವಿನಾಶಕಾರಿ ಡ್ರಗ್ಸ್ ಗಳು ಜೀವಸಂಕುಲಕ್ಕೆ ಮಾರಕ ಎಂದು ಹೇಳಿದೆ. ಭಾರತದ ಪಂಜಾಬ್ ರಾಜ್ಯದಲ್ಲಿನ ಪೌಲ್ಟ್ರಿ ಉದ್ಯಮದಲ್ಲಿ ಸಂಶೋಧನೆ ನಡೆಸಿರುವ ವಿಜ್ಞಾನಿಗಳು ಕೋಳಿಗಳಿಗೆ ಯಾವುದೇ ರೋಗ ಹರಡದಂತೆ ನೀಡುವ ಪೆನ್ಸಿಲಿನ್ ಮತ್ತು ಸೆಫಲೋಸ್ಪೊರಿನ್ ಎಂಬ ರೋಗನಿರೋಧಕ ಔಷಧಿ ಸಖತ್ ಡೇಂಜರ್ ಅಂತ ಹೇಳಿದ್ದಾರೆ.

ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆಯ ಮಾಂಸದ ಬೇಡಿಕೆಯನ್ನು ನೀಗಿಸಲು ಕಡಿಮೆ ಅವಧಿಯಲ್ಲಿ ಕೋಳಿಗಳು ದಷ್ಟಪುಷ್ಟವಾಗಿ ಬೆಳೆಯುವಂತೆ ಮಾಡಲು ನೀಡುವ ನಿರೋಧಕಗಳಿಂದ ಕೋಳಿಗಳಲ್ಲಿ ಅಪಾಯಕಾರಿಯಾದ ಬ್ಯಾಕ್ಟೀರಿಯಾಗಳ ಉತ್ಪತ್ತಿಗೆ ಸಹಾಯಕಾರಿಯಾಗಿವೆ. ಅದ್ರಲ್ಲೂ ಭಾರತದಲ್ಲಿ ಇಂತಹ ಔಷಧಿಗಳನ್ನು ನೀಡಿ 35 ದಿನಗಳಿಗೆ ಬರುವ ಕೋಳಿಗಳು 30 ದಿನದಲ್ಲಿ ಮಾರುಕಟ್ಟೆಗೆ ಬರುವಂತೆ ಮಾಡಲಾಗುತ್ತೆ.

ಇಂತಹ ವಿಷಕಾರಿ ಕೋಳಿಮಾಂಸ ಬಳಸಿದ ಬಳಿಕ ಉಳಿದ ತ್ಯಾಜ್ಯ ಮತ್ತೆ ಪರಿಸರ ಸೇರೋದ್ರಿಂದ ಗಾಳಿ, ಅಂತರ್ಜಲ, ಮಣ್ಣು ಸೇರಿ ಇಡೀ ವಾತಾವರಣವೇ ಕಲುಷಿತವಾಗುತ್ತದೆ. ಇದರಿಂದ ಕೋಳಿ ಮಾಂಸ ಸೇವಿಸದೇ ಇರೋರಿಗೂ ಈ ಸೋಂಕು ಅಂತರ್ಜಲವನ್ನು ಸೇವಿಸುವ ಮನುಷ್ಯರಿಗೆ ಹರಡುತ್ತೆ ಅಂತ ವಿಜ್ಞಾನಿಗಳು ಹೇಳಿದ್ದಾರೆ. ಇಂತಹ ಮಾಂಸದ ಸೇವನೆಯಿಂದ ಪ್ರಮುಖವಾಗಿ ಕಿಡ್ನಿಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಅಲ್ಲದೇ ವಿಶೇಷವಾಗಿ ಪುರುಷರಿಗೆ ನಪುಂಸಕತೆಯನ್ನು ಉಂಟುಮಾಡುತ್ತದೆ. ಬಳಿಕ ಮನುಷ್ಯನಲ್ಲಿ ವಿಪರೀತ ಕೊಬ್ಬು ಬೆಳೆಯುವಂತೆ ಮಾಡುತ್ತದೆ. ಇದು ಸ್ಥೂಲಕಾಯಕ್ಕೂ ಆಹ್ವಾನ ನೀಡುತ್ತದೆ.

ಇನ್ನೂ ಕೆಲವು ಕೋಳಿಮಾಂಸದಲ್ಲಿ ಆರ್ಸೆನಿಕ್ ಎಂಬ ಭಯಾನಕ ವಿಷದ ಕಣಗಳು ಕಂಡುಬಂದಿವೆ. ವಿಚಿತ್ರ ಅಂದ್ರೆ ಈ ವಿಷ ಕೋಳಿಗಳ ದೇಹದಲ್ಲಿದ್ರೂ ಸಾಯಲ್ಲ, ಬದಲಿಗೆ ಇಂತಹ ಮಾಂಸ ತಿಂದ ಮನುಷ್ಯನ ಪ್ರಾಣಕ್ಕೆ ಕುತ್ತು ತರುತ್ತೆ. ಹೀಗಾಗಿ ಕೆಲವು ಮುನ್ನೆಚ್ಚರಿಕೆಗಳನ್ನು ಕೂಡ ವಿಜ್ಞಾನಿಗಳು ಹೇಳಿದ್ದಾರೆ. ಮಾಂಸವನ್ನು ತೊಳೆದುಕೊಳ್ಳುವ ಮುನ್ನ ಮತ್ತು ಬಳಿಕ ಸೋಂಕು ನಿವಾರಕ ದ್ರವದಿಂದ ಸ್ವಚ್ಛಗೊಳಿಸುವುದು ಅಗತ್ಯ, ಮಾಂಸವನ್ನು ಚೆನ್ನಾಗಿ ತೊಳೆದು ರಕ್ತವೆಲ್ಲಾ ಹೋದ ಬಳಿಕವೂ ಚೆನ್ನಾಗಿ ಬೇಯಿಸಬೇಕು ಅಂತ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *