ಬೆಂಗಳೂರು: ಬೌರಿಂಗ್ ಆಸ್ಫತ್ರೆ ಗೋಡೆ ಕುಸಿದು ದುರಂತ (Bowring Hospital Tragedy) ಸಂಭವಿಸಿದ ವೇಳೆ ನಿಸ್ವಾರ್ಥ ಸೇವೆ ಸಲ್ಲಿಸಿದ ಆಸ್ಪತ್ರೆ ವೈದ್ಯರು ಹಾಗೂ ಶವಾಗಾರ ಸಿಬ್ಬಂದಿಯನ್ನ ಪೊಲೀಸ್ ಇಲಾಖೆ ಸನ್ಮಾನಿಸಿ ಗೌರವಿಸಿದೆ.

ಬೌರಿಂಗ್ ಆಸ್ಪತ್ರೆ ಫೋರೆನ್ಸಿಕ್ ವಿಭಾಗದ (Forensic Department) ಹೆಚ್ಒಡಿ ಡಾ. ಕೆವಿ ಸತೀಶ್ ಹಾಗೂ ವೈದ್ಯರಾದ ಡಾ. ದಿಲೀಪ್, ನಾಗೇಶ್, ಗಿರೀಶ್ ಮತ್ತು ಶವಾಗಾರ ಸಿಬ್ಬಂದಿಯನ್ನ ಗೌರವಿಸಿ ಸನ್ಮಾನಿಸಲಾಗಿದೆ. ಕಬ್ಬನ್ ಪಾರ್ಕ್ ಎಸಿಪಿ ಮತ್ತು ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು (Commercial Street Police) ಸನ್ಮಾನ ನೆರವೇರಿಸಿದ್ದಾರೆ. ಇದನ್ನೂ ಓದಿ: ಬೌರಿಂಗ್ ಆಸ್ಪತ್ರೆಯ ಗೋಡೆ ಕುಸಿದು 7 ಮಂದಿ ಸಾವು – ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ

ಬುಧವಾರ (ಏ.29 ರಂದು) ಸಂಜೆ 6 ಗಂಟೆ ವೇಳೆಗೆ ಗೋಡೆ ಕುಸಿತದಿಂದ ಏಳು ಮಂದಿ ಸಾವನ್ನಪ್ಪಿದ್ದರು. ಬೌರಿಂಗ್ ಆಸ್ಪತ್ರೆಯ ಫೋರೆನ್ಸಿಕ್ ವಿಭಾಗದ ವೈದ್ಯರು ಮತ್ತು ಸಿಬ್ಬಂದಿ ಬೆಳಗಿನ ಜಾವ 5 ಗಂಟೆವರೆಗೂ ಮರಣೋತ್ತರ ಪರೀಕ್ಷೆ ನಡೆಸಿದ್ದರು. ಇಡೀ ರಾತ್ರಿ ವೈದ್ಯರು ಸೇವೆ ಮಾಡಿದ್ದಕ್ಕೆ ಮೃತದೇಹಗಳನ್ನ ಕುಟುಂಬಸ್ಥರಿಗೆ ಶೀಘ್ರವೆ ನೀಡೋದಕ್ಕೆ ಸಹಕಾರಿ ಆಯ್ತು. ಹೀಗಾಗಿ ವೈದ್ಯರ ಸೇವೆಗೆ ಪೊಲೀಸ್ ಇಲಾಖೆ ಇಂದು ಸನ್ಮಾನಿಸಿ ಗೌರವಿಸಿದೆ. ಇದನ್ನೂ ಓದಿ: ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದು ದುರಂತ – ಸಿಎಂ ಸೂಚನೆ ಬೆನ್ನಲ್ಲೇ ಇಬ್ಬರು ಇಂಜಿನಿಯರ್ ಅಮಾನತು

