ಬೆಂಗಳೂರು: ಮೂರು ವರ್ಷದ ಹಿಂದೆ ಕಳುವಾಗಿದ್ದ ಬೈಕ್ಗೆ ದಂಡ ಕಟ್ಟುವಂತೆ ಮಾಲೀಕನಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ.
ದೂರುದಾರ ಟೆಕ್ಕಿ ಅಭಿಷೇಕ್ ಕುಮಾರ್ ಝಾ ಬೆಂಗಳೂರಿನಿಂದ ಬಿಹಾರಕ್ಕೆ ಶಿಫ್ಟ್ ಆಗಿದ್ದರು. ಈ ವೇಳೆ ತನ್ನ ಸುಜುಕಿ ಸ್ವಿಚ್ ಬೈಕ್ನ ಲಾಜಿಸ್ಟಿಕ್ಸ್ ಸೇವೆಗೆ ಒಪ್ಪಿಸಿದ್ದರು. ಆದರೆ, ಅದು ನಿಗದಿ ಜಾಗಕ್ಕೆ ತಲುಪಿರಲಿಲ್ಲ. ನಂತರ ಎಷ್ಟೇ ಹುಡುಕಾಟ ನಡೆಸಿದ್ರೂ ಬೈಕ್ ಪತ್ತೆಯಾಗಿರಲಿಲ್ಲ. ಇದನ್ನೂ ಓದಿ: ಅನೈತಿಕ ಸಂಬಂಧದ ಬಗ್ಗೆ ಪತ್ನಿಯ ಓಪನ್ ಟಾಕ್ – ಬೇಸತ್ತು ನೇಣಿಗೆ ಕೊರಳೊಡ್ಡಿದ ಪತಿ
ಈ ಸಂಬಂಧ ಹೆಚ್ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ, ಕಳೆದ ವಾರ ಬೈಕ್ ಮಾಲೀಕ ದಂಡ ಕಟ್ಟುವಂತೆ ನೋಟಿಸ್ ಬಂದಿದೆ. ಪರಿಶೀಲನೆ ನಡೆಸಿದ ವೇಳೆ ವ್ಯಕ್ತಿಯೊಬ್ಬ ತ್ರಿಬಲ್ ರೈಡಿಂಗ್ ಮಾಡಿದ್ದು, ಹಿಂಬದಿ ಸವಾರರಿಗೆ ಹೆಲ್ಮೆಟ್ ಇಲ್ಲದೇ ಬೈಕ್ ಓಡಿಸಿದ್ದಾನೆ.
ಸದ್ಯ ಟೆಕ್ಕಿ ಅಭಿಷೇಕ್ ಕುಮಾರ್ ಝಾ ಕಳುವಾದ ಸಂಬಂಧ ದಾಖಲೆ ತೆಗೆದುಕೊಂಡು ಬರುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಕೆಆರ್ಎಸ್ನಲ್ಲಿ ಮೀನು ಹಿಡಿಯಲು ಹೋಗಿದ್ದಾಗ ಮಗುಚಿದ ದೋಣಿ – ಯುವಕ ನಾಪತ್ತೆ

