5 ವರ್ಷದ ಪೋರಿಗೆ ಬಾಯ್‍ಫ್ರೆಂಡ್ ಜೊತೆ ಮದ್ವೆ- ಸಾವಿನಂಚಿನ ಬಾಲೆಯ ಆಸೆ ಈಡೇರಿಸಿದ ಪೋಷಕರು

Public TV
1 Min Read

ಎಡಿನ್ಬರ್ಗ್(ಸ್ಕಾಟ್ಲೆಂಡ್): 5 ವರ್ಷದ ಬಾಲಕಿಯೊಬ್ಬಳು ತನ್ನ ಬೆಸ್ಟ್ ಫ್ರೆಂಡ್ ಜೊತೆ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾಗಿರೋ ಘಟನೆ ಸ್ಕಾಟ್ಲೆಂಡ್‍ನಲ್ಲಿ ನಡೆದಿದೆ.

ಕ್ಯಾನ್ಸರ್‍ನಿಂದಾಗಿ ಸಾವಿನಂಚಿನಲ್ಲಿದ್ದ ಐದು ವರ್ಷದ ಈಲೀದ್ ಪ್ಯಾಟರ್ಸನ್ ಎಂಬಾಕೆ ಮದುವೆಯಾದ ಬಾಲಕಿ. ಎರಡು ವರ್ಷ ವಯಸ್ಸಿನಲ್ಲಿರುವಾಗಲಿಂದಲೇ ಬಾಲಕಿ ಕ್ಯಾನ್ಸರ್ ನಿಂದ ಬಳುತ್ತಿದ್ದಳು. ಈಕೆ ತನ್ನ ಗೆಳೆಯ ಹ್ಯಾರಿಸನ್ ಗ್ರಯರ್ ಎಂಬಾತನ್ನು ಮದುವೆಯಾಗುವ ಕನಸು ಹೊಂದಿದ್ದಳು.

ಚಿಕ್ಕವರಾಗಿದ್ದರೂ ಇಬ್ಬರೂ ಒಬ್ಬರನೊಬ್ಬರು ಮೆಚ್ಚಿಕೊಂಡಿದ್ದರು. ಹ್ಯಾರಿಸನ್ ಕೂಡ ನಾನು ಆಕೆಯನ್ನು ಪ್ರೀತಿಸಿಸುತ್ತಿದ್ದೇನೆ. ಹಾಗೂ ಆಕೆಯನ್ನು ಮದುವೆಯಾಗುವುದಾಗಿ ಹೇಳಿಕೊಳ್ಳುತ್ತಿದ್ದನು ಅಂತಾ ಈಲೀದ್ ತಂದೆ, ತಾಯಿ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ. ಅಲ್ಲದೇ ಈಲೀದ್ ಕೂಡ ಆಸ್ಪತ್ರೆಯಲ್ಲಿ ದಾದಿಯರ ಜೊತೆ ನನಗೆ ಬಾಯ್ ಫ್ರೆಂಡ್ ಇದ್ದಾನೆ. ನಾವಿಬ್ಬರೂ ಮುಂದೊಂದು ದಿನ ಮದುವೆಯಾಗುತ್ತೇವೆ ಅಂತೆಲ್ಲ ಹೇಳುತ್ತಿದ್ದಳು.

ಐದು ವರ್ಷದ ಪುಟ್ಟ ಬಾಲಕಿಗೆ ಕ್ಯಾನ್ಸರ್ ಇದೆ ಎಂದು ವೈದ್ಯರು ಪತ್ತೆ ಮಾಡುವಷ್ಟರಲ್ಲಿ ಅದು ಇಡೀ ದೇಹಕ್ಕೆ ಹರಡಿತ್ತು. ಹೀಗಾಗಿ ಬಾಲಕಿಯ ಪೋಷಕರು ಕೊನೆಯ ಆಸೆ ಏನೆಂಬುವುದನ್ನು ಕೇಳಿದ್ದಾರೆ. ಈ ಬಾಲಕಿ ತನ್ನ ಬಾಯ್ ಫ್ರೆಂಡ್ ಜೊತೆ ಮದುವೆಯಾಗಬೇಕು. ಇದೇ ನನ್ನ ಕೊನೆಯ ಆಸೆಗಳಲ್ಲಿ ಮೊದಲೆನೆಯದು ಎಂದಿದ್ದಾಳೆ. ಅಂತೆಯೇ ಇಬ್ಬರ ಪೋಷಕರೂ ಒಪ್ಪಿ ಅದ್ಧೂರಿಯಾಗಿಯೇ ಈಲೀದ್ ಬಾಯ್ ಫ್ರೆಂಡ್ 6 ವರ್ಷದ ಹ್ಯಾರಿಸನ್ ಜೊತೆ ಮದುವೆ ಮಾಡಿದ್ದಾರೆ. ಸೈಂಟ್ ಕ್ರಿಸ್ಟೋಫರ್‍ನ ನೆಕ್ಲೇಸ್ ಗಳನ್ನು ವಿನಿಮಯ ಮಾಡಿಕೊಂಡು ಇಬ್ಬರೂ ಮದುವೆಯಾಗಿದ್ದಾರೆ. ಮದುವೆಗೆ ಆಗಮಿಸಿದ ಎಲ್ಲರೂ ಪ್ರೀತಿಪೂರ್ವಕವಾಗಿಯೇ ಇಬ್ಬರಿಗೂ ಶುಭಾಶಯ ತಿಳಿಸಿದ್ದಾರೆ.

ಈ ಬಗ್ಗೆ ಈಲೀದ್ ತಂದೆ ಗೈಲ್ ಪತ್ರಿಕೆಯೊಂದಕ್ಕೆ ಮಾತನಾಡಿ, ಮಗಳ ಮದುವೆ ನೋಡಿ ನಿಜಕ್ಕೂ ಒಂದು ಬಾರಿ ಕಣ್ಣೀರು ಬಂತು. ಆದ್ರೆ ಕೂಡಲೇ ನಾನು ಅಳಬಾರದು ಅಂದುಕೊಂಡು ಸುಮ್ಮನಾದೆ. ನನ್ನ ಜೀವನದಲ್ಲಿ ಇದೊಂದು ಅದ್ಭುತ ದಿನವಾಗಿದೆ ಅಂತಾ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *